ಬಾಗಲಕೋಟ ಅಲ್ಲ ಬಾಗಲಕೋಟೆ ಬಳಸಿ..!

* ಬಾಗಲಕೋಟೆ ಎಂದು ಬಳಸಲು ರಾಜ್ಯ ಪತ್ರ ಹೊರಡಿಸಿದ್ದ ಸರ್ಕಾರ
* ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲೂ ಬಾಗಲಕೋಟೆ ಎಂದು ಬಳಸಲು ಸೂಚನೆ
* ಇಲ್ಲಿಯವರೆಗೆ ಬಾಗಲಕೋಟ ಎಂದು ಬಳಸುತ್ತಿದ್ದ ಸಾರ್ವಜನಿಕರು
 

District Administration Order to use Bagalkote Not Bagalkot grg

ಬಾಗಲಕೋಟೆ(ಜು.03):  ಬಾಗಲಕೋಟೆ ಜಿಲ್ಲೆಯನ್ನು ಬಾಗಲಕೋಟ ಎಂದು ಬಳಸುತ್ತಿರುವುದನ್ನು ಸರಿಪಡಿಸಿ ಇದೀಗ ಬಾಗಲಕೋಟೆ ಪದ ಬಳಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ಹೊಸ ಜಿಲ್ಲೆಯಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಈ ಹಿಂದೆ 1997ರ ಸೆಪ್ಟಂಬರ್‌ 2ರಂದು ಹೊರಡಿಸಿದ ರಾಜ್ಯ ಪತ್ರದ ಅನ್ವಯ ಬಾಗಲಕೋಟೆ ಎಂದು ಬಳಸಲು ಜಿಲ್ಲಾಧಿಕಾರಿ  ಆದೇಶ ಹೊರಡಿಸಿದ್ದಾರೆ. 

ಬಿಜೆಪಿಯಲ್ಲಿ ಕಚ್ಚಾಟ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸ್ಥಿತಿ, ಪಾಟೀಲ

ಜೂ.22ರಂದು ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಇನ್ನೂ ಮುಂದೆ ಬಾಗಲಕೋಟೆ ಎಂದು ಬಳಸಲು ಸೂಚಿಸಿರುವ ಅವರು ಸಾರ್ವಜನಿಕ ರೂಢಿ ಕೃತವಾಗಿ ಈವರೆಗೆ ಬಳಸಲಾಗುತ್ತಿದ್ದ ಬಾಗಲಕೋಟ ಎಂಬ ಭಾಷೆಯನ್ನು ಬಳಸಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
 

Latest Videos
Follow Us:
Download App:
  • android
  • ios