ಮಂಗಳೂರು(ಸೆ.04): ಅಪರೂಪದ ಅಳಿವಿನಂಚಿನ ಸೀಳುನಾಯಿಯು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯವಾಗಿವೆ.

ಸಂದರ್ಶಕರಿಗೆ ತಾಯಿ ಸೀಳುನಾಯಿ ಮತ್ತು ಮರಿಗಳನ್ನು ನೋಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸೀಳುನಾಯಿಯನ್ನು ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾಗಿತ್ತು. ಇದೀಗ ಮರಿ ಹಾಕಿದ ಸಂಭ್ರಮದಲ್ಲಿದೆ. ಮರಿಗಳೊಂದಿಗೆ ಉದ್ಯಾನವನದ ತನ್ನ ವ್ಯಾಪ್ತಿಯಲ್ಲಿ ಸಂಚರಿಸುತ್ತ ಗಮನ ಸೆಳೆಯುತ್ತಿದೆ.

ನಾಗರಿಕರ ಮೊಬೈಲ್‌ಗೆ ನೇರ ಪೊಲೀಸ್‌ ಸಂದೇಶ!

ಪ್ರಾಣಿ ವಿನಿಮಯ:

ತಿರುವನಂತಪುರಂ ಮೃಗಾಲಯದಿಂದ ರಿಯಾ ಪಕ್ಷಿ ಹಾಗೂ ತಿರುಪತಿ ಮೃಗಾಲಯದಿಂದ ಬಿಳಿ ಹುಲಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ತಿಳಿಸಿದ್ದಾರೆ.