Kolar: ರುಬಿಕ್ಸ್ ಕ್ಯೂಬ್‌ನಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿಗೆ ಡಾಕ್ಟರೇಟ್ ಗೌರವ!
ಎರಡು ಕೈಗಳಲ್ಲಿ ಪಟ್ಟ ಪಟ್ಟನೆ ರುಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸುವ ಅಪ್ರತಿಮೆ ಬಾಲಕಿ, ಯಾವುದೇ ರುಬಿಕ್ಸ್‌ನ್ನು ಕಣ್ಣು ಮುಚ್ಚಿ ತೆರೆಯುವುದರಲ್ಲಿ ಸರಿಪಡಿಸುವ ಚಾಲಕಿ, ಆ ಬಾಲಕಿಯ ಸಾಧನೆಗೆ ಹರಿದು ಬಂದಿವೆ ಪ್ರಶಸ್ತಿಗಳ ಸುರಿಮಳೆ.
ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕೋಲಾರ
ಕೋಲಾರ (ಮಾ.18): ಎರಡು ಕೈಗಳಲ್ಲಿ ಪಟ್ಟ ಪಟ್ಟನೆ ರುಬಿಕ್ಸ್ ಕ್ಯೂಬ್‌ಗಳನ್ನು (Rubiks Cube) ಜೋಡಿಸುವ ಅಪ್ರತಿಮೆ ಬಾಲಕಿ, ಯಾವುದೇ ರುಬಿಕ್ಸ್‌ನ್ನು ಕಣ್ಣು ಮುಚ್ಚಿ ತೆರೆಯುವುದರಲ್ಲಿ ಸರಿಪಡಿಸುವ ಚಾಲಕಿ, ಆ ಬಾಲಕಿಯ ಸಾಧನೆಗೆ ಹರಿದು ಬಂದಿವೆ ಪ್ರಶಸ್ತಿಗಳ (Award) ಸುರಿಮಳೆ, ಮತ್ತು ಡಾಕ್ಟರೇಟ್ ಗೌರವ (Honorary Doctorate), ಅಷ್ಟಕ್ಕೂ ಆ ಬಾಲಕಿ ರುಬಿಕ್ಸ್‌ನಲ್ಲಿ ಮಾಡಿರುವ ಸಾಧನೆ ಏನು ಅಂತಿರಾ ಈ ಸ್ಟೋರಿ ನೋಡಿ...
ಹೀಗೆ ಎರಡು ಕೈಗಳಲ್ಲಿ ರೂಬಿಕ್ಸ್‌ಗಳನ್ನು ತಟ್ಟನೆ ಜೋಡಿಸುವ ಬಾಲಕಿ,ಮತ್ತೊಂದಡೆ ಬಾಲಕಿಯ ಸಾಧನೆಗೆ ಮೆಚ್ಚಿ ಬಂದಿರುವ ಹಲವು ಬುಕ್ ಆಪ್ ರೆಕಾರ್ಡ್ಸ್ ಪ್ರಶಸ್ತಿಗಳು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು! ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ಪಟ್ಟಣದ ಎಲೆಪೇಟೆಯ ಕೋಲ ಕೋಮಲ ವಿಜಯ ಮತ್ತು ವಿದ್ಯಾಲಕ್ಷ್ಮೀ ದಂಪತಿಗಳ ಪುತ್ರಿ ಯುಕ್ತ (Yukta) ರುಬಿಕ್ಸ್‌ನಲ್ಲಿ ಅಪ್ರತಿಮೆ ಸಾಧನೆ ಮಾಡಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ತಕ್ಕಂತೆ ಪಟ್ಟಣದ 14 ವರ್ಷದ ಕೊಲ್ಲ ಕಮಲ ವಿಜಯ ಯುಕ್ತಾ ವಿಶ್ವದ ಕಿರಿಯ ರುಬಿಕ್ಸ್ ಕ್ಯೂಬ್ಸ್ ಶಿಕ್ಷಕಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ರತ್ನ ಬೆನ್ನಲ್ಲೇ ಪುನೀತ್‌ಗೆ ಮತ್ತೊಂದು ಮರಣೋತ್ತರ ಪ್ರಶಸ್ತಿ
ಈ ಬಾಲಕಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿ 8 ವಿಶ್ವ ದಾಖಲೆ ಪಡೆದಿದ್ದಾಳೆ. ಇತ್ತೀಚಿಗೆ ಅಮೆರಿಕಾದ ನಳಂದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪ್ರಸ್ತುತ 9ನೇ ತರಗತಿ ಓದುತ್ತಿರುವ ಪಟ್ಟಣದ ಬಾಲಕಿ ಕೊಲ್ಲ ಕಮಲ್ ವಿಜಯ ಯುಕ್ತಾ 56 ಬಗೆಯ ರುಬಿಕ್ಸ್ ಕ್ಯೂಬ್‌ಗಳ ಬಗ್ಗೆ ಪರಿಣಿತಿ ಪಡೆದಿದ್ದು, ಆನ್‌ಲೈನ್, ಆಫ್ಲೈನ್ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾಳೆ. ಕ್ರ್ಯಾಕ್ ಎ ಕ್ಯೂಬ್ ಎನ್ನುವ ಹೆಸರಲ್ಲಿ ಯೂಟ್ಯೂಬ್ ಚಾನಲ್ ತೆರೆದು, ತಾನು ಅಭ್ಯಾಸ ಮಾಡುವ ವಿವಿಧ ರೀತಿಯ ವಿಡಿಯೋ ಅಪಲೋಡ್ ಮಾಡಿದ್ದಾಳೆ. ಇದುವರೆಗೂ ದೇಶ ಸೇರಿದಂತೆ ವಿಶ್ವಾದ್ಯಂತ 600 ಮಕ್ಕಳಿಗೆ ಆನ್‌ಲೈನ್ ತರಬೇತಿ ನೀಡುತ್ತಿದ್ದಾಳೆ.
ಇನ್ನು ತಾಯಿಯ ಆಸೆಯಂತೆ ಎರಡು ವರ್ಷ ರುಬಿಕ್ಸ್ ಕ್ಯೂಬ್ ತರಬೇತಿ ಪಡೆದ ಯುಕ್ತಾ ನಂತರ ಇದರ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾಳೆ. ಆದ್ರೆ ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ರುಬಿಕ್ಸ್ ಕ್ಯೂಬ್ ಬಗ್ಗೆ ಆಸಕ್ತಿ ತೋರಿದ ಯುಕ್ತಾ ನಂತರ ಹಿಂತಿರುಗಿ ನೋಡಿಲ್ಲ, ಸುಮಾರು 56 ರುಬಿಕ್ಸ್ ಗಳನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಮಾಡಿ ಎಲ್ಲರನ್ನು ವಿಸ್ಮಯಗೊಳಿಸುತ್ತಾಳೆ. ಜೊತೆಗೆ ರುಬಿಕ್ಸ್ ಕುರಿತು ಪುಸಕ್ತವನ್ನು ಬರೆದು ಯುವ ಸಂಪಾದಕಿ ಸಹ ಆಗಿದ್ದಾಳೆ.
ಬಜರಂಗದಳ ಮುಖಂಡನಿಂದ ಕೊಲೆ: ಮೃತನ ಮನೆಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ
ಈ ಬಗ್ಗೆ ಈಗಾಗಲೇ ಬುಕ್ ಆಪ್ ರೆಕಾರ್ಡ್ಸ್‌ಗಳನ್ನು ಪಡೆದಿರುವ ಯುಕ್ತಾ ಗಿನ್ನಿಸ್ ದಾಖಲೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲಿ ಗ್ರಿನ್ನಿಸ್ ದಾಖಲೆ ಸೇರಲಿರುವ ಯುಕ್ತಾಳ ಪ್ರತಿಭೆ ಬಗ್ಗೆ ತಂದೆ ತಾಯಿಗೆ ಎಲ್ಲಿಲ್ಲದ ಮೆಚ್ಚುಗೆ, ಸಂತೋಷವನ್ನು ತಂದಿದೆ. ಈಗಾಗಲೇ ವಿಶ್ವಾದ್ಯಾಂತ ಹೆಸರು ಮಾಡಿರುವ ಯುಕ್ತಾ ಗಿನ್ನಿಸ್ ದಾಖಲೆ ಸೇರುವ ಮೂಲಕ ಕೋಲಾರ ಜಿಲ್ಲೆಯ ಬಂಗಾರದ ಮಗಳ ಆಗಲಿ ಎನ್ನುವುದು ತಾಯಿಯ ಮಾತು. ಟ್ಟಾರೆ ಇಷ್ಟು ಚಿಕ್ಕ ವಯಸ್ಸಿಗೆ ಡಾಕ್ಟರೇಟ್ ಪದವಿ ಪಡೆದ ಕೀರ್ತಿ ಯುಕ್ತಾಗೆ ಸಲ್ಲಿದೆ. ಮುಂದಿನ ದಿನಗಳಲ್ಲಿ ಮತಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದು ನಮ್ಮ ಕಡೆಯಿಂದಲೂ ಈಕೆಗೆ ಆಲ್ ದಿ ಬೆಸ್ಟ್.