Asianet Suvarna News Asianet Suvarna News

ಇಂದು ಡಬಲ್‌ ಡೆಕ್ಕರ್‌ ತೆರೆದ ಬಸ್‌ಗಳಿಗೆ ಚಾಲನೆ

ಕೆಎಸ್‌ಟಿಡಿಸಿ ವತಿಯಿಂದ ಲಂಡನ್‌ ಮಾದರಿಯಲ್ಲಿ ತಯಾರಾದ ನಿಗಮದ ಪ್ರತಿಷ್ಠಿತ ಡಬಲ್‌ ಡೆಕ್ಕರ್‌ ಬಸ್‌ಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಚಾಲನೆ ನೀಡಲಿದ್ದಾರೆ. 

Double Dekker Bus Service to Launch in Mysuru  snr
Author
Bengaluru, First Published Mar 2, 2021, 1:58 PM IST

 ಮೈಸೂರು (ಮಾ.02): ಕೆಎಸ್‌ಟಿಡಿಸಿ ವತಿಯಿಂದ ಲಂಡನ್‌ ಮಾದರಿಯಲ್ಲಿ ತಯಾರಾದ ನಿಗಮದ ಪ್ರತಿಷ್ಠಿತ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ಇಂದು ಸಂಜೆ 5.30ಕ್ಕೆ ರಾರ‍ಯಡಿಸನ್‌ ಬ್ಲೂ ಹೊಟೇಲ್‌ ಆವರಣದಲ್ಲಿ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿಕೃಷ್ಣ ಉಪಸ್ಥಿತರಿರುತ್ತಾರೆ.

2019-20ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ಮುಖ್ಯಮಂತ್ರಿಯವರು ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್‌ ಬಿಗ್ಬಸ್‌ ಮಾದರಿಯ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌ಗಳನ್ನು ಕೆಎಸ್‌ಟಿಡಿಸಿ ವತಿಯಿಂದ ಕಾರ್ಯಾಚರಣೆಗೊಳಿಸಲು   5 ಕೋಟಿ ರು. ಅನುದಾನವನ್ನು ಹಂಚಿಕೆ ಮಾಡಿರುತ್ತಾರೆ. ಸರ್ಕಾರದ ಈ ಆಶಯದಂತೆ ಲಂಡನ್‌ ಬಿಗ್ಬಸ್‌ ಮಾದರಿಯ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ನಿಗಮವು ಡಬಲ್‌ ಡೆಕ್ಕರ್‌ ಬಸ್ಸುಗಳನ್ನು ನುರಿತ ಸಂಸ್ಥೆಗಳಾದ ಹೊರ ಮೈ ವಿನ್ಯಾಸಗೊಳಿಸಿ ಸಜ್ಜುಗೊಳಿಸಿದ್ದು, ಪ್ರವಾಸ ವೀಕ್ಷಣೆಗೆ ತಯಾರಾಗಿರುತ್ತದೆ.

ಸದರಿ ಬಸ್‌ ಕಾರ್ಯಾಚರಣೆಗೆ ಪ್ರಥಮ ಹಂತವಾಗಿ ಮೈಸೂರು ನಗರದಲ್ಲಿ ಕಾರ್ಯಾಚರಣೆಗೊಳಿಸಲು ಸೂಚಿತ ಮಾರ್ಗಗಳಲ್ಲಿರುವ ಅಡೆತಡೆಗಳನ್ನು ತೆರವುಗೊಳಿಸಿದ್ದು, ಬಸ್‌ಗಳ ಸುಗಮ ಕಾರ್ಯಾಚರಣೆಗೆ ಮಾರ್ಗಗಳು ಸಿದ್ಧವಾಗಿರುತ್ತದೆ.

ಸರ್ಕಾರಿ ಬಸ್‌ಗಳಲ್ಲಿ ಇಂದಿನಿಂದ ಕಾರ್ಗೋ ಸೇವೆ .

ಮೈಸೂರು ನಗರದ ಪ್ರಸ್ತಾಪಿಸಿದ ಮಾರ್ಗಗಳಾದ ಹೋಟೆಲ್‌ ಮಯೂರ ಹೊಯ್ಸಳ- ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್‌ ಹಾಲ್‌, ಕುಕ್ಕರಹಳ್ಳಿಕೆರೆ, ಮೈಸೂರು ವಿವಿ- ಜಾನಪದ ಮ್ಯೂಸಿಯಂ, ರಾಮಸ್ವಾಮಿ ವೃತ್ತ, ಅರಮನೆ ಕರಿಕುಲ್ಲು ತೊಟ್ಟಿ, ಅರಮನೆ (ದಕ್ಷಿಣ ದ್ವಾರ), ಜೈಮಾರ್ತಾಂಡ, ಮೃಗಾಲಯ, ಕಾರಂಜಿಕೆರೆ, ಸಂಗೊಳ್ಳಿ ರಾಯಣ್ಣ ವೃತ್ತ, ಸ್ನೋ ಸಿಟಿ, ಚಾಮುಂಡಿ ವಿಹಾರ್‌ ಕ್ರೀಡಾಂಗಣ, ಸೆಂಟ್‌ ಫಿಲೋಮಿನ ಚಚ್‌ರ್‍, ಬನ್ನಿಮಂಟಪ, ರೈಲು ನಿಲ್ದಾಣ, ಹೋಟೆಲ್‌ ಮಯೂರ ಹೊಯ್ಸಳ ಮಾರ್ಗದಲ್ಲಿ ಪ್ರತಿ ಅರ್ಧ ಗಂಟೆಗೊಂದರಂತೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ಈ ಬಸ್ಸಿನಲ್ಲಿ ಮೈಸೂರು ನಗರ ವೀಕ್ಷಣೆಗೆ ಪ್ರತಿ ಪ್ರವಾಸಿಗರಿಗೆ ಒಂದು ದಿನಕ್ಕೆ  250 ರು. ನಿಗದಿಪಡಿಸಲಾಗಿದ್ದು, ಪ್ರವಾಸಿಗರು ಈ ವಿಶಿಷ್ಟಅನುಭವ ಪಡೆಯಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಕೋರಿದೆ.

Follow Us:
Download App:
  • android
  • ios