Asianet Suvarna News Asianet Suvarna News

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಮನವಿ | 1 ತಿಂಗಳ ವೇತನ ನೀಡುವ ಮೂಲಕ ದೇಣಿಗೆ ಸಂಗ್ರಹಕ್ಕೆ ಡಿಸಿ ಶರತ್ ಶುಭಾರಂಭ ಕಸಾಪ ಮಾಡಬೇಕಾದ ಸಾಮರಸ್ಯ ಬೆಸೆಯುವ ಕೆಲಸಕ್ಕೆ ಮುಂದಾದ ಜಿಲ್ಲಾಧಿಕಾರಿ | ಅನೇಕ ಕಾರಣಗಳಿಂದ ದೂರ ಉಳಿದವರನ್ನು ಒಂದೆಡೆ ಸೇರಿಸಿ ಸಭೆ|

District Collector Request for Donate Akhila Bharatha Kannada Sahitya Sammelana
Author
Bengaluru, First Published Jan 16, 2020, 12:50 PM IST
  • Facebook
  • Twitter
  • Whatsapp

ಶೇಷಮೂರ್ತಿ ಅವಧಾನಿ 

ಕಲಬುರಗಿ(ಜ.16): ಎತ್ತು ಏರಿಗೆ.... ಎಂಬಂತೆ ಸಾಗಿರುವ ಇಲ್ಲಿನ ಕಸಾಪ ಚಟುವಟಿಕೆಗಳು, ಅಲ್ಲಿನ ಒಳ ರಾಜಕೀಯ ಬೇಗುದಿ, ಸ್ಥಳೀಯವಾಗಿ ಕಂಡಿರುವ ಹತ್ತು ಹಲವು ಸಾಹಿತಿಗಳು, ಸಂಘಟಕರ ನಡುವಿನ ಶೀತಲ ಸಮರದಿಂದಾಗಿ ಕದಡಿದ ನೀರಿನಂತಾಗಿರುವ ಇಲ್ಲಿನ ಸಾರಸ್ವತ ಲೋಕದ ವಾತಾವರಣ ತಿಳಿಗೊಳಿಸಲು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಶರತ್ ಖುದ್ದು ಮುಂದಾಗಿದ್ದಾರೆ. 

ಸಮ್ಮೇಳನದ ಶುಭಾರಂಭವಾಗಕ್ಕೆ ಮುನ್ನುಡಿಯಂತಿದ್ದ ಲಾಂಛನ ಬಿಡುಗಡೆಯೇ ವಿವಾದ ಧೂಳೆಬ್ಬಿಸಿರುವುದು, ದಿನಕ್ಕೊಬ್ಬರು ಹೋರಾಟ ಮಾಡುತ್ತ, ಹೇಳಿಕೆ ನೀಡುತ್ತ ಸಮ್ಮೇಳನದಿಂದ ದೂರ ಇರುವ ಎಚ್ಚರಿಕೆ ಮಾತನ್ನಾಡೋದನ್ನ ಗಮನಿಸಿರುವ ಡಿಸಿ ಶರತ್ ತಾವು ಇದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದರಾಗದು, ಫೀಲ್ಡಿಗೆ ಇಳಿಯಲೇಬೇಕು ಎಂದು ತಾವೇ ಖುದ್ದು ಸಾಹಿತಿಗಳು, ಮಾಧ್ಯಮದವರು, ಕನ್ನಡಪರ ಸಂಘಟನೆಗಳವರು, ಹಿರಿಯ-ಕಿರಿಯ ಸಾಹಿತಿ ಮಿತ್ರರೊಂದಿಗೆ ಸರಣಿ ಸಭೆಗಳನ್ನೋ ಚಾಯ್ ಪೇ ಚರ್ಚಾ... ಎಂಬಂತೆ ಚಹಾ ಕೂಟಗಳನ್ನೆಲ್ಲ ನಡೆಸುತ್ತ ವಾತಾವರಣದಲ್ಲಿ ಸಾಮರಸ್ಯ ಏರ್ಪಡುವಂತೆ ಮಾಡುವಲ್ಲಿ ಮಗ್ನರಾಗಿದ್ದಾರೆ. 

85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!

ಕೆಲ ಕಾರಣಗಳಿಂದಾಗಿ ಆರಂಭದಿಂದಲೇ ವಿವಾದಗಳನ್ನು ಹೊದ್ದುಕೊಂಡಿರುವ ಅಭಾ 85 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 21 ದಿನ ಬಾಕಿ. ಈ ಹಂತದಲ್ಲಿ ವಿವಾದಗಳು ಶಮನವಾಗದೆ ಹೋದಲ್ಲಿ ವಾತಾವರಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳೇ ಅಧಿಕ. ಇದನ್ನೆಲ್ಲ ಮನಗಂಡು ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ನುಡಿಜಾತ್ರೆ ಹಾಳಾಗಬಾರದು ಎಂದು ತಾವೇ ಸಾಹಿತಿಗಳ ಸಖ್ಯ ಅರಸಿ ಹೆಜ್ಜೆ ಹಾಕುತ್ತಿದ್ದಾರೆ. 

ದೇಣಿಗೆ ನೀಡುವಂತೆ ಮನವಿ: 

85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 14.15 ಕೋಟಿ ರು. ಅಂದಾಜು ವೆಚ್ಚ ಸಂಭವ ಎಂದಿರುವ ಡಿಸಿ ಶರತ್ ಈಗಾಗಲೇ ದೇಣಿಗೆ ನೀಡಲು ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಸಾಧ್ಯವಿದ್ದಷ್ಟು ವೆಚ್ಚ ತಗ್ಗಿಸುವ ಯತ್ನಗಳು ಸಾಗಿವೆ. ಹೀಗಾಗಿ ಸಚಿವರ ಆದೇಶದಂತೆ ಮತ್ತು ಸರ್ವ ಜನರನ್ನು ಒಳಗೊಂಡು ಸಮ್ಮೇಳನ ನಡೆಸುವ ಉದ್ದೇಶದಿಂದ ಸಾಮಾಜಿಕವಾಗಿ, ಉದ್ದಿಮೆದಾರರಿಂದ, ಜನರಿಂದ ಕನ್ನಡ ಸೇವೆಗೆ ದೇಣಿಗೆ ಸಂಗ್ರಹಿಸುವ ದಿಶೆಯಲ್ಲಿ ತಾವು ಚುರುಕಾಗಿ ಕೆಲಸ ಮಾಡಲಾಗುವುದು ಎಂದಿದ್ದಾರೆ. 

ಸಮ್ಮೇಳನದ ಗೋಷ್ಠಿ, ಕವಿಗೋಷ್ಠಿ ಇತ್ಯಾದಿಗಳಲ್ಲಿ ಪಾಲ್ಗೊಳ್ಳಲೂ ಸಹ ಹಣ ಕೇಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ ಕೆಲವು ಕನ್ನಡಪರ ಸಂಘಟನೆಗಳವರು ನಡೆಸಿದ ಕ್ಯಾಂಡಲ್ ಮಾರ್ಚ್ ಜಿಲ್ಲಾಧಿಕಾರಿಗಳನ್ನು ತುಂಬ ಘಾಸಿಗೊಳಿಸಿದ್ದು, ಈ ಬೆಳವಣಿಗೆಯ ನಂತರವೇ ಅವರು ಚುರುಕಾಗಿ ಸಾಹಿತಿಗಳು, ಹೋರಾಟಗಾರರನ್ನರಸಿ ಸಭೆಗೆ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. 35 ವರ್ಷದ ನಂತರ ಕಲಬುರಗಿಯಲ್ಲಿ ಸಮ್ಮೇ ಳನ ನಡೆಯುತ್ತಿದೆ. ಇದನ್ನು ಹಬ್ಬದ ಸಂಭ್ರಮದಲ್ಲಿ ಖುಷಿ ಪಡಬೇಕು. ಆದರೆ ಕಲಬುರಗಿಯಲ್ಲಿ ಅದ್ಯಾಕೋ ನಾನಾ ಕಾರಣಗಳಿಂದಾಗಿ ಸಮ್ಮೇಳನದ ಸುತ್ತ ವಿವಾದಗಲೇ ಸುತ್ತಿಕೊಳ್ಳುತ್ತಿವೆ. ಮುಂದಿನ ದಿನ ಇದಿನ್ನೂ ಹೆಚ್ಚುವ ಸಾಧ್ಯತೆಗಳೇ ಅಧಿಕ. ಏನೇ ಆಗಲಿ, ಸಮ್ಮೇಳನ ಸುಸುತ್ರವಾಗಿ ಸಾಗಲೇಬೇಕು. ಅದಕ್ಕಾಗಿ ವೇದಿಕೆ ಸಿದ್ಧಪಡಿಸಬೇಕು ಎಂಬುದೇ ತಮ್ಮ ಕಳಕಳಿ ಎಂದು ಜಿಲ್ಲಾಧಿಕಾರಿ ಆಪ್ತ ವಲಯ ದಲ್ಲಿ ಚರ್ಚಿಸಿದ್ದು ಅದರಂತೆಯೇ ಕಾರ್ಯೋ ನ್ಮುಖರಾಗಿದ್ದಾರೆ. 

ಸಂಪೂರ್ಣ ಪಾರದರ್ಶಕತೆ: 

ಸಮ್ಮೇಳನದ ಸಕಲ ಸಿದ್ಧತೆಗಾಗಿ 16 ಸಮಿತಿಗಳಿವೆ. ಲೆಕ್ಕಪತ್ರದ ಮೇಲುಸ್ತುವಾರಿಗೂ ಅಂದಾಜು ಸಮಿತಿ ಇದೆ. ಯಾವುದೇ ವೆಚ್ಚದ ಬಾಬ್ತು ಇವೆಲ್ಲ ಸಮಿತಿಗಳಿಂದ ಪಾಸಾಗಿಯೇ ಬರಬೇಕು. ಎಲ್ಲಿಯೂ ನಯಾಪೈಸೆ ಕಲಬುರಗಿ ಕನ್ನಡ ಭವನದಲ್ಲಿ ಸಂಕ್ರಮಣದ ದಿನವೇ ಡಿಸಿ ಶರತ್ ಕಸಾಪ ಪದಾಧಿಕಾರಿಗಳ ಸಭೆ ಕರೆದು ಎಳ್ಳು-ಬೆಲ್ಲ ಹಂಚಿ ನುಡಿ ಜಾತ್ರೆಗೆ ಸಹಕಾರ ಕೋರಿದರು ಕಲಬುರಗಿ ಡಿಸಿ ಬಿ.ಶರತ್ ಅವರು ತಮ್ಮ 1 ತಿಂಗಳ ವೇತನವನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ದೇಣಿಗೆ ನೀಡಿದರು. 

ಬುಧವಾರ ಬೆಳಗ್ಗೆ ಕನ್ನಡ ಭವನದಲ್ಲಿಯೇ ಡಿಸಿ ಶರತ್ ಸಾಹಿತಿಗಳ ಸಭೆ ಕರೆಯುವ ಮೂಲಕ ಎಲ್ಲರಿಗೂ ಎಳ್ಳು-ಬೆಲ್ಲ ಕೊಟ್ಟು ಶುಭ ಓಕರಿದರಲ್ಲದೆ ಸಮ್ಮೇಳನಕ್ಕೆ ಸಹಕಾರ ಕೇಳಿದ್ದಾರೆ. ಇದರೊಂದಿಗೆ ಡಿಸಿ ತಾವೇ ಮುಂದಾಗಿ ತಮ್ಮ 1 ತಿಂಗಳ ವೇತನವನ್ನೇ ಆರ್ಥಿಕವಾಗಿ ನೆರವು ಎಂದು ಕನ್ನಡಮ್ಮನ ಸೇವೆಗೆ ನೀಡುವ ಮೂಲಕ ದೇಣಿಗೆ ಸಂಗ್ರಹಕ್ಕೂ ಶುಭಾರಂಭ ಮಾಡಿದ್ದಾರೆ. 

ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಶರತ್ ಅವರು ತಮ್ಮ 1 ತಿಂಗಳ ವೇತನ 97,461 ರು.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಗೆ ಚೆಕ್ ನೀಡಿದರು. 

ಜಿಲ್ಲಾಧಿಕಾರಿಗಳಿಂದ 97,461 ರು. ದೇಣಿಗೆ ಆಚೀಚೆ ಆಗಬಾರದು. ಹಾಗೆ ನೋಡಿಕೊಂಡಿದ್ದಾಗಿ ಹೇಳುವ ಡಿಸಿ ಶರತ್ ಎಲ್ಲಾ ಹಂತದಲ್ಲಿ ಹಣಕಾಸು ವೆಚ್ಚದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಇರಾದೆ ತಮ್ಮದಾಗಿದೆ. ಯಾರೇ ಏನೇ ಹೇಳಲಿ, ಏನೇ ಶಾಪ ಹಾಕಲಿ, ಹಣಕಾಸು ವಿಚಾರದಲ್ಲಿ ಮಾತ್ರ ತುಂಬ ಕಟ್ಟುನಿಟ್ಟಿನ ನಿರ್ಣಯ ತಮ್ಮದಾಗಿರುತ್ತವೆ ಎಂದೂ ಶರತ್ ಹೇಳುವ ಮೂಲಕ ಅಂಧಾದುಂಧಿ ವ್ಯವಹಾರಕ್ಕೆ ಅವಕಾಶವಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಕಸಾಪ ಅಧ್ಯಕ್ಷರಿಂದ 1 ದಿನದ ವೇತನ ದೇಣಿಗೆ

85 ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರು ತಮ್ಮ ಒಂದು ತಿಂಗಳ ವೇತನ ದೇಣಿಗೆ ನೀಡಿದ್ದರಿಂದ ಪ್ರೇರಣೆಗೊಂಡ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರು ಸಹ ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. 

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಸಮ್ಮೇಳನ ಹಿನ್ನೆಲೆಯಲ್ಲಿ ನಡೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಗೆ ಒಂದು ತಿಂಗಳ ವೇತನದ ಚೆಕ್ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸಿಂಪಿಯವರೂ ತಮ್ಮ 1 ದಿನದ ವೇತನ ನೀಡುವುದಾಗಿ ತಿಳಿಸಿದರು. ಪ್ರೊಬೇಷನರ್ ಐಎಎಸ್ ಅಧಿಕಾರಿ ಗೋಪಾಲಕೃಷ್ಣ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಗೌರವ ಕಾರ್ಯದರ್ಶಿ ಡಾ.ವಿಜಯಕುಮಾರ ಪರುತೆ, ಗೌರವ ಕೋಶಾಧ್ಯಕ್ಷ ದೌಲತರಾವ್ ಪಾಟೀಲ ಇದ್ದರು.
 

Follow Us:
Download App:
  • android
  • ios