ತುಮಕೂರು, [ಜ.03]:  'ನಡೆದಾಡುವ ದೇವರು' ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶ್ವಾಸಕೋಶದಲ್ಲಿ ಪದೇ-ಪದೇ  ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಚೆನ್ನೈನ ರೇಲಾ ಆಸ್ಪತ್ರೆಯ ಸೋಂಕು ತಜ್ಞರನ್ನು ಕರೆಸಲಾಗಿದೆ.

ಶ್ರೀಗಳ ಶ್ವಾಸಕೋಶದಲ್ಲಿ ಉಂಟಾಗಿರುವ ಸೋಂಕು ತಪಾಸಣೆ ಮಾಡಲು ಸಿದ್ದಗಂಗಾ ಮಠಕ್ಕೆ ಚೆನ್ನೈನ ರೇಲಾ ಆಸ್ಪತ್ರೆಯ ಡಾ. ಸುಬ್ರ ಆಗಮಿಸಿದ್ದು,  ಶ್ರಿಗಳ ಆರೋಗ್ಯ ತಪಾಸಣೆ ಮಾಡಿದರು. 

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ; ಭಕ್ತರು ಆತಂಕಗೊಳ್ಳಬೇಕಿಲ್ಲ: ಕಿರಿಯ ಶ್ರೀ

ಆರೋಗ್ಯ ತಪಾಸಣೆ ಬಳಿಕ ಪ್ರತಿಕ್ರಿಯಿಸಿರುವ ಡಾ.ಸುಬ್ರ, ಸ್ವಾಮೀಜಿ ಆರೋಗ್ಯ ಸುಧಾರಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶ್ವಾಸಕೋಶದ ಸೋಂಕು ನಿವಾರಣೆಯಾಗುತ್ತಿದೆ‌.  ಶ್ರೀಗಳಿಗೆ ವಯಸ್ಸಾಗಿರುವುದರಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 

ಅವರ ಶ್ವಾಸಕೋಶ ಚೆನ್ನಾಗಿ ಕೆಲಸ ಮಾಡುತ್ತಿದೆ.  ಅವರ ಆರೋಗ್ಯ ಸುಧಾರಿಸಲೇಂದು ನಾವು ದೇವರಲ್ಲಿ ಪ್ರಾರ್ಥಿಸಬೇಕು. ಶ್ರೀಗಳು ಎಷ್ಟು ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ ಎಂದರು.

ಡಾ. ಸುಬ್ರಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ. ರವೀಂದ್ರ ಸಾಥ್ ನೀಡಿದರು. ಈ ಹಿಂದೆ ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ಕರೆದೊಯ್ದು ಚಿಕ್ಕ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು.