ಗದಗ(ಫೆ.28): ಪೌರತ್ವ ಕಾಯ್ದೆ ವಿಚಾರದಲ್ಲಿ ನಡೆದ ಗಲಭೆ, ಹಿಂಸಾಚಾರದ ಹಿಂದೆ ಕಾಂಗ್ರೆಸ್ ‌ಮಾಸ್ಟರ್ ಮೈಂಡ್ ಇದೆ‌. ಮಂಗಳೂರು ಹಾಗೂ ದೆಹಲಿ ಗಲಭೆಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಗಂಭೀರವಾಗಿ ಆರೋಪ ಮಾಡಿದ್ದಾರೆ. 

ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಸ್‌ಡಿಪಿಐ ಹಾಗೂ ಪಿಎಫ್ಐ ಶ್ರೇಷ್ಠ ಮೌಲ್ವಿಯನ್ನು ಕೊಲೆ ಮಾಡುವವರಿಗೂ ಹೋಗಿದ್ದಾರೆ. ಗಲಭೆ ಹಿಂದೆ ಈ ಸಂಘಟನೆಗಳು ಇರೋದು ಪೊಲೀಸ್ ಇಲಾಖೆಯಿಂದ ಬಹಿರಂಗವಾಗಿದೆ. ಗಲಭೆಯ ಹಿಂದೆ ಸಂಘಟನೆಗಳು ಹಾಗೂ ಕಾಂಗ್ರೆಸ್ ಕೈವಾಡಿದೆ. ಹೀಗಾಗಿ ಇಂತಹ ಸಂಘಟನೆಗಳು ನಿಷೇಧವಾಗಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೆಹಲಿಯಲ್ಲಿ ಎರಡು ತಿಂಗಳಿಂದ ಹೋರಾಟ ನಡೆದಿವೆ ಗಲಭೆಗಳು ಆಗಿರಲಿಲ್ಲ, ಆದ್ರೆ ಅಮೆರಿಕ ಅಧ್ಯಕ್ಷ ಟ್ರಂಪ್ ಬರುವ ವೇಳೆ ಗಲಭೆ ಯಾಕೇ ಜೋರಾಯಿತು. ಶಾಂತಿಯುತ ಪ್ರತಿಭಟನೆ ಮಾಡುವವರ ಮಧ್ಯೆ ಹೇಗೆ ಪಿಸ್ತೂಲ್, ಕಲ್ಲುಗಳು, ಬೆಂಕಿ ಉಂಡೆಗಳು, ಶಸ್ತ್ರಾಸ್ತ್ರಗಳು ಬಂದವು. ಇದರ ಹಿಂದೆ ಕಾಂಗ್ರೆಸ್‌ನ ಮಾಸ್ಟರ್ ಮೈಂಡ್ ಇದೆ ಎಂದು ಆರೋಪಿಸಿದ್ದಾರೆ.

ಪೌರತ್ವ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ಹೀಗಾಗಿ ಕಾಂಗ್ರೆಸ್‌ಗೆ ಬೀದಿಗೆ ಇಳಿದು ಗಲಿಭೆ ಮಾಡಲು ಅವಕಾಶ ಇಲ್ಲಾ. ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಕಾರಣಗಳು ಸಿಕ್ಕಿಲ್ಲ. ಜಮ್ಮು ಕಾಶ್ಮೀರ ಹಾಗೂ ಅಯೋಧ್ಯೆ ವಿಷಯದಲ್ಲಿ ಜನತೆ ದೇಶದ ಪರವಾಗಿ ನಿಂತರು. ಪೌರತ್ವ ಕಾಯ್ದೆ ತಿದ್ದು ಪಡೆ ಬಂದಾಗ ಅದನ್ನು ಸುಳ್ಳು ಅಪ ಪ್ರಚಾರ ಮಾಡುವ ಮುಖಾಂತರ ರಾಜಕೀಯ ಬೇಳೆ  ಬೇಯಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಬೆಂಕಿ ಹಾಕಿರೋದು ಈ ರಾಷ್ಟ್ರದ ವಸ್ತುವಿಗೆ ಅಲ್ಲಾ, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಯೋಚನೆಗಳಿಗೆ ಬೆಂಕಿ ಹಾಕಿದ್ದಂತಾಗಿದೆ. ಕಾಂಗ್ರೆಸ್ ಬೆಂಕಿ ಹಾಕಿರೋದು ಕಾಂಗ್ರೆಸ್‌ನ ವಿಚಾರಧಾರೆಗಳಿಗೆ ಎಂದಿದ್ದಾರೆ.

ಪಾಕ್ತಿಸಾನದಿಂದ ಬಂದ ಅಲ್ಪಸಂಖ್ಯಾತರಿಗೆ ಮೊದಲ ಪೌರತ್ವ ನೀಡಬೇಕು ಅಂತ ಗಾಂಧೀಜಿ ಹೇಳಿದ್ದರು. ಅದನ್ನು ಕಾಂಗ್ರೆಸ್ ಮಾಡಿಲ್ಲಿಲ್ಲಾ, ಅಂದು ಬಾಂಗ್ಲಾದೇಶದಿಂದ ಬಂದವರಿಗೆ ಪೌರತ್ವ ನೀಡಬೇಕು ಅಂತ ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅದಕ್ಕೂ ಸಹ ಕಾಂಗ್ರೆಸ್ ನ್ಯಾಯ ಕೊಟ್ಟಿಲ್ಲಾ. 2002 ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ಮನಮೋಹನ ಸಿಂಗ್ ಒತ್ತಿ ಒತ್ತಿ ಹೇಳಿದ್ದರು. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಮನಮೋಹನ ಸಿಂಗ್ ಅವರ ವಿಚಾರಧಾರೆಗಳಿಗೆ ಮನ್ನಣೆ ನೀಡಿದ್ದು ಮಾತ್ರ ಮೋದಿ ಸರ್ಕಾರ. ಈ ಮೂವರು ನಾಯಕರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.