ನಾಳೆ ಬೆಂಗ್ಳೂರಿನ ಹಲವೆಡೆ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಕರೆಂಟ್ ಇರಲ್ಲ!
ಬಸವನಗುಡಿ, ಚಾಮರಾಜಪೇಟೆ, ಹಂಪಿನಗರ ಸೇರಿ ವಿವಿದೆಡೆ ನಾಳೆ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ ಬೆಸ್ಕಾಂ.
ಬೆಂಗಳೂರು(ಡಿ.19): ನಗರ ಬಸವನಗುಡಿ, ಚಾಮರಾಜಪೇಟೆ, ಹಂಪಿನಗರ ಸೇರಿ ವಿವಿದೆಡೆ ಡಿ.20ರ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನ್ಯಾಷನಲ್ ಕಾಲೇಜು ಹಾಗೂ ಚಂದ್ರಾ ಲೇಔಟ್‌ನ ವಿದ್ಯುತ್ ವಿತರಣಾ ಘಟಕದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಚಾಮರಾಜಪೇಟೆ, ಆಜಾದ್ ನಗರ, ಸರ್ವೇಯಸ್ ಸ್ಟ್ರೀಟ್, ಎಚ್.ಬಿ. ಸಮಾಜ ರೋಡ್, ಗಾಂಧಿಬ ಜಾರ್, ಮೈಸೂರು ರಸ್ತೆ, ಎನ್.ಟಿ.ಪೇಟೆ, ಸಿರ್ಸಿ ರೋಡ್, ಬುಲ್ ಟೆಂಪಲ್ ರಸ್ತೆ, ಸಜ್ಜನ್‌ರಾವ್ ಸರ್ಕಲ್, ಕಿಮ್ಸ್ ಆಸ್ಪತ್ರೆ, ಮಾರ್ಕೆಟ್ ರಸ್ತೆ, ವಿವಿಪುರ, ಕೆ.ಆರ್.ರಸ್ತೆ, ವಾಣಿವಿಲಾಸ ರಸ್ತೆ, ಮಿನರ್ವ ಸರ್ಕಲ್, ಹನುಮಂತನಗರ, ಕನಕಪುರ ರಸ್ತೆ, ಸೌತ್ ಎಂಟ್ ವೃತ್ತ, ಬಸವನಗುಡಿ, ಶಂಕರಪುರ, ಕೆ.ಜಿ.ನಗರ, ಡಿವಿಜಿ ರಸ್ತೆ, ಆರ್‌ವಿ ರಸ್ತೆ, ಜೈನ್ ಟೆಂಪಲ್ ರಸ್ತೆ, ಬಿ.ಪಿ.ವಾಡಿಯಾ ರಸ್ತೆ, ಎಸ್.ಕರಿಯಪ್ಪ ರಸ್ತೆ, ಬುರುಗಲ್ ಮಠ ರಸ್ತೆ, ಚಂದ್ರಾ ಲೇಔಟ್ ಸರ್ವೀಸ್ ರಸ್ತೆ, ಆರ್‌ಪಿಸಿ ಲೇಔಟ್, ರೆಮೋ ಲೇಔಟ್, ಕಲ್ಯಾಣ ಲೇಔಟ್.
ಕೈಕೊಟ್ಟ ನೂತನ ಸಾಫ್ಟ್‌ವೇರ್: ಬೆಸ್ಕಾಂ ಸೇವೆ ಸ್ಥಗಿತ
ಹಂಪಿನಗರ, ಸುಬ್ಬಣ್ಣ ಗಾರ್ಡನ್, ವಿಡಿಯಾ ಲೇಔಟ್, ಎಂ.ಆರ್ .ಸಿ.ಆರ್ ಲೇಔಟ್, ಬಾಪೂಜಿ ಲೇಔಟ್, ವಿನಾಯಕ ಲೇಔಟ್, ಜಿಕೆ ಡಬ್‌ಲ್ಯೂ ಲೇಔಟ್, ಶಿವಾನಂದ ನಗರ, ಮೂಡಲ ಪಾಳ್ಯ, ಅನುಭವನಗರ, ವೈಯಾಲಿಕಾವಲ್, ಸೈಲೈನ್ ಅಪಾರ್ಟ್‌ಮೆಂಟ್, ನಂಕರಸಪ್ಪ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಎಚ್‌ಬಿಎಸ್ ಲೇಔಟ್, ವಿದ್ಯಾಗಿರಿ ಲೇಔಟ್, ಮಾರುತಿ ನಗರ, ಜ್ಯೋತಿನಗರ, ಸುವರ್ಣ ಲೇಔಟ್, ಸಿದ್ದಗಂಗಾ ಸ್ಕೂಲ್ ಹಿಂಭಾಗ.
ಗಂಗೂಂಡ ನಹಳ್ಳಿ ಸ್ಲಂ, ನಾಗರಬಾವಿ ಸರ್ಕಲ್, ಎನ್‌ಜಿಇಎಫ್ ಲೇಔಟ್, ನಾಗರ ಬಾವಿ ಪಾರ್ಟ್ ಆಫ್ ವಿನಾಯಕ ಲೇಔಟ್, ಬಿಡಿಎ 13 ಮತ್ತು 14ನೇ ಬ್ಲಾಕ್, ಕೆಂಗುಂಟೆ, ಕಲ್ಯಾಣ ನಗರ, ಭೈರವೇಶ್ವರನಗರ, ಆದರ್ಶ ನಗರ, ಕೊಕನಟ್ ಗಾರ್ಡನ್ ಸಂಜೀವಿನಿ ನಗರ, ಪಂಚಶೀಲನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೊಬೈಲ್ ರಿಚಾರ್ಜ್‌ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್ ಪ್ಲಾನ್; ನೀವು ಹಣ ಕಟ್ಟಿದಷ್ಟೇ ಕರೆಂಟ್ ಸಪ್ಲೈ!
ಬೆಂಗಳೂರು: ಬೆಂಗಳೂರಿನಲ್ಲಿ ಇನ್ನುಮುಂದೆ ಮೊಬೈಲ್ ರೀಚಾರ್ಜ್ ಮಾದರಿಯಲ್ಲಿಯೇ ಅಡ್ವಾನ್ಸ್ ಆಗಿಯೇ ಬೆಸ್ಕಾಂ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಅನ್ನು ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ನೀವು ರೀಚಾರ್ಜ್ ಮಾಡಿದ ಹಣದ ಮೌಲ್ಯದಷ್ಟು ವಿದ್ಯುತ್ ಪೂರೈಕೆಯಾದ ನಂತರ ತಂತಾನೆ ಸ್ಥಗಿತಗೊಳ್ಳುತ್ತದೆ. ಆಗ ಪುನಃ ರೀಚಾರ್ಜ್ ಮಾಡಿ ವಿದ್ಯುತ್ ಪೂರೈಕೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲು ಬೆಸ್ಕಾಂ ಮುಂದಾಗಿದೆ.
ಬೆಂಗಳೂರು ಟೆಂಡರ್ ಶ್ಯೂರ್ ರಸ್ತೆಗಳ ಮೇಲಿನ ಕೇಬಲ್ ತೆರವುಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ!
ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ವಾಸ ಮಾಡುವ ಜನರಿಂದ ದೊಡ್ಡ ಮಟ್ಟದಲ್ಲಿಯೇ ಹಣ ವಸೂಲಿ ಮಾಡಿ ಸುಗಮ ಸೇವೆಯನ್ನು ಕೊಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ಕೊಡಲು ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಮನೆಗಳಿಗಾಗಲೇ ನೀವು ಗೇಲ್ ಗ್ಯಾಸ್‌ನಿಂದ ಎಷ್ಟು ಮೀಟರ್ ಅಳವಡಿಕೆ ಮಾಡಿ ಗ್ಯಾಸ್ ಸಪ್ಲೈ ಮಾಡಲಾಗುತ್ತದೆ. ನೀವು ಬಳಕೆ ಮಾಡುವಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ವಿದ್ಯುತ್, ನೀರಿನ ಬಿಲ್ ಸೇರಿದಂತೆ ಎಲ್ಲವೂ ಇದೇ ರೀತಿ ನಾವು ಬಳಕೆ ಮಾಡಿದಷ್ಟು ಹಣ ಪಾವತಿ ಮಾಡಬೇಕಿತ್ತು. ಆದರೆ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಸ್ಕಾಂ ಮೊದಲು ನೀವು ಹಣ ಪಾವತಿ ಮಾಡಿ ರೀಚಾರ್ಜ್ ಮಾಡಿಕೊಂಡ ಹಣದ ಮೊತ್ತಕ್ಕೆ ಎಷ್ಟಾಗುತ್ತದೆಯೋ ಅಷ್ಟು ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಹಣ ಪಾವತಿ ಮಾಡಿದಷ್ಟು ವಿದ್ಯುತ್ ಪೂರೈಸಿದ ನಂತರ ಕರೆಂಟ್ ಸ್ಥಗಿತವಾಗಿತ್ತದೆ. ಪುನಃ ಮೊಬೈಲ್ ರೀಚಾರ್ಜ್‌ನಂತೆ ಕರೆಂಟ್ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಪೂರೈಕೆಯನ್ನು ಪಡೆಯಬಹುದು.