ಪಾರ್ಟಿ ಮುಗಿಸಿದ ಬಳಿಕ ಕೆರೆಯಲ್ಲಿ ಈಜಲು ಹೋದ ವೈದ್ಯ ನಾಪತ್ತೆ

ಆತ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ. ನಿನ್ನೆ(ಸೆ.12) ತನ್ನ ಇಬ್ಬರು ಸಹದ್ಯೋಗಿಗಳ ಜೊತೆ ಪಾರ್ಟಿ ಗೆ ಅಂತ ಒಂದೇ ಬೈಕ್ ನಲ್ಲಿ ಕೆರೆಯ ಬಳಿ ಹೋಗಿದ್ದ. ಕೆರೆಯ ಸೌಂದರ್ಯ ಕಂಡು ಈಜಲು ಮುಂದಾಗಿದ್ದಾನೆ. ಆದರೆ ಈಜು ಬಾರದೇ ನೀರು ಪಾಲಾಗಿದ್ದು, ನಾಪತ್ತೆಯಾಗಿರೋ ವೈದ್ಯನಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

Doctor drowned In Lake After Party With Friends  at kanakpura Taluk rbj

ರಾಮನಗರ, (ಸೆಪ್ಟೆಂಬರ್.13): ತನ್ನ ಸಹದೋಗ್ಯಿಗಳ ಜೊತೆ ಪಾರ್ಟಿ ಮಾಡಲು ಎಂದು ಹೋಗಿ ಆನಂತರ ಕೆರೆಯಲ್ಲಿ ಈಜಲು ಹೋಗಿದ್ದ ವೈದ್ಯನೊಬ್ಬ ನಾಪತ್ತೆಯಾಗಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ನಡೆದಿದೆ. 

ಅಂದಹಾಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಇರುವ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನ ವೈದ್ಯ ಸಚಿನ್ ಕುಮಾರ್ ನಾಪತ್ತೆಯಾದವರು.

 ಅಂದಹಾಗೆ ಬಾದಾಮಿ ಮೂಲದ ಸಚಿನ್ ಕೆಲ ವರ್ಷದಿಂದ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ನಿನ್(ಸೋಮವಾರ) ತನ್ನ ಸಹದ್ಯೋಗಿಗಳಾದ ಡಾ. ಜಾವೀದ್ ಅಹಮದ್ ಹಾಗೂ ಡಾ.ನಿರಂಜನ್ ಎಂಬುವವರ ಜೊತೆ ಒಂದೇ ಬೈಕ್ ನಲ್ಲಿ ಪಾರ್ಟಿ ಮಾಡೋಕೆ ಅಂತಾ ಮಾವತ್ತೂರು ಕೆರೆಯ ಬಳಿ ಹೋಗಿದ್ದಾರೆ. 

ಚಿತ್ರದುರ್ಗ: ಸೇತುವೆ ದಾಟುವ ವೇಳೆ ಇಬ್ಬರು ಯುವಕರು ನೀರುಪಾಲು

ಈ ವೇಳೆ ಕೆರೆಯಲ್ಲಿ ಈಜು ಹೊಡೆಲು ಸಚಿನ್ ಮುಂದಾಗಿದ್ದಾನೆ. ಆದರೆ ನೀರಿನ ಸೆಳತಕ್ಕೆ ಸಚಿನ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆನಂತರ ಇಬ್ಬರು ಸ್ನೇಹಿತರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.    ಅಂದಹಾಗೆ ರಾಮನಗರ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಧಾರಕಾರ ಮಳೆಯಾಗುತ್ತಿರುವುದರಿಂದ ಮಾವತ್ತೂರು ಕೆರೆ ಹಲವು ವರ್ಷಗಳ ನಂತರ ತುಂಬಿ ಕೋಡಿ ಸಹಾ ಬಿದ್ದಿದೆ. ಹೀಗಾಗಿ ಸಾಕಷ್ಟು ಜನ ಕೆರೆ ವೀಕ್ಷಣೆಗೆಂದು ಬರುತ್ತಾರೆ.ಆದರೆ ಕೆರೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೇ ಈಜುಲು ಮುಂದಾಗುತ್ತಾರೆ.

ಈ ವೇಳೆ ನೀರಿನ ರಭಸಕ್ಕೆ ಕೊಚ್ಚು ಹೋಗುತ್ತಾರೆ. ಇನ್ನು ಘಟನೆ ನಂತರ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂಧಿ ಹಾಗೂ ಸ್ಥಳೀಯರು ಕೆರೆಯಲ್ಲಿ ಹುಡುಕಾಟ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಡಾ. ಸಚಿನ್ ಪತ್ತೆಯಾಗಿಲ್ಲ.  

ಒಟ್ಟಾರೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಎಂದು ಹೋಗಿದ್ದವನು ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರೋ ವೈದ್ಯನಿಗೆ ಹುಡುಕಾಟ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios