ಬೊಮ್ಮಾಯಿ ಸಿಎಂ ಸ್ಥಾನ ಬಿಟ್ಟುಕೊಡಬೇಕಂತೆ ಈ ಭೂಪನಿಗೆ: ಈತನ ಡಿಮ್ಯಾಂಡ್‌ಗೆ ತಬ್ಬಿಬ್ಬಾದ ಪತ್ರಕರ್ತರು..!
* ಗುಮ್ಮಟನಗರಿ ವಿಜಯಪುರದಲ್ಲೊಬ್ಬ ವಿಚಿತ್ರ ಆಸಾಮಿ
* ಆತ ಹೇಳಿದ್ದನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಿ
* ನನ್ನ ಸಿಎಂ ಚೇರ್ ಮೇಲೆ ಬೇರೆಯವರಿದ್ದಾರೆ, ನನ್ನ ಸ್ಥಾನ ಬಿಟ್ಟುಕೊಡಿ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಮೇ.01): ರಾಜ್ಯದಲ್ಲಿ(Karnataka) ಆಗಾಗ್ಗೆ ಸಿಎಂ ಬದಲಾವಣೆಯ ಮಾತು ಕೇಳಿ ಬರ್ತಿರುತ್ತೆ. ಇನ್ನು ಸಿಎಂ ರೇಸ್ ನಲ್ಲಿ ನಾನು ಇದ್ದೀನಿ ಅಂತ ಹಲವು ನಾಯಕರು ತಮ್ಮ ಮನದಾಳದ ಮಾತನ್ನ ಹೇಳಿಕೊಳ್ತಿರ್ತಾರೆ. ಆ ಮಾತು ಹಾಗಿರಲಿ. ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಸಾಮಿಯೊಬ್ಬ ಹೇಳಿದ್ದನ್ನ ಕೇಳಿ ಮಾಧ್ಯಮದವರೇ ತಬ್ಬಿಬ್ಬುಗೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೇ ತಬ್ಬಿಬ್ಬು
ವಿಜಯಪುರ(Vijayapura) ಜಿಲ್ಲೆಯ ಬಸವನಬಾಗೇವಾಡಿ(Basavana Bagewadi) ನಿವಾಸಿ ಸತೀಶ್ ರಾಠೋಡ್(Satish Rathod) ವಿಜಯಪುರ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾನೆ. ಎಂದಿನಂತೆ ಸುದ್ದಿಗೋಷ್ಠಿಗೆ ಹೋದ ಮಾಧ್ಯಮ ಮಿತ್ರರಿಗೆ ಸತೀಶ್ ರಾಠೋಡ್‌ಗೆ ಸುದ್ದಿಗೋಷ್ಠಿ ಶುರು ಮಾಡಿ ಎಂದಿದ್ದಾರೆ. ಆದ್ರೆ ಈ ವೇಳೆ ಸತೀಶ್ ರಾಠೋಡ್ ಹೇಳಿದ್ದನ್ನ ಕೇಳಿ ಒಂದು ಕ್ಷಣ ಶಾಕ್ ಆಗಿದೆ. ಆತ ಮಾತನಾಡ್ತಾ ಹೋದಂತೆಲ್ಲ, ಆತನ ಮಾತುಗಳನ್ನ ಕೇಳಿ ಪತ್ರಕರ್ತರೇ(Journalists) ತಬ್ಬಿಬ್ಬುಗೊಂಡ ಪ್ರಸಂಗ ನಡೆದಿದೆ.
Basava Jayanti 2022: ಬಸವನ ಬಾಗೇವಾಡಿಯಲ್ಲಿ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ!
ವಿಚಿತ್ರ ಬೇಡಿಕೆ ಇಟ್ಟ ಸತೀಶ್
ಸತೀಶ್ ರಾಠೋಡ್ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಆ ಬೇಡಿಕೆ ಏನು ಅಂತಾ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಸತೀಶ್ ರಾಠೋಡ್‌ಗೆ ಬೇಕಾಗಿರೋದು ಹೊಲ, ಮನೆ, ಆಸ್ತಿ, ಸಹಾಯ ಅಲ್ಲ ಜನರಿಗೆ ಉಂಟಾಗಿರೋ ಸಮಸ್ಯೆಗೆ ಪರಿಹಾರವು ಅಲ್ಲ. ಸತೀಶ್ ರಾಠೋಡ್ ಕೇಳಿದ್ದು ಸಿಎಂ(Chief Minister of Karnataka) ಚೇರ್.... ಅಚ್ಚರಿಯಾದ್ರೂ ನಿಜ. ಸತೀಶ್ ನನಗೆ ಸಿಎಂ ಚೇರ್ ಬೇಕು ಎಂದಿದ್ದಾನೆ.
ಸಿಎಂ ಸೀಟ್ ನಂದು, ನಾನೇ ಸಿಎಂ ಎಂದ ಆಸಾಮಿ
ಸತೀಶ್ ರಾಠೋಡ್ ಸಿಎಂ ಚೇರ್ ನಂದೆ.. ನಾನು ಇರಬೇಕಾದ ಸ್ಥಾನದಲ್ಲಿ ಮತ್ಯಾರೋ ಕೂತಿದ್ದಾರೆ. ನನ್ನ ಸಿಎಂ ಚೇರ್ ನನಗೆ ಕೊಡಿಸಿ ಎಂದಿದ್ದಾನೆ. ನಾನೇ ಸಿಎಂ, ಆದ್ರೆ ನನ್ನ ಕುರ್ಚಿ ಮೇಲೆ ಬೇರೆಯವರಿದ್ದಾರೆ. ನನ್ನ ಸೀಟ್ ನನಗೆ ಬಿಟ್ಟುಕೊಡಬೇಕು ಎಂದಿದ್ದಾರೆ. ನನ್ನ ಸೀಟ್ ಮೇಲೆ ಬೇರೆಯವರು ಕೂತ್ರೆ ಹೇಗೇ? ಎಂದು ಪ್ರಶ್ನೆ ಮಾಡಿದ್ದಾನೆ.
ಸಿಎಂ ಚೇರ್ ಬಿಟ್ಕೊಡಿ ಇಲ್ಲಾ ಕೊರೋನಾ, ಭೂಕಂಪ ಪಿಕ್ಸ್ ಎಂದ ಭೂಪ
ಇಷ್ಟೆ ಆಗಿದ್ರೆ ಪರವಾಗಿರಲಿಲ್ಲ, ನನ್ನ ಸಿಎಂ ಚೇರ್ ಮೇಲೆ ಬೇರೆಯವ್ರು ಕೂತ್ರೆ ಕೊರೋನಾ(Coronavirus) ಕಡಿಮೆ ಆಗಲಿ ಅಂದ್ರೆ ಹೇಗೆ ಆಗುತ್ತೆ ಅಂತಾ ಪ್ರಶ್ನಿಸಿದ್ದಾನೆ. ಕೊರೋನಾ ಕಡಿಮೆ ಆಗಬೇಕು ಅಂದ್ರೆ ನನ್ನ ಸೀಟ್ ನನಗೆ ಬಿಟ್ಟು ಕೊಡಬೇಕು. ನನಗೆ ನನ್ನ ಸಿಎಂ ಸ್ಥಾನ ಬಿಟ್ಟು ಒಡದೆ ಹೋದ್ರೆ ಕೊರೋನಾ ಹೆಚ್ಚಾಗುತ್ತೆ ಎಂದಿದ್ದಾನೆ. ಆಗಾಗ್ಗ ಭೂಕಂಪ(Earthquake) ಆಗ್ತಿದೆ, ಬೇಸಿಗೆಯಲ್ಲಿ ಮಳೆ(Summer Rain) ಆಗ್ತಿದೆ.. ಇದೆಲ್ಲ ಆಗ್ತಿರೋದೆ ನನ್ನ ಸಿಎಂ ಸೀಟ್ ಮೇಲೆ ನನ್ನ ಬಿಟ್ಟು ಮತ್ಯಾರೋ ಕುಳಿತಿರೋದಕ್ಕೆ ಅಂತ ಹೇಳಿದ್ದಾನೆ.
'PSI ಅಕ್ರಮ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಪಾತ್ರಧಾರರೇ'
ಗ್ಯಾಸ್, ಪೆಟ್ರೋಲ್ ದರ ಇಳಿಬೇಕು ಅಂದ್ರೆ ನನಗೆ ನನ್ನ ಸಿಎಂ ಸೀಟ್ ಕೊಡಿ
ಈ ಭೂಪನ ಮಾತು ಇಲ್ಲಿಗೆ ನಿಂತಿಲ್ಲ. ದೇಶದ ಜನರೇ ತನ್ನನ್ನ ಸಿಎಂ ಸೀಟ್ ಮೇಲೆ ಕೂರಿಸಬೇಕಂತೆ. ಎಷ್ಟು ಬೇಗ ಜನರು ಇವನನ್ನ ಸಿಎಂ ಸೀಟ್ ಮೇಲೆ ಕೂರಿಸ್ತಾರೋ ಅಷ್ಟು ಬೇಗ ಒಳ್ಳೆಯದು ಆಗುತ್ತಂತೆ. ಸಿಎಂ ಸೀಟ್ ಬಿಟ್ಟುಕೊಟ್ಟರೇ ಗ್ಯಾಸ್, ಪೆಟ್ರೋಲ್ ದರ ಇಳಿಕೆಯಾಗುತ್ವಂತೆ. ತನ್ನ ಸಿಎಂ ಚೇರ್ ಮೇಲೆ ಬೇರೆಯವರು ಕುಂತಿದ್ದರಿಂದ ಹೀಗೆಲ್ಲ ಆಗ್ತಿದೆ ಎಂದಿದ್ದಾನೆ ಆಸಾಮಿ.
ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ
ಸುದ್ದಿಗೋಷ್ಠಿ ಕರೆದು ಇಷ್ಟೆಲ್ಲ ಹೇಳಿದ ಸತೀಸ್ ರಾಠೋಡ್‌ಗೆ ಏನಾದ್ರು ಮಾನಸಿಕ ಸಮಸ್ಯೆ ಇದೆಯಾ ಎನ್ನುವ ಬಗ್ಗೆ ಪ್ರೇಸ್ಮಿಟ್‌ಗೆ ಹಾಜರಾದವರ ತಲೆಯಲ್ಲಿ ಬಂದಿದೆ. ಜನರ ಜೊತೆಗೆ ಚೆನ್ನಾಗಿಯೇ ವರ್ತಿಸುವ ಈತನಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದ್ದಂತೆ ಕಂಡು ಬಂತು. ಕುಟುಂಬಸ್ಥರು ಈತನನ್ನ ಮಾನಸಿಕ ತಜ್ಞರ ಬಳಿ ಸಮಾಲೋಚನೆಗೆ ಕೊಂಡೊಯ್ದಲ್ಲಿ ಮುಂದಾಗೋ ಅಪಾಯ ತಪ್ಪಿಸಬಹುದಾಗಿದೆ.