ಮಂಡ್ಯ(ನ.25): ಕೆ. ಆರ್. ಪೇಟೆ ಉಪಚುನಾವಣೆ ಸಮೀಪಿಸುತ್ತಿದ್ದು, ಸೋಮವಾರ ಮಂಡ್ಯದ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದಾರೆ.

ತವರಲ್ಲಿಂದು ಸಿಎಂ ಅಬ್ಬರ ನಡೆಯಲಿದ್ದು, ಕೆ. ಆರ್. ಪೇಟೆಗೆ ಸಿಎಂ ಬಿಎಸ್‌ವೈ ಆಗಮಿಸಲಿದ್ದಾರೆ. ಹುಟ್ಟೂರಿನ ಜನರಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿರುವ ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಮತಬೇಟೆ ನಡೆಸಲಿದ್ದಾರೆ.

'ಓಟ್‌ಗಾಗಿ ಮೂಗುತಿ, ಸೀರೆ ಹಂಚಿಕೆ, ಬಿಜೆಪಿ ಶಾಲು ಹಾಕ್ಕೊಂಡ್ರೂ ಹಣ'..!

ಕೆ. ಆರ್. ಪೇಟೆ ಕ್ಷೇತ್ರದ ಎರಡು ಕಡೆಗಳಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ. 3 ಪಂಚಾಯಿತಿಗಳನ್ನು ಒಳಗೊಂಡಂತೆ ಎರಡು ಸ್ಥಳಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ಕಿಕ್ಕೇರಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಬಳಿಕ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಸಭೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.

ನಿಖಿಲ್ ಕುಮಾರಸ್ವಾಮಿ ಪ್ರಚಾರ:

ಕೆ. ಆರ್. ಪೇಟೆ ಉಪ‌‌‌ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಪರ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ‌ 12 ಗಂಟೆ ಸುಮಾರಿಗೆ ಕೆ. ಆರ್. ಪೇಟೆಯ ಕಸಬ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದು, ನಿಖಿಲ್‌ಗೆ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರ ಜಿಲ್ಲೆಯ ಮುಖಂಡರಿಂದಲೇ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಪರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸಲಿದ್ದು, ಅಕ್ಕಿ ಹೆಬ್ಬಾಳು ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಯಲಿದೆ.

ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಕೆ ಕುಮಾರಸ್ವಾಮಿ