ಹಸುವಿನ ಹೊಟ್ಟೆಯಲ್ಲಿತ್ತು 15 ಕೆಜಿ ಪ್ಲಾಸ್ಟಿಕ್: ಪಶು ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಎರಡು ವರ್ಷಗಳಿಂದ ಸುಮಾರು 15 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಳಲುತ್ತಿದ್ದ ಹಸುವೊಂದಕ್ಕೆ ನಗರದಲ್ಲಿ ಪಶು ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.

Doctors removed 15 kg of plastic from cows stomach after surgery at kolar rav

ಕೋಲಾರ (ಏ.17) : ಎರಡು ವರ್ಷಗಳಿಂದ ಸುಮಾರು 15 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಳಲುತ್ತಿದ್ದ ಹಸುವೊಂದಕ್ಕೆ ನಗರದಲ್ಲಿ ಪಶು ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.

ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎಫ್‌ ತಳಿಯ ಹಸುವೊಂದು ದಿಢೀರನೇ ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿಯನ್ನು ಕಡಿಮೆ ಮಾಡಿತ್ತು. ಮಾಲೀಕ ಹಸುವಿಗೆ ಸಾಕಷ್ಟುಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಿರಲಿಲ್ಲ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ಹಸುವಿನ ನೆರವಿಗೆ ಬಂದವರು ಪಶು ಶಸ್ತ್ರಚಿಕಿತ್ಸಕ ಡಾ.ರಾಹುಲ್‌ ಮತ್ತು ಪಶು ವೈದ್ಯಾಧಿಕಾರಿ ಡಾ.ರಘುನಾಥ್‌. ಅವರು ಹಸುಗೆ ಶಶತ್ರ ಚಿಕಿತ್ಸೆ ಮಾಡುವ ಮೂಲಕ ಪ್ಲಾಸ್ಟಿಕ್‌ ಹೊರತೆಗೆದ ಹಸು ಪ್ರಾಣ ಉಳಿಸಿದ್ದಾರೆ.

ಹಸುಗಳ ಸಾವಿಗೆ ಕಾರಣವಾಯ್ತಾ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ

ಹಸುಗಳಿಗೆ ಮೇವು ತಿನ್ನಲು ಹೊರಗೆ ಬಿಡುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ಹೊಟ್ಟೆಸೇರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬ ಹಸು ಸಾಕಾಣಿಕೆದಾರರ ಜವಾಬ್ದಾರಿಯಾಗಬೇಕು, ಇಲ್ಲವಾದರೆ ಲಕ್ಷಾಂತರ ರುಪಾಯಿ ಮೌಲ್ಯದ ಉತ್ತಮ ತಳಿಯ ರಾಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪಶು ಶಸ್ತ್ರಚಿಕಿತ್ಸಕ ಡಾ.ರಾಹುಲ್‌ ಮತ್ತು ಡಾ.ರಘುನಾಥ್‌ ಪಶು ಸಾಕಾಣಿಕೆದಾರರಿಗೆ ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios