ಕೋಲಾರ(ಜೂ.16): ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಸೋಮವಾರ ನಡೆದ ಪಂಚಾಯಿತಿ ಉದ್ಘಾಟನಾ ಕಾರ್ಯಕ್ರಮವು ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ವಾಗ್ವದಗಳಿಗೆ ಸಾಕ್ಷಿಯಾಯಿತು.

ಲಕ್ಕೂರು ಗ್ರಾಮದ ಪಂಚಾಯಿತಿ ಕಟ್ಟಡ, ರಾಜೀವ್‌ ಗಾಂಧಿ ಸೇವಾ ಕೇಂದ್ರ, ಅಂಗನವಾಡಿ ಕೇಂದ್ರ ಹಾಗೂ ಬಸ್‌ ನಿಲ್ದಾಣದಲ್ಲಿ ತಂಗುದಾಣ ಉದ್ಘಾಟನಾ ಕಾರ‍್ಯಕ್ರಮವನ್ನು ತಾಲೂಕು ಪಂಚಾಯಿತಿ ವತಿಯಿಂದ ಸೋಮವಾರ ಹತ್ತು ಗಂಟೆಗೆ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ನಿಗದಿತ ಸಮಯಕ್ಕೆ ಮುಂಚೆ ಬಂದು ಕಾಯುತ್ತಿದ್ದರು. ಕೋಲಾರದಲ್ಲಿ ಇತರೆ ಕಾರ‍್ಯಕ್ರಮ ಇರುವುದರಿಂದ ಶಾಸಕರಿಗೆ ಕಾಯದೆ ಪಂಚಾಯಿತಿಯ ನೂತನ ಕಟ್ಟಡವನ್ನು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಅನ್‌ಲಾಕ್‌ 2.0?: ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ!

ನಿಗದಿತ ವೇಳೆಗೆ ಕೇವಲ ಐದು ನಿಮಿಷ ನಿಧಾನವಾಗಿ ಬಂದ ಶಾಸಕರು ಅಗಲೇ ಉದ್ಘಾಟನೆ ಮಾಡಿರುವುದನ್ನು ಗಮನಿಸಿ ಉಸ್ತುವಾರಿ ಸಚಿವರಲ್ಲಿ ತಮ್ಮ ಅಕ್ಷೇಪ ವ್ಯಕ್ತಪಡಿಸಿದರು. ಈ ಭಾಗದ ಶಾಸಕನಾಗಿರುವ ನನಗೆ ಕನಿಷ್ಠ ಐದು ನಿಮಿಷ ಕಾಯಲು ಸಾಧ್ಯ ಇಲ್ಲವೇ ಎಂದು ಪ್ರಶ್ನಿಸಿದ ಶಾಸಕ ನಂಜೇಗೌಡರು ಪ್ರೋಟ್‌ಕಾಲ್‌ ಇಲ್ಲದೇ ಬಿಜೆಪಿ ಮುಖಂಡರನ್ನು ಸೇರಿಸಿಕೊಂಡು ಸರ್ಕಾರಿ ಕಾರ‍್ಯಕ್ರಮ ನಡೆಸುವುದು ಸರಿಯೇ. ನಾನು ಮೊದಲೇ ಬಂದಿದ್ದು, ನೀವು ಬರುವವರೆಗೂ ನಮ್ಮ ಕಾರ‍್ಯಕರ್ತರನ್ನು ಮಾತನಾಡಿಸಲು ಹೋಗಿದೆ. ನಿಮ್ಮ ಅಪ್ತ ಸಹಾಯಕ ಮೂಲಕ ಪೋನ್‌ ಮಾಡಿಸಿದ್ದರೆ ತಕ್ಷಣ ಬಂದು ಬಿಡುತ್ತಿದೆ ಎಂದರು.

ಸುಶಾಂತ್ ಕುಟುಂಬಕ್ಕೆ ಮತ್ತೊಂದು ಶಾಕ್: ಆಘಾತ ತಡೆಯಲಾರದೆ ಅತ್ತಿಗೆ ನಿಧನ!

ಇದಕ್ಕೆ ಸ್ಪಂದಿಸಿ ಮಾತನಾಡಿದ ಉಸ್ತುವಾರಿ ಸಚಿವರು ನಿಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ‍್ಯಕ್ರಮಕ್ಕೆ ನೀವೂ ಮೊದಲು ಬಂದು ನಮ್ಮನ್ನು ಸ್ವಾಗತಿಸಬೇಕಾಗಿತ್ತು. ಆದರೆ ನೀವೇ ನಿಧಾನವಾಗಿ ಬಂದು ನನ್ನನ್ನು ಅಕ್ಷೇಪ ಮಾಡುತ್ತಿದ್ದೀರಿ. ಇದು ಸರಿ ಅಲ್ಲ. ಕೋಲಾರದಲ್ಲಿ ಇತರೆ ಕಾರ‍್ಯಕ್ರಮ ಇದ್ದುದರಿಂದ ನಿಗದಿತ ಸಮಯದಲ್ಲೇ ಉದ್ಘಾಟಿಸಬೇಕಾಗಿತ್ತು. ಇದರಿಂದ ಬೇಜಾರಾಗಿದ್ದರೆ ಕ್ಷಮೆ ಇರಲ್ಲಿ ಎಂದರು. ಈ ಹಿಂದೆ ಒಂದೇ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಇಬ್ಬರು ನಂತರ ನಡೆದ ವೇದಿಕೆ ಕಾರ‍್ಯಕ್ರಮದಲ್ಲಿ ಒಬ್ಬರನ್ನು ಒಬ್ಬರು ಹೊಗಳುತ್ತ, ಕಾಲು ಎಳೆಯುತ್ತ ಮಾತನಾಡಿ ನಮ್ಮದ್ದು ಕೋಳಿ ಜಗಳ ಎಂದು ತೋರಿಸಿಕೊಟ್ಟರು.