ಎಸ್ಟಿಮೆಂಟ್, ವರ್ಕ್ ಆರ್ಡರ್ ಇಲ್ಲದೇ ಕಾಮಗಾರಿ: ಧಾರವಾಡ ಜಿಲ್ಲೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ
* ವರ್ಕ್ ಆರ್ಡರ್ ಇಲ್ಲದೆ ಹೆಚ್ಚುವರಿ ಕೆಲಸ ಮಾಡಿಸಿದ್ಯಾರು..?
* ಪಂಚಾಯತಗಳಲ್ಲಿ ಪಿಡಿಓ, ಸದಸ್ಯರುಗಳೆ ಮಾಡಿದ್ದೆ ದರ್ಬಾರ್,
* ಧಾರವಾಡ ಜಿಲ್ಲೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಹಿರಿಯ ಅಧಿಕಾರಿಗಳು ಮೌನ
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ, (ಜುಲೈ.12): ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ್ರೂ ಅಧಿಕಾರಿಗಳು ಎಚ್ಚೆತ್ತುಕ್ಕೊಳ್ಳದೇ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಅನುದಾನ, ಶಾಸಕರ ಅನುದಾನಗಳಿಂದ ಯಾವುದೇ ಎಸ್ಟಿಮೆಂಟ್, ವರ್ಕ್ ಆರ್ಡರ್ ಇಲ್ಲದೇ ಹೆಚ್ಚುವರಿಯಾಗಿ ಸಿಸಿ ರಸ್ತೆ ಗಟಾರು ನಿರ್ಮಾಣ ಮಾಡುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳತಿದ್ದಾರೆ ಎಂದು ಅಮ್ಮಿನಭಾವಿ ಗ್ರಾಮ ಪಂಚಾಯತಿ ಸದಸ್ಯ ಸಿದ್ದು ಪಿಡಿಓ ಮತ್ತು ಅಧಿಕಾರಿಗಳ ಮೇಲೆ ಆರೋಪವನ್ನ ಮಾಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಅಧಿಕಾರಿಗಳು ಮಾಡಿದ್ದೆ ದರ್ಬಾರ ಆಗಿದೆ. ಯಾಕೆಂದ್ರೆ ಹೇಳೋರಿಲ್ಲ ,ಕೇಳೋರಿಲ್ಲ, ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತನ 14 ಮತ್ತು 15 ನೇಯ ಹಣಕಾಸಿನಲ್ಲಿ ಗ್ರಾಮ ಪಂಚಾಯತಿ ಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ.ಆದರೆ ಅಧಿಕಾರಿಗಳು ಮಾತ್ರ ಅಭಿವೃದ್ಧಿ ಹೇಸರಲ್ಲಿ ಪಿಡಿಓ ಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ ಅದಕ್ಕೆ ನಿದರ್ಶನ ಅನ್ನುವ ಹಾಗೆ ಇಲ್ಲೊಂದು ತಾಜಾ ಉದಾಹರಣೆ ಇದೆ..
Dharwad: ಮುಂಗಾರು ಬೆಳೆಗಳ ನಿರ್ವಹಣೆಯಲ್ಲಿ ರೈತರಿಗೆ ಸೂಕ್ತ ಸಲಹೆಗಳು
ಗುತ್ತಿಗೆದಾರರು ಮಾಡಿರುವ ಕೆಲಸಗಳಿಗೆ ಸರಕಾರದಿಂದ ಬಿಲ್‌ಗಳು ಪಾವತಿ ಯಾಗುತ್ತಿಲ್ಲ, ಆದರೆ ಅಂತದರಲ್ಲಿ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ವಾರ್ಡ ನಂಬರ್ 12 ರಲ್ಲಿ ಎಸ್ ಸಿ ಎಸ್ ಟಿ ಕಾಲೋನಿಯಲ್ಲಿ ಬಾಗಮ್ಮಾ ಭೋವಿ ಅವರ ಮನೆಯಿಂದ ಬಸವರಾಜ ಭೋವಿ ಅವರ ಮನೆಗೆ 31 ಮೀಟರ್ ಸಿಸಿ ರಸ್ತೆಗೆ 2 ಲಕ್ಷ ಅನುದಾನ ಜಿಲ್ಲಾ ಪಂಚಾಯತ ನಿಂದ ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರ, ವಾರ್ಡ ಸದಸ್ಯ ಮತ್ತು ಪಿಡಿಓ ಹೊಂದಾಣಿಕೆಯ ಮೆಲೆ ಯಾವುದೆ ವರ್ಕ ಆರ್ಡರ ಇಲ್ಲದೆ ಮತ್ತೆ ನೂರು ಮೀಟರ್ ಅಂದ್ರೆ 6 ರಿಂದ 7 ಲಕ್ಷದ ಕಾಮಗಾರಿಯನ್ನ ಹೆಚ್ಚವರಿಯಾಗಿ ನಿರ್ಮಾಣ ಮಾಡಿದ್ದಾರೆ..
ಯಾವುದೆ ವರ್ಕ ಆರ್ಡರ್ , ಮತ್ತು ಎಸ್ಟಿಮೇಟ್ ಇಲ್ಲದೆ ಕೆಲಸಗಳನ್ನ ಮಾಡುವಂತಿಲ್ಲ ಆದರೆ ಅಮ್ಮಿನಭಾವಿ ಗ್ರಾಮ ಪಂಚಾಯತಿ ಯಲ್ಲಿ ಪಿಡಿಓ, ಸದಸ್ಯರುಗಳು ಮಾಡಿದ್ದೆ ದರ್ಬಾರ, ಹೇಳೋರಿಲ್ಲ ಕೇಳೋರಿಲ್ಲ, ಎಇಇ ಸೋಮರ್ದರ್ ಅವರನ್ನ ಕೇಳಿದರೆ ನಾವು ಹೇಳಿಲ್ಲ ಅಂತ ಹೇಳುತ್ತಾರೆ..ಆದರೆ ಅವರಿಗೆ ಹೆಚ್ಚವರಿ ಕೆಲಸ ಮಾಡಲು ಸೂಚನೆ ಕೊಟ್ಡವರಾರು ಎಂದು ಸದಸ್ಯ ಸಿದ್ದು ಹಿರಿಯ ಅಧಿಕಾರಿಗಳ ಮೇಲೆ ಆಕ್ರೋಶವನ್ನ ಹೊರ ಹಾಕಿದರು.
ಇನ್ನು ಈ ಕುರಿತು ಜಿಲ್ಲಾ ಪಂಚಾಯತ ಸೀಇಓ ಅವರಿಗೆ ಕೇಳಿದರೆ ಯಾವುದೆ ಹೆಚ್ಚುವರಿ ಕೆಲಸ ಮಾಡಲು ಬರುವುದಿಲ್ಲ, ಯಾರು, ಹೆಚ್ಚವರಿ ಕೆಲಸ ಮಾಡಲು ಅವಕಾಶ ಇಲ್ಲ, ಟೆಂಡರ್, ವರ್ಕ ಆರ್ಡರ್ , ಎಸ್ಡಿಮೇಟ್ ಇಲ್ಲದೆ ಯಾರು ಕೆಲಸವನ್ನ ಮಾಡಲು ಬರುವುದಿಲ್ಲ, ನನ್ನ ಗಮನಕ್ಕೆ ನೀವು ತಂದಿದ್ದಿರಿ..ನಾನು ಈ ಕುರಿತು ಪಿಡಿಓ ಮತ್ತು ಅಧಿಕಾರಿಗಳನ್ನ ಕರಿಸಿ ಮಾಹಿತಿ ಪಡೆದುಕ್ಕೊಂಡು ಬಿಲ್ ಆಗದಂಗೆ ನೋಡಿಕ್ಕೊಳ್ಳುತ್ತೇನೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರು ಸುವರ್ಣ ನ್ಯೂಸ್ ಗೆ ಹೇಳಿದರು.