ರಾಮ​ನ​ಗ​ರ (ಅ.06): ನನ್ನ ಮಗನನ್ನು ಕಂಡ್ರೆ ಇಡಿ, ಪಿಡಿ, ಸಿಡಿ, ಸಿಬಿಐನವರಿಗೆ ತುಂಬಾ ಇಷ್ಟ. ಅದ್ದ​ರಿಂದಲೇ ಆಗಾಗ ಬಂದು ಸುಮ್ಮನೆ ಹೊಟ್ಟೆಉರಿ​ಸು​ತ್ತಾರೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರ ತಾಯಿ ಗೌರಮ್ಮ ಸಿಬಿಐ ದಾಳಿ ವಿರುದ್ಧ ಕಿಡಿ​ಕಾ​ರಿ​ದರು.

ಕನ​ಕ​ಪುರ ತಾಲೂ​ಕಿನ ಕೋಡಿ​ಹಳ್ಳಿ ನಿವಾ​ಸ​ದಲ್ಲಿ ಸಿಬಿಐ ದಾಳಿಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನನ್ನ ಮಗ​ನನ್ನು ಅವ​ರೆ​ಲ್ಲರೂ ತುಂಬಾ ಇಷ್ಟಪಡುತ್ತಾರೆ. ಅವ​ರಿಗೂ ಬೇರೆ ಕೆಲಸ ಇಲ್ಲದೆ ನಮ್ಮನೆ ಬಾಗಿ​ಲಿಗೆ ತಿರು​ಗು​ತ್ತಲೇ ಇರ್ತಾರೆ ಎಂದರು.

ಸಿಬಿಐ ಪರಿಶೀಲನೆ ಅಂತ್ಯ: ಸಂಸದ ಡಿಕೆ ಸುರೇಶ್ ಫಸ್ಟ್ ರಿಯಾಕ್ಷನ್...! .

ನನ್ನ ಮಗ​ನನ್ನು ಅವರ ಮನೆಗೆ ಕರೆ​ದು​ಕೊಂಡು ಹೋಗಿ ಕೂರಿ​ಸಿ​ಕೊ​ಳ್ಳಲಿ. ನನನ್ನು ಕರ​ದ್ರೆ ನಾನೂ ಹೋ​ಗ್ತೀನಿ. ಆದರೆ, ಸಮಯ ಸಮಯಕ್ಕೆ ಊಟ ಹಾಕಿದರೆ ಸಾಕು. ನನ್ನ ಮಗನ ಮೇಲೆ ರಾಜಕೀಯ ದ್ವೇಷದ ಬಗ್ಗೆ ನನಗೆ ಗೊತ್ತಿಲ್ಲ. 

ಆದರೆ, ದಾಳಿ ನಡೆಸುವಾಗ ಏನು ಸಿಗುತ್ತೊ ಅದನ್ನು ತೆಗೆದುಕೊಂಡು ಹೋಗಲಿ. ಅಲ್ಲಿರುವ ಇಟ್ಟಿಗೆಗಳನ್ನು ಕೂಡ ತೆಗೆದುಕೊಂಡು ಹೋಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.