ಬೆಂಗಳೂರು (ಅ.05):  ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಹಾಗೂ ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಫೇಸ್‌ಬುಕ್‌ ಖಾತೆಯಲ್ಲಿ ಕುಸುಮಾ ರವಿ ಬದಲು ಕುಸುಮಾ ಹನುಮಂತರಾಯಪ್ಪ ಎಂದು ಬರೆದುಕೊಂಡಿದ್ದಾರೆ.

 ಡಿ.ಕೆ. ರವಿ ತಾಯಿ ಗೌರಮ್ಮ ಅವರು ಇತ್ತೀಚೆಗೆ ‘ರಾಜ​ಕೀ​ಯಕ್ಕೆ ನನ್ನ ಪುತ್ರನ ಹೆಸರು ಬಳಕೆ ಮಾಡುವಂತಿಲ್ಲ. ನನ್ನ ಪುತ್ರನ ಹೆಸರು ಬಳಕೆ ಮಾಡಿದರೆ ಸೊಸೆ ವಿರುದ್ಧವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ’ ಎಂದು ಹೇಳಿದ್ದರು.

"

ಬೈ ಎಲೆಕ್ಷನ್; ಹೈಕಮಾಂಡ್‌ಗೆ ಕೈ ಅಭ್ಯರ್ಥಿಗಳ ಪಟ್ಟಿ, ಪರಿಷತ್‌ಗೆ ಅಚ್ಚರಿ ಹೆಸರು!

ಇದರ ಬೆನ್ನಲ್ಲೇ ಹೊಸದಾಗಿ ತೆರೆದಿರುವ ಫೇಸ್‌ಬುಕ್‌ ಖಾತೆಯಲ್ಲಿ ಕುಸುಮಾ ಅವರು ತಮ್ಮ ತಂದೆಯ ಹೆಸರನ್ನು ಸೇರಿಸಿ ‘ಕುಸುಮಾ ಹನುಮಂತರಾಯಪ್ಪ’ ಎಂದು ಬರೆದುಕೊಂಡಿದ್ದಾರೆ. ಶನಿವಾರವಷ್ಟೇ ಖಾತೆಯಲ್ಲಿ ಮೊದಲ ಪೋಸ್ಟ್‌ ಹಾಕಿದ್ದು ಅದಕ್ಕಿಂತ ಮೊದಲು ಯಾವುದೇ ಪೋಸ್ಟ್‌ಗಳು ಇಲ್ಲ. ಹೀಗಾಗಿ ಇದು ಹೊಸದಾಗಿ ತೆರೆದಿರುವ ಖಾತೆ ಎಂದು ತಿಳಿದುಬಂದಿದೆ.