Chikkaballapur: ನಾಳೆಯಿಂದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಖಾದಿ ಉತ್ಸವ

ಖಾದಿ ಗ್ರಾಮೋದ್ಯೋಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಒದಗಿಸುವ ನಿಟ್ಟಿನಲ್ಲಿ ಡಿ.17 ರಿಂದ 25ರ ವರೆಗೂ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಖಾದಿ ಉತ್ಸವ-2022 ನ್ನು ಆಯೋಜಿಸಲಾಗಿದ್ದು ಜಿಲ್ಲೆಯ ಜನತೆ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಮನವಿ ಮಾಡಿದರು.

District level Khadi Utsav at district center from tomorrow chikkaballapur rav

ಚಿಕ್ಕಬಳ್ಳಾಪುರ (ಡಿ.16) : ಖಾದಿ ಗ್ರಾಮೋದ್ಯೋಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಒದಗಿಸುವ ನಿಟ್ಟಿನಲ್ಲಿ ಡಿ.17 ರಿಂದ 25ರ ವರೆಗೂ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಖಾದಿ ಉತ್ಸವ-2022 ನ್ನು ಆಯೋಜಿಸಲಾಗಿದ್ದು ಜಿಲ್ಲೆಯ ಜನತೆ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಕಾರಣ ಸತತ ಎರಡು ವರ್ಷದಿಂದ ರಾಜ್ಯದಲ್ಲಿ ಖಾದಿ ಉತ್ಸವ ಆಯೋಜಿಸರಲಿಲ್ಲ. ಈ ವರ್ಷದಿಂದ ರಾಜ್ಯಾದ್ಯಂತ ಖಾದಿ ಉತ್ಸವ ಆಯೋಜನೆಗೆ ಮಂಡಳಿ ನಿರ್ಧರಿಸಿದ್ದು ಜನತೆ ಖಾದಿ ಉತ್ಪನ್ನಗಳ ಬಳಕೆಗೆ ಮುಂದಾಗಬೇಕೆಂದರು.

2 ವರ್ಷದಿಂದ ದೋಟಿಹಾಳ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೀಗ, ಧೂಳುಮಯವಾದ ನೇಯುವ ಮಗ್ಗಗಳು!

ಇತ್ತೀಚೆಗೆ ವಿಜಯಪುರ, ರಾಯಚೂರು ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಖಾದಿ ಉತ್ಸವ ನಡೆಸಿದ್ದು, ನಿರೀಕ್ಷೆಗೂ ಮೀರಿ ಖಾದಿ ಉತ್ಪನ್ನಗಳ ಮಾರಾಟಗೊಂಡಿದೆ. ಮಂಗಳೂರಿನಲ್ಲಿ ಖಾದಿ ಉತ್ಸವ ಬೇಡವೇ ಬೇಡ ಅಂತ ಮಂಡಳಿ ಈ ಹಿಂದೆ ನಿರ್ಧರಿಸಿತ್ತು. ಈ ಬಾರಿ ಆಯೋಜಿಸಿದಾಗ 2.56 ಕೋಟಿ ವಹಿವಾಟು ನಡೆದಿದೆ ಎಂದರು. ಎಲ್ಲಾ ಕಾಲಕ್ಕೂ ಖಾದಿ ಸಮವಸ್ತ್ರ ಸೂಕ್ತವಾಗಿದೆ. ಗಾಂಧೀಜಿ ಕನಸು ಕಂಡಂತೆ ಗ್ರಾಮೋದ್ಯೋಗಕ್ಕೆ ಪೂರಕವಾಗಿ ಖಾದಿ ಉತ್ಸವವನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 2012-13 ರಲ್ಲಿ ನಡೆದಾಗ 50 ಲಕ್ಷ, 2016-17 ರಲ್ಲಿ ನಡೆಸಿದಾಗ 1.15 ಕೋಟಿ, 2017-28 ರಲ್ಲಿ ನಡೆಸಿದಾಗ 2 ಕೋಟಿ ವಹಿವಾಟು ನಡೆಸಿದೆ. ಈ ಬಾರಿ ಕೂಡ 36 ಮಳಿಗೆಗಳನ್ನು ಉತ್ಸವದಲ್ಲಿ ತೆರೆಯಲಾಗುವುದು. ವಿಶೇಷವಾಗಿ ಜಿಲ್ಲೆಯ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ತಯಾರಿಸುವ ಖಾದಿ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಈ ವರ್ಷ 2 ರಿಂದ 3 ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ. ಮಂಡಳಿಗೆ ಲಾಭದ ಉದ್ದೇಶ ಇಲ್ಲ. ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಒದಗಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಎಂಡಿ ಬಸವರಾಜ್‌, ಮಾರುಕಟ್ಟೆವಿಭಾಗದ ಅಧಿಕಾರಿಗಳಾದ ವಿ.ರಾಮಣ್ಣ, ಅಣ್ಣಪ್ಪ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ರಾಜಶೇಖರ್‌, ಮುಖಂಡರಾದ ಆನಂದ್‌, ಅವುಲುಕೊಂಡರಾಯಪ್ಪ ಸೇರಿದಂತೆ ಮತ್ತಿತರರು ಇದ್ದರು.

Chikkaballapura : ಮಾಂಡಸ್‌ ಚಂಡಮಾರುತಕ್ಕೆ ತತ್ತರಿಸಿದ ಜಿಲ್ಲೆಯ ಜನತೆ

ಜಿಲ್ಲೆಯಲ್ಲಿ ಸುಸಜ್ಜಿತ ಖಾದಿ ಮಾರಾಟ ಮಳಿಗೆ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹಂತದಲ್ಲಿರುವ ಗಾಂಧಿ ಭವನದಲ್ಲಿ ಶಾಶ್ವತವಾಗಿ ಖಾದಿ ಉತ್ಪನ್ನಗಳ ಹಾಗೂ ವಸ್ತ್ರಗಳ ಮಾರಾಟಕ್ಕೆ ಶಾಶ್ವತವಾದ ಒಂದು ಸುಸಜ್ಜಿತ ಮಳಿಗೆ ತೆರೆಯಲು ಈಗಾಗಲೇ ನಿರ್ಧರಿಸಲಾಗಿದೆ. ಅಲ್ಲದೇ ಜನವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬೃಹತ್‌ ಖಾದಿ ಉತ್ಸವ ಆಯೋಜನೆಗೆ ಸಿದ್ದತೆಗಳು ನಡೆದಿವೆ. ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದು ಕೆ.ವಿ.ನಾಗರಾಜ್‌ ತಿಳಿಸಿದರು

Latest Videos
Follow Us:
Download App:
  • android
  • ios