Asianet Suvarna News Asianet Suvarna News

Holi Festival: ದೇಶದಲ್ಲೇ ಬಾಗಲಕೋಟೆ ಹೋಳಿ ಹಬ್ಬ ಫೇಮಸ್ ಯಾಕೆ ಗೊತ್ತಾ?

* ಅಜ್ಜಿಯರ ಕೈಯಲ್ಲಿ ಹೊರ ಹೊಮ್ಮಿದ ಭಜ೯ರಿ ಹಲಗೆ ನಾದ. ಅಜ್ಜಿಯರ ಸಖತ್ ಸ್ಟೆಪ್.
* ಬಾಯಿ ಬಾಯಿ ಬಡಿದುಕೊಳ್ಳುತ್ತಾ ಬಣ್ಣದಾಟದಲ್ಲಿ ಮಿಂದೆದ್ದ ಹುಡುಗಿಯರು.
* ರೇನ್ ಡಾನ್ಸ್‌ನಲ್ಲಿನ ಸೆಳೆದ ಯುವಕರು, ಮಕ್ಕಳು, ವಯೋವೃದ್ಧರು.

Do You know why Bagalkote Holi Festival Famous in the country gvd
Author
Bangalore, First Published Mar 18, 2022, 6:00 PM IST

ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ 

ಬಾಗಲಕೋಟೆ (ಮಾ.18): ಸಾಮಾನ್ಯವಾಗಿ ನಾಡಿನಲ್ಲಿ ಸಾಂಪ್ರದಾಯಿಕ ಹೋಳಿ ಹಬ್ಬ (Holi Festival) ಬಂದ್ರೆ ಸಾಕು ಥಟ್ಟನೆ ನೆನಪಾಗುವುದು ಉತ್ತರ ಕರ್ನಾಟಕದ ಬಾಗಲಕೋಟೆ (Bagalkote) ಹೋಳಿ ಹಬ್ಬ. ಹೌದು, ಬಾಗಲಕೋಟೆ ಹೋಳಿ ಹಬ್ಬ ಕೇವಲ ರಾಜ್ಯದಲ್ಲಿ (Karnataka) ಅಷ್ಟೇ ಅಲ್ಲ, ಇಡೀ ದೇಶದಲ್ಲೇ ಬಾಗಲಕೋಟೆ ಹೋಳಿ ಹಬ್ಬ ಅಂದ್ರೆ ಫೇಮಸ್. ಭಾರತ ದೇಶದಲ್ಲಿ ಕೊಲ್ಕತ್ತಾ ನಗರವನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಹೋಳಿಯಾಡುವ ನಗರ ಎಂಬ ಖ್ಯಾತಿಯನ್ನ ಹೊಂದಿರುವುದು ಈ ಬಾಗಲಕೋಟೆ ನಗರ. ಸತತ 5 ದಿನಗಳ ಹೋಳಿ ಹಬ್ಬದ ಆಚರಣೆ ಇಲ್ಲಿನ ವಿಶೇಷ. 

Do You know why Bagalkote Holi Festival Famous in the country gvd

ಆಧುನಿಕತೆಯ ನಾಗಾಲೋಟದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತವಾಗುವ ಮೂಲಕ ಮುಳುಗಡೆ ನಗರಿ ಎಂಬ ಹಣೆ ಪಟ್ಟಿ ಹೊತ್ತುಕೊಂಡು ಮೂಲ ಬಾಗಲಕೋಟೆ ನಗರ ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ಹೀಗೆ ಮೂರು ಹಂತಗಳಲ್ಲಿ ವಿಂಗಡಣೆಯಾಗಿದ್ದರೂ ಸಾಂಪ್ರದಾಯಿಕ ಹೋಳಿ ಹಬ್ಬದ ರಂಗು ಮಾತ್ರ ಕುಗ್ಗಿಲ್ಲ. ಎಲ್ಲೆಲ್ಲೂ ಹೋಳಿ ಹಬ್ಬದ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಕಾಮದಹನ, ಬಣ್ಣದಾಟ, ಸೋಗಿನ ಬಂಡಿಗಳ ಭರಾಟೆ ಸೇರಿ ನಿರಂತರ 5 ದಿನಗಳವರೆಗೆ ಬಾಗಲಕೋಟೆ ಹೋಳಿ ಬಣ್ಣದಾಟದಲ್ಲಿ ಮಿಂದೇಳುತ್ತಿದೆ.

ಇಂದಿನಿಂದ ಶುರುವಾಯ್ತು 3 ದಿನಗಳ ಬಣ್ಣದ ಬಂಡಿಗಳಾಟ
Do You know why Bagalkote Holi Festival Famous in the country gvd

ಕಳೆದ ಎರಡು ದಿನಗಳಿಂದ ಕಾಮದಹನ ಸೇರಿದಂತೆ ವಿವಿಧ ಆಚರಣೆಗಳ ಮೂಲಕ  ಸಂಪ್ರದಾಯಿಕ ಹೋಳಿ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು, ಇಂದಿನಿಂದ ಮೂರು ದಿನಗಳ ಬಣ್ಣದೋಕುಳಿ ಶುರುವಾಗಿದೆ. ಅದರಲ್ಲೂ ಮೊದಲ ದಿ‌ನ ಬೆಳ್ಳಂಬೆಳಿಗ್ಗೆ ವಿವಿಧ ಬಡಾವಣೆಗಳಲ್ಲಿ ಮಕ್ಕಳಿಂದ ಶುರುವಾದ ಬಣ್ಣದಾಟ ವಿದ್ಯಾಗಿರಿಯ ಸಕ೯ಲ್ ನಲ್ಲಿ ಭಜ೯ರಿಯಾಗಿ ಜನಸಂದಣಿ ಸೇರುವ ಮೂಲಕ ಹೋಳಿ ಹಬ್ಬ ಮತ್ತಷ್ಟು ರಂಗು ಪಡೆಯಿತು. ಬಣ್ಣದ ಬಂಡಿಗಳು ಬರುತ್ತಿದ್ದರೆ ಇತ್ತ ಇಕ್ಕೆಲಗಳಲ್ಲಿ ನಿಂತಿದ್ದ ಜನ ಪರಸ್ಪರ ಬಣ್ಣದ ಎರಚಾಟದಲ್ಲಿ ಮುಳುಗಿದ್ದರು. 

Holi Festival: ಗುಮ್ಮಟನಗರಿ ವಿಜಯಪುರದಲ್ಲಿ ಹೋಳಿ ಬಣ್ಣದಾಟದ ಸಂಭ್ರಮ..!

ಅಜ್ಜಿಯರ ಕೈಯಲ್ಲಿ ಹೊರ ಹೊಮ್ಮಿದ ಭಜ೯ರಿ ಹಲಗೆ ನಾದ..ಅಜ್ಜಿಯರ ಸಖತ್ ಸ್ಟೆಪ್
Do You know why Bagalkote Holi Festival Famous in the country gvd

ವಿಶೇಷ ಅಂದರೆ ಬಾಗಲಕೋಟೆ ಜಿಲ್ಲೆಯಲ್ಲಿ ನಗರ ಪ್ರದೇಶ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲೂ ಆಕಷ೯ಕ ಹೋಳಿ ಆಚರಣೆ ಕಂಡು ಬಂತು. ಕೆಂದೂರ ತಾಂಡಾದಲ್ಲಿ ಅಜ್ಜಿಯರೇ ಹಲಗೆಯನ್ನ ಕೈಯಲ್ಲಿ ಹಿಡಿದು ಬಾರಿಸುತ್ತಾ ನಿಂತಿದ್ದು ಮಾತ್ರ, ಪಡ್ಡೆ ಹುಡುಗರನ್ನು ನಾಚಿಸುವಂತಿತ್ತು. ಅಷ್ಟೊಂದು ಸ್ವಚ್ಚಂದವಾಗಿ ಅಜ್ಜಿಯರು ಹಲಗೆ ಬಾರಿಸುತ್ತಾ ಇದ್ದದ್ದು ಕಂಡು ಬಂತು. ಇನ್ನು ಹೆಂಗಳೆಯರು ಸಾಮೂಹಿಕವಾಗಿ ನೃತ್ಯ ಮಾಡುವ ಮೂಲಕ ಸಂಪ್ರದಾಯಿಕ ಹೋಳಿ ಆಚರಣೆಯಲ್ಲಿ ಮುಳುಗಿದ್ದು ಕಂಡು ಬಂತು.

ಬಾಯಿ ಬಾಯಿ ಬಡಿದುಕೊಳ್ಳುತ್ತಾ ಬಣ್ಣದಾಟದಲ್ಲಿ ಮಿಂದೆದ್ದ ಹುಡುಗಿಯರು: ಈ ಬಾರಿ ಹುಡುಗರ ಜೊತೆಗೆ  ಹುಡುಗಿಯರು ಸಹ ಹೆಚ್ಚಾಗಿ ಹೋಳಿ ಬಣ್ಣದಾಟದಲ್ಲಿ ಮುಳುಗೇಳಿದ್ದು ಕಂಡು ಬಂತು. ಪರಸ್ಪರ ಮುಖಕ್ಕೆ ಬಣ್ಣ ರಾಚುವ ಮೂಲಕ  ಯುವಕರು , ಯುವತಿಯರು ವಿವಿಧ ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿ ಕುಣಿದು‌ ಕುಪ್ಪಳಿಸಿದರು.‌ ಇವುಗಳ ಮಧ್ಯೆ ಯುವತಿಯರು ಬಾಯಿ ಬಾಯಿ ಬಡಿದುಕೊಳ್ಳುತ್ತಾ ನಗರವೆಲ್ಲಾ ಸಂಚರಿಸುತ್ತಿದ್ದ ದೃಶ್ಯ ಸವೆ೯ ಸಾಮಾನ್ಯವಾಗಿತ್ತು. 

ರೇನ್ ಡಾನ್ಸ್‌ನಲ್ಲಿನ ಸೆಳೆದ ಯುವಕರು, ಮಕ್ಕಳು, ವಯೋವೃದ್ಧರು
Do You know why Bagalkote Holi Festival Famous in the country gvd

ಮೊದಲ ದಿನ ಹಳೆ ಬಾಗಲ ಕೋಟೆ ವಿದ್ಯಾಗಿರಿ ನವನಗರ ಸೇರಿದಂತೆ ವಿವಿಧೆಡೆ ಸಾಕಷ್ಟು ಜನರು ಸೇರುವ ಮೂಲಕ ಭರ್ಜರಿಯಾಗಿ ಹೋಳಿ ಬಣ್ಣದಾಟ ದಲ್ಲಿ ಭಾಗವಹಿಸಿದ್ದರು. ಅದರಲ್ಲೂ ರೈನ್ ಡಾನ್ಸ್  ಕಾರ್ಯಕ್ರಮವಂತೂ ನೋಡುಗರ ಮನಸೂರೆಗೊಂಡಿತು.‌ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು,ಮಕ್ಕಳು, ವಯೋವೃದ್ಧರಾದಿಯಾಗಿ ಎಲ್ಲರೂ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.‌ ಇನ್ನು ಮಧ್ಯಾಹ್ನದ ಹೊತ್ತಿಗೆ ಹಳೇ ಬಾಗಲಕೋಟೆ ಪಟ್ಟಣದಲ್ಲಿ ಬಣ್ಣದ ಬಂಡಿಗಳ ಓಡಾಟ ಕಂಡು ಬಂತು. 

Kolar: ರುಬಿಕ್ಸ್‌ ಕ್ಯೂಬ್‌ನಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿಗೆ ಡಾಕ್ಟರೇಟ್ ಗೌರವ!

ಪ್ರತಿಯೊಂದು ಓಣಿಯಲ್ಲಿ ಬಣ್ಣದ ಬಂಡಿಗಳ ಮೂಲಕ ಮೆರವಣಿಗೆ ಹೊರಟ ಯುವಕರ ತಂಡ ದಾರಿಯುದ್ದಕ್ಕೂ ಬಣ್ಣವನ್ನು ಎರಚುತ್ತಾ ತೆರಳುತ್ತಿದ್ದ ದೃಶ್ಯ ಸವೆ೯ ಸಾಮಾನ್ಯವಾಗಿತ್ತು. ಇನ್ನು ಪ್ರತಿದಿನ ರಾತ್ರಿ ವೇಳೆ ಸೋಗಿನ ಬಂಡಿಗಳ ಭರಾಟೆ ಜೋರಾಗಿದೆ. ಇತ್ತ ಜಿಲ್ಲೆಯ ಮುಧೋಳ, ಜಮಖಂಡಿ, ಬನಹಟ್ಟಿ ಸೇರಿದಂತೆ ಹಲವೆಡೆ ವಿಶೇಷ ಹೋಳಿ ಹಬ್ಬದ ಕಾಯ೯ಕ್ರಮ ಆಯೋಜಿಸಿದ್ದು, ಕಣ್ಮನ ಸೆಳೆಯಿತು. ಒಟ್ಟಿನಲ್ಲಿ ದೇಶದಲ್ಲಿಯೇ ಕಲ್ಕತ್ತಾ ಹೊರತುಪಡಿಸಿದರೆ ಅತಿ ಹೆಚ್ಚು ಹೋಳಿಯಾಡುವ ನಗರವೆಂಬ ಹೆಗ್ಗಳಿಕೆ ಹೊಂದಿರುವ ಬಾಗಲಕೋಟೆಯಲ್ಲಿ ಸಂಪ್ರದಾಯಿಕ ಹೋಳಿಯಾಚರಣೆ ಜೊತೆಗೆ ಬಣ್ಣದಾಟ ಇನ್ನೆರಡು ದಿನ ಮುಂದುವರೆಯಲಿದೆ.

Follow Us:
Download App:
  • android
  • ios