ಮಂಗಳೂರು(ಫೆ.16): ನಗರದ ಕದ್ರಿ ಪಾರ್ಕ್ ಬಳಿಯ ಜ್ಯೂಸ್‌ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿಯೊಂದು ಜ್ಯೂಸ್‌ಗೆ ಬಳಸುವ ಮಂಜುಗಡ್ಡೆ ನೆಕ್ಕುವ ವಿಡಿಯೊವೊಂದನ್ನು ಕಿಡಿಗೇಡಿಗಳು ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಇದು ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್‌ ಅಂಗಡಿಗಳಲ್ಲಿ ನಡೆದ ಪ್ರಕರಣ ಅಲ್ಲ ಎಂದು ಖಚಿತಪಡಿಸಿದ್ದಾರೆ. ಆದ್ದರಿಂದ ಸುಳ್ಳು ವಿಡಿಯೊ ವೈರಲ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ನಗರ ಕೇಂದ್ರ ವಿಭಾಗದ ಎಸಿಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಿಬಿಎಂಪಿಯಿಂದ 4.15 ಕೋಟಿ ವರ್ಗ: ನಕಲಿ ಖಾತೆ ಯಾರದ್ದು..?

ಸುಳ್ಳು ವಿಡಿಯೊ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್‌ ಸ್ಟಾಲ್‌ಗಳಲ್ಲಿ ಜ್ಯೂಸ್‌ ಕುಡಿಯಬಾರದೆಂದು ಹೇಳಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಕೆಲವು ವಿಘ್ನ ಸಂತೋಷಿಗಳು ಮಾಡಿದ್ದಾರೆ. ಈ ಹುನ್ನಾರ ತೀವ್ರ ಖಂಡನೀಯ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್‌ ನೇತೃತ್ವದಲ್ಲಿ ಕದ್ರಿ ಪಾರ್ಕ್ ಜ್ಯೂಸ್‌ ಅಂಗಡಿದಾರರ ನಿಯೋಗ ಒತ್ತಾಯಿಸಿತು.

ಈ ವರ್ಷ ವಿಜಯದಶಮಿಗೆ ಮಕ್ಕಳಿಗೆ ರಜೆ ಇಲ್ಲ..!

ನಿಯೋಗದಲ್ಲಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್‌ ಮುಸ್ತಫಾ, ಕಾರ್ಯದರ್ಶಿ ಹರೀಶ್‌ ಪೂಜಾರಿ, ಮುಖಂಡರಾದ ಆದಮ್‌ ಬಜಾಲ…, ಆಸೀಫ್‌ ಬಾವು, ಸಿ.ಎಸ್‌. ಶಂಕರ್‌, ಕದ್ರಿ ಜ್ಯೂಸ್‌ ಮಾರಾಟಗಾರರ ಪ್ರತಿನಿಧಿಗಳಾದ ಕ್ಲೋಡಿ ಡಿಸೋಜಾ, ವಿಶ್ವನಾಥ್‌ ಶೆಟ್ಟಿ, ಅಬೂಬಕ್ಕರ್‌, ಬ್ರಹ್ಮಪುತ್ರ, ವಿಶ್ವನಾಥ್‌ ಪೂಜಾರಿ, ಧರ್ಮರಾಜ್‌ ಇದ್ದರು.