Mysuru : ಆದ್ಯತೆ ಮೇಲೆ ಜನರ ಕೆಲಸ ಮಾಡಿಕೊಡಿ : ಸಾ ರಾ ಮಹೇಶ್

ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆಸದೆ ಆದ್ಯತೆಯ ಮೇಲೆ ಅವರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Do peoples work on priority Says Sa Ra Mahesh snr

 ಕೆ.ಆರ್‌.ನಗರ (ನ.06):  ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆಸದೆ ಆದ್ಯತೆಯ ಮೇಲೆ ಅವರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜನ ಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಈ ವಿಚಾರದಲ್ಲಿ ದೂರುಗಳು ಕೇಳಿ ಬಂದರೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ (Village)  ರಸ್ತೆ (Road)  ನಿರ್ಮಾಣ ಮಾಡುವಾಗ ಒತ್ತುವರಿಯಾಗಿ ಜಾಗ ಕಳೆದುಕೊಂಡಿರುವವರ ಪಟ್ಟಿ ಮಾಡಿ ಎಂದು ಪಿಡಿಒ (PDO) ರವಿ ಅವರಿಗೆ ಆದೇಶಿಸಿದ ಅವರು, ಮುಂದೆ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿ ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಅವರನ್ನು ಗುರುತಿಸಿ ಅನುಕೂಲ ಮಾಡಿಕೊಡಬೇಕು ಹಾಗೂ ಇಂದಿನ ಸಭೆಯಲ್ಲಿ ಬಂದಿರುವ ಕುಂದು ಕೊರತೆ ಅರ್ಜಿಗಳಿಗೆ ವಾರದಲ್ಲಿ ಪರಿಹಾರ ಸೂಚಿಸಬೇಕೆಂದರು.

ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದರ ಜತೆಗೆ ಪರಿಶೀಲನೆ ನಡೆಸಿ ಕೆಲಸಗಳು ನಡೆಯುವಂತೆ ಕ್ರಮ ಕೈಗೊಂಡು ಯಾವುದೆ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದರು.

ಆ ನಂತರ ಅವರು ಚಂದಗಾಲು ಗ್ರಾಮದಿಂದ ಅರ್ಕೇಶ್ವರ ಗ್ರಾಮದ ದೇವಾಲಯದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಕಾಟ್ನಾಳು ಮತ್ತು ಚಂದಗಾಲು ಗ್ರಾಮಗಳಿಗೆ ತೆರಳಿ ಜನ ಸ್ಪಂದನಾ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದರು.

ಚಂದಗಾಲು ಗ್ರಾಪಂ ಅಧ್ಯಕ್ಷ ಸುರೇಶ್‌, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಭಾಗ್ಯಕೃಷ್ಣ, ಪ್ರಕಾಶ್‌, ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷಿ ್ಮೕ, ತಹಸೀಲ್ದಾರ್‌ ಎಂ.ಎಸ್‌.ಯದುಗಿರೀಶ್‌, ತಾಪಂ ಇಒ ಎಚ್‌.ಕೆ. ಸತೀಶ್‌, ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್‌, ಬಿಇಒ ಟಿ.ಎನ್‌. ಗಾಯತ್ರಿ, ಡಿಪೋ ವ್ಯವಸ್ಥಾಪಕ ಮಹೇಶ್‌, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌. ಮಹೇಂದ್ರಪ್ಪ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜೆ.ಮಹೇಶ್‌, ಸಮಾಜ ಕಲ್ಯಾಣಾಧಿಕಾರಿ ಅಶೋಕ್‌, ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಜಿ.ಜೆ. ಈರಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಅರ್ಕೇಶ್‌ಮೂರ್ತಿ, ರಾಜಾರಾಂ ವೈಲಾಯ, ವಿಜಯಕುಮಾರ್‌, ಗುರುರಾಜು, ಕಿರಿಯ ಎಂಜಿನಿಯರ್‌ ಜಿ. ಸಿದ್ದೇಶ್‌ಪ್ರಸಾದ್‌, ಪಿಎಸ್‌ಐ ಎಲ್‌. ಚಂದ್ರಹಾಸ ಇದ್ದರು.

ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ

ತಾಲೂಕು ಒಕ್ಕಲಿಗರ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಕೊಡಿಸುವುದರ ಜತೆಗೆ ಅಗತ್ಯ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಎಚ್‌.ಡಿ. ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಷೇರುದಾರ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘ ವ್ಯವಹಾರ ನಡೆಸುವಂತೆ ಸಲಹೆ ನೀಡಿದರು.

ಸಹಕಾರ ಸಂಘಗಳಲ್ಲಿರುವ ಆಡಳಿತ ಮಂಡಳಿಯವರು ಸಂಘದ ಹಣದಿಂದ ಸಭೆ ಮತ್ತು ಸಮಾರಂಭಗಳನ್ನು ಮಾಡುತ್ತಾರೆ ಆದರೆ ತಾಲ್ಲೂಕು ಒಕ್ಕಲಿಗರ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಯು ಸ್ವಂತ ಹಣದಿಂದ ಪ್ರತಿಭಾ ಪುರಾಸ್ಕರ, ಸಾಮಾನ್ಯ ಸಭೆಗೆ ಬಳಸುತ್ತಿರುವುದು ಶ್ಲಾಘನಿಯ ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಇದೇ ರೀತಿ ನಡೆಸುಕೊಂಡು ಹೋದರೆ ಆದಾಯ ವೃದ್ದಿಯಾಗುತ್ತದೆ ಹಾಗೂ ಈ ಸಹಕಾರ ಸಂಘವು ಮೈಸೂರು ಜಿಲ್ಲೆಯಲ್ಲಿಯೇ ಮಾದರಿಯಾಗಲಿದೆ ಎಂದು ತಿಳಿಸಿದರು.

Mysuru: ಸೆ.16 ರಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಾರಂಭ: ಶಾಸಕ ಸಾ.ರಾ.ಮಹೇಶ್‌

ಮಿರ್ಲೆ ಮತ್ತು ಹರದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 80 ಲಕ್ಷದಷ್ಟುಅವ್ಯವಹಾರ ನಡೆದಿದ್ದು, ಕಾರ್ಯದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಕೋ-ಅಪರೇಟಿವ್‌ ಸಂಸ್ಥೆಗಳನ್ನು ನಡೆಸುವಾಗ ಆಡಳಿತ ಮಂಡಳಿ ಮತ್ತು ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಆಗ ಮಾತ್ರ ಸಂಘ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದರು.

ಸೊಸೈಟಿ ಅಧ್ಯಕ್ಷರಾದ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಸೊಸೈಟಿ 3,96,766 ರು. ನಿವ್ವಳ ಲಾಭದಲ್ಲಿದ್ದು, 11 ಲಕ್ಷದ 13 ಸಾವಿರ ಷೇರು ಬಂಡವಾಳ ಹೊಂದಿದ್ದು, ವಾರ್ಷಿಕ 1,36,66,571 ರು. ಗಳ ವೈಹಿವಾಟು ನಡೆಸಿದೆ. ಇದಕ್ಕೆ ಸಹಕಾರ ನೀಡಿದ ಆಡಳಿತ ಮಂಡಳಿ ನಿರ್ದೇಶಕರಿಗೆ ಮತ್ತು ಷೇರುದಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಹೆಚ್ಚು ಷೇರು ಬಂಡವಾಳ ಹೂಡಿದ ಸದಸ್ಯರನ್ನು ಸನ್ಮಾನಿಸಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು. ನವ ನಗರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ಸಂಘದ ಉಪಾಧ್ಯಕ್ಷ ವಿ.ಸಿ. ಶಿವರಾಮು ಮಾತನಾಡಿದರು.

Latest Videos
Follow Us:
Download App:
  • android
  • ios