ಫಿನಾಯಿಲ್ ಕೊಡಿ, ಟಾಯ್ಲೆಟ್ ತೊಳಿತೀನಿ ಅಂದ್ರು ಜಿ.ಪಂ ಅಧ್ಯಕ್ಷೆ
ಶೌಚಾಲಯ ದುರ್ನಾತ ಬಡಿಯುತ್ತಿದೆಯಲ್ಲಾ, ಫಿನಾಯಿಲ್ ಕೊಡಿ ನಾನೇ ಟಾಯ್ಲೆಟ್ ಕ್ಲೀನ್ ಮಾಡ್ತೀನಿ ಅಂತ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಶೌಚಾಲಯಗಳ ದುಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಕರ್ನಾಟಕ ಕಸ್ತೂರಬಾ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು(ಜು.17): ಸರ್ಕಾರ ಎಲ್ಲ ಸೌಲಭ್ಯಗಳನ್ನು ಕೊಟ್ಟಿದೆ, ಶೌಚಾಲಯಗಳನ್ನು ಹೀಗೆನ್ರಿ ಇಟ್ಟುಕೊಳ್ಳುವುದು, ಬಾಗಿಲುಗಳೆಲ್ಲಾ ಮುರಿದು ಹೋಗಿದೆಯಲ್ರಿ, ಶೌಚಾಲಯ ದುರ್ನಾತ ಬಡಿಯುತ್ತಿದೆಯಲ್ಲಾ, ಫಿನಾಯಿಲ್ ಕೊಡಿ ನಾನೇ ಟಾಯ್ಲೆಟ್ ಕ್ಲೀನ್ ಮಾಡ್ತೀನಿ ಅಂತ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ತರೀಕೆರೆ ಪಟ್ಟಣದ ಕರ್ನಾಟಕ ಕಸ್ತೂರಬಾ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಶೌಚಾಲಯಗಳ ದುಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತ ಅನಿಲ್‌ಕುಮಾರ್, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎಚ್. ಮಹೇಂದ್ರ ಸ್ಥಿತಿಗಳನ್ನು ಪರಿಶೀಲಿಸಿದರು. ಮೊದಲು ಈ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಬಾಗಿಲುಗಳನ್ನು ಸರಿಪಡಿಸಿ ಎಂದು ವಸತಿ ನಿಲಯದ ಅಧಿಕಾರಿಗಳಿಗೆ ಖಡಕ್ ಸಲಹೆ ನೀಡಿದರು.
ಹಾಸ್ಟೆಲ್, ಪಿಜಿಗಳಿಗೆ ಪರವಾನಗಿ ಕಡ್ಡಾಯ