Asianet Suvarna News Asianet Suvarna News

ಕನಿಷ್ಠ 15 ದಿನಕ್ಕೊಮ್ಮೆಯಾದರೂ ಯೋಗ ಮಾಡಿ: ಶಾಸಕ ಅಪ್ಪಚ್ಚು ರಂಜನ್ ಸಲಹೆ

ಸಾವಿರಾರು ಜನರಿಂದ ಏಕಕಾಲದಲ್ಲಿ ಶಿಸ್ತುಬದ್ಧ ಯೋಗಭ್ಯಾಸ
ಮಡಿಕೇರಿ, ಕುಶಾಲನಗರ, ಪೊನ್ನಂಪೇಟೆ ಟಫ್ ಮೈದಾನಗಳಲ್ಲಿ ನಡೆದ ಯೋಗ ಪ್ರದರ್ಶನ

Do yoga at least once in 15 days MLA Appachhu Ranjan advises sat
Author
First Published Jan 15, 2023, 2:29 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 
ಕೊಡಗು (ಜ.15): ಯೋಗ ಅಭ್ಯಾಸವನ್ನು ಹೀಗೆ ಎಂದೋ ಒಂದು ದಿನ ಮಾಡುವುದಕ್ಕಿಂತ ಕನಿಷ್ಠ ಹದಿನೈದು ದಿನಗಳಿಗೆ ಒಮ್ಮೆಯಾದರೂ ಯೋಗ ಅಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಆಗಲಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಹಮ್ಮಿಕೊಂಡಿದ್ದ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವೇ ದೇಶದ ಸಂಪತ್ತು. ಹೀಗಾಗಿಯೇ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಯೋಗವನ್ನು ಹೆಚ್ಚು ಪ್ರಚುರಪಡಿಸಿದರು. ಜೊತೆಗೆ ಸುಮಾರು 140 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗಭ್ಯಾಸ ಮಾಡುವಂತೆ ಮಾಡಿದ್ದಾರೆ. ನಾನು ಕೂಡ ನನ್ನ ನಿತ್ಯ ಜೀವನದಲ್ಲಿ ಅರ್ಧ ಗಂಟೆಗಳ ಕಾಲ ಯೋಗ ಅಭ್ಯಾಸ ಮಾಡಿದರೆ ಇನ್ನು ಅರ್ಧ ಗಂಟೆ ಸಮಯ ಎಕ್ಸಸೈಜ್ ಮಾಡುತ್ತೇನೆ. ಹೀಗಾಗಿಯೇ ಈಗಲೂ ನನ್ನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

National Youth Festival:15ರಂದು ಗಿನ್ನಿಸ್‌ ದಾಖಲೆಗೆ ಯೋಗಥಾನ್‌!

ಗಿನ್ನೆಸ್‌ ದಾಖಲೆಗಾಗಿ ಪ್ರದರ್ಶನ: ಗಿನ್ನಿಸ್ ದಾಖಲೆ ಮಾಡುವ ಹಿನ್ನೆಲೆಯಲ್ಲಿ ದೇಶದಲ್ಲಿ ಯೋಗ ಅಭ್ಯಾಸ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಯೋಗ ಅಭ್ಯಾಸ ಮಾಡಲಾಯಿತು. ಆಯುಷ್ಮಾನ್ ಇಲಾಖೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಯೋಗ ಅಭ್ಯಾಸದಲ್ಲಿ ಶಾಲಾ ಕಾಲೇಜು, ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಾವಿರಾರು ಜನರು ಯೋಗ ಅಭ್ಯಾಸ ಮಾಡಿದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್, ಸಿಇಓ ಡಾ. ಆಕಾಶ್, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮಡಿಕೇರಿ ತಹಶೀಲ್ದಾರ್ ಮಹೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಯೋಗ ಅಭ್ಯಾಸ ಮಾಡಿದರು. ಮಡಿಕೇರಿಯ ಸಾಯಿ ಹಾಕಿ ಮೈದಾನದಲ್ಲಿ ನಡೆದ ಯೋಗ ಅಭ್ಯಾಸದಲ್ಲಿ ಯೋಗ ಗುರು ಮಹೇಶ್ ಅವರು ಯೋಗಪಟುಗಳಿಗೆ ಮಾರ್ಗದರ್ಶನ ನೀಡಿದರು. 

ಕೂಡಿಗೆ ಕ್ರೀಡಾ ಶಾಲೆಯಲ್ಲಿ 600 ವಿದ್ಯಾರ್ಥಿಗಳು: 
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ  ವಿ.ಟಿ. ವಿಸ್ಮಯಿ ಅವರು ಮಾತನಾಡಿ ಸರ್ಕಾರದ ನಿದೇರ್ಶನದಂತೆ ಜಿಲ್ಲೆಯಲ್ಲೂ ಇಲಾಖೆಯ ಸಹಯೋಗದಲ್ಲಿ ಯೋಗಾಭ್ಯಾಸ ಮಾಡಲಾಗಿದೆ. ಮಡಿಕೇರಿಯ ಸಾಯಿ ಹಾಕಿ ಮೈದಾನದಲ್ಲಿ ಸಾವಿರಕ್ಕೂ ಹೆಚ್ಚು ಜನರು ಯೋಗಭ್ಯಾಸ ಮಾಡಿದರೆ, ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ರೀಡಾ ಶಾಲೆಯಲ್ಲೂ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಇನ್ನು ಪೊನ್ನಂಪೇಟೆ ಹಾಕಿ ಮೈದಾನದಲ್ಲೂ 500 ಕ್ಕೂ ಹೆಚ್ಚು ಜನರು ಯೋಗ ಅಭ್ಯಾಸದಲ್ಲಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬೆಳಿಗ್ಗೆ ಏಳುವರೆಯಿಂದ ಒಂಭತ್ತು ಗಂಟೆಯವರೆಗೆ ಒಂದುವರೆ ಗಂಟೆಗಳ ಕಾಲ ನಡೆದ ಯೋಗಭ್ಯಾಸದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.

Kanakapura: ಉತ್ತಮ ಆರೋ​ಗ್ಯಕ್ಕೆ ಯೋಗಾ​ಸ​ನ ಮದ್ದು: ಡಿ.ಕೆ.ಶಿವಕುಮಾರ್‌

ಆರೋಗ್ಯಕ್ಕಾಗಿ ಯೋಗ ಮಾಡಿ: 
ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಮಾತನಾಡಿ ಯೋಗದಿಂದ ನಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ನೆಮ್ಮದಿಯುತ ಜೀವನ ನಡೆಸಬಹುದು. ಯೋಗ ಪ್ರದರ್ಶನಕ್ಕಾಗಿ ಅಲ್ಲ, ನಮ್ಮ ಆರೋಗ್ಯಕ್ಕಾಗಿ. ಇಲ್ಲಿ ನೆರೆದಿದ್ದ ಎಲ್ಲರೂ ಕಣ್ಮುಚ್ಚಿ ಚಿನ್ಮುದ್ರೆಯಲ್ಲಿ ಕುಳಿತು ಯೋಗಾಭ್ಯಾಸ ಆರಂಭಿಸಿದ ಯೋಗ ಪಟುಗಳು ಮನಸ್ಸನ್ನು ನಿರಾಳವಾಗಿ ಪ್ರಕೃತಿಯ ನಡುವೆ ವಿವಿಧ ಯೋಗ ಅಭ್ಯಾಸ ಮಾಡಿದ್ದಾರೆ. ಆದ್ದರಿಂದ ಎಲ್ಲರೂ ಯೋಗ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ ಇದ್ದರು. ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್ ಪಲ್ಲೇದ್ ಅವರು ಕಾರ್ಯಕ್ರಮದ ನಿರೂಪಿಸಿದರು. 

Follow Us:
Download App:
  • android
  • ios