Mandya : 'ಮುಂದಿನ ಚುನಾವಣೆಯಲ್ಲಿ ಬಿಜೆಪಿ ಒಂದಂಗಡಿಯೂ ಬಂದ್‌ '

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡಿದರೆ ಅದೇ ದಾಟಿಯಲ್ಲಿ ನಾವೂ ಉತ್ತರಿಸಬೇಕಾಗುತ್ತದೆ. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಟೀಕೆಗೆ ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ ತಿರುಗೇಟು ನೀಡಿದ್ದಾರೆ.

Dont Use light words against HDK  Mahalingegowda snr

  ಮಂಡ್ಯ (ನ.06):  ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡಿದರೆ ಅದೇ ದಾಟಿಯಲ್ಲಿ ನಾವೂ ಉತ್ತರಿಸಬೇಕಾಗುತ್ತದೆ. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಟೀಕೆಗೆ ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ಮಾತೃಹೃದಯಿ, ಭಾವಜೀವಿ. ರೈತರು, ಜನರ ಕಷ್ಟನೋಡಿದರೆ ಮರುಗುವ ಜೀವ. ನಿಮ್ಮಂತೆ ಕಠೋರ ಹೃದಯದವರಲ್ಲ. ಬೊಗಳೆ ಮಾತುಗಳಿಂದ ಜನರನ್ನು ನಂಬಿಸಿ ಮರುಳು ಮಾಡುವವರಲ್ಲ. ನಿಜವಾದ ರೈತಪರ, ಜನಪರ ನಿಲುವನ್ನು ಹೊಂದಿರುವುದರಿಂದಲೇ ಜಿಲ್ಲೆ ಜೆಡಿಎಸ್‌ ಭದ್ರಕೋಟೆಯಾಗಿದೆ ಎಂದು ಮಾರುತ್ತರ ನೀಡಿದ್ದಾರೆ. ಸುಳ್ಳು ಹೇಳಿಕೊಂಡೇ ಬರುತ್ತಾ ಜಿಲ್ಲೆಯನ್ನು ಅಭಿವೃದ್ಧಿ ಶೂನ್ಯದೊಳಗಿಟ್ಟಿರುವ ಬಿಜೆಪಿಗೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಕುಮಾರಸ್ವಾಮಿಯವರು ಸಾಲದ ಸುಳಿಗೆ ಸಿಲುಕಿದ್ದ ರೈತರ ಪರ ನಿಂತು ಸಾಲ ಮನ್ನಾ ಮಾಡಿದರು. ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದವರ ನೆರವಿಗೆ ನಿಂತರು. ನೀರಾವರಿ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿದರು. ಜಿಲ್ಲೆಯ ಅಭಿವೃದ್ಧಿಗೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಾಧನೆ ಏನೆಂಬುದನ್ನು ಮೊದಲು ಹೇಳಲಿ ಎಂದು ಸವಾಲೆಸೆದಿದ್ದಾರೆ.

ಇನ್ನು ಮುಂದೆ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ನಾಲಿಗೆಯನ್ನು ಹರಿಯಬಿಟ್ಟು ಮಾತನಾಡಿದರೆ ನಾವೂ ಅದೇ ಮಾದರಿಯಲ್ಲಿ ಉತ್ತರಿಸಬೇಕಾಗುತ್ತದೆ. ನಿಮಗಿಂತಲೂ ಹರಿತವಾದ ಭಾಷೆಯಲ್ಲಿ ಮಾತನಾಡುವುದಕ್ಕೆ ನಮಗೂ ಬರುತ್ತದೆ. ಆ ರೀತಿ ಮಾತನಾಡುವುದರಿಂದ ಯಾರಿಗೂ ಶೋಭೆ ತರುವುದಿಲ್ಲವೆಂದು ಸುಮ್ಮನಿದ್ದೇವೆ. ಇದನ್ನೇ ನಮ್ಮ ದೌರ್ಬಲ್ಯವೆಂದು ಪರಿಗಣಿಸದಿರುವಂತೆ ತಿಳಿಸಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ನಿಂದ ಗೆಲುವು

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದ ಬಿಜೆಪಿ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಮಾಡಿಕೊಂಡ ಮ್ಯಾಚ್‌ ಫಿಕ್ಸಿಂಗ್‌ನಿಂದ ಗೆಲುವು ಸಾಧ್ಯವಾಯಿತು. ಅದೇನು ದೊಡ್ಡ ಸಾಧನೆಯಲ್ಲ. ಇನ್ನು, ಬಿಜೆಪಿ ನಡೆಸಿದ ಸಮಾವೇಶದಿಂದ ಜೆಡಿಎಸ್‌ಗೆ ಯಾವ ಭಯವೂ ಇಲ್ಲ, ಆತಂಕವೂ ಇಲ್ಲ. ಜಿಲ್ಲೆಯೊಳಗೆ ಜೆಡಿಎಸ್‌ಗೆ ತನ್ನದೇ ಆದ ವೋಟ್‌ಬ್ಯಾಂಕ್‌ ಇದೆ. ದೇವೇಗೌಡರ, ಕುಮಾರಸ್ವಾಮಿ ಪರವಾದ ವರ್ಚಸ್ಸು ಇದೆ. ಅದೇ ನಮ್ಮ ಗೆಲುವಿನ ಶಕ್ತಿಯಾಗಿದೆ. ಮುಂಬರುವ ಚುನಾವಣೆಯಲ್ಲಿ ಈಗ ತೆರೆದಿರುವ ಬಿಜೆಪಿಯ ಒಂದಂಗಡಿಯೂ ಬಂದ್‌ ಆಗಲಿದೆ. ಜೆಡಿಎಸ್‌ ಅಂಗಡಿ ಬಂದ್‌ ಮಾಡುವ ತಾಕತ್ತು ಯಾರಿಗೂ ಇಲ್ಲ ಎಂದು ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ ಸವಾಲು ಹಾಕಿದ್ದಾರೆ.

 ಎಚ್‌ಡಿಕೆ ವಿರುದ್ಧ ಲಘು ಹೇಳಿಕೆ ಸಲ್ಲದು: ಮಹಾಲಿಂಗೇಗೌಡ

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡಿದರೆ ಅದೇ ದಾಟಿಯಲ್ಲಿ ನಾವೂ ಉತ್ತರಿಸಬೇಕಾಗುತ್ತದೆ

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಒಂದಂಗಡಿಯೂ ಬಂದ್‌

ಜಿಲ್ಲೆಗೆ ಬಿಜೆಪಿ ಕೊಡುಗೆ ಏನು ಮೊದಲು ಹೇಳಲಿ: ತಿರುಗೇಟು

ನಿಖಿಲ್ ಸ್ಪರ್ಧೆ ಖಚಿತ 

ರಾಮ​ನ​ಗ​ರ (ಅ.22): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸ್ವತಃ ಕುಮಾರಸ್ವಾಮಿ ಅವರೇ ನಿಖಿಲ್‌ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ. ನಿಖಿಲ್‌ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂಬ ಪುಕಾರುಗಳಿದ್ದರೂ, ಎಲ್ಲಿಂದ ಕಣಕ್ಕಿಳಿಸಬೇಕೆಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರನ್ನು ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಕರೆಯುತ್ತಿದ್ದಾರೆ. ಅಂತಿಮವಾಗಿ ನಿಖಿಲ್‌ ಎಲ್ಲಿಂದ ಸ್ಪರ್ಧಿಸಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. 

ನಾನಂತು ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲ್ಲಿಸಿಕೊಂಡು ಬರುವಂತೆ ನಿಖಿಲ್‌ಗೆ ಸೂಚಿಸಿದ್ದೇನೆ ಎಂದು ರಾಮನಗರ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿ ಶುಕ್ರವಾರ ಪ್ರತಿಕ್ರಿಯಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ನಿಖಿಲ್‌, ಆ ಬಳಿಕ ಜೆಡಿಎಸ್‌ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲ ಸಮಯದಿಂದ ರಾಮನಗರ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳು ಎದ್ದಿದ್ದವು.

8 ಸಾವಿರ ಕೋಟಿ ಕೊಟ್ಟರೂ ಕೃತಜ್ಞರಾಗಲಿಲ್ಲ : ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಬೇಸರ

ರೈತರಿಗೆ ಅನ್ಯಾಯವಾದರೆ ಹೋರಾಟಕ್ಕೆ ಜೆಡಿಎಸ್‌ ಸಿದ್ಧ: ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೆ ಅವರ ಪರ ಹೋರಾಟಕ್ಕೆ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಸದಾ ಸಿದ್ಧವಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆ ಮಾರುಕಟ್ಟೆಆವರಣದಲ್ಲಿ ನಡೆದ ರೈತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

Latest Videos
Follow Us:
Download App:
  • android
  • ios