ಹುಬ್ಬಳ್ಳಿ, [ಫೆ.07]: ಭಗ್ನ ಪ್ರೇಮಿಯೊಬ್ಬ ನಿರಂತರವಾಗಿ ಕರೆ ಮಾಡಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿಗೆ ದೊಡ್ಡ ತಲೆ ಬಿಸಿಯಾಗಿದ್ದಾನೆ. 

ಗೋವಾ ಮೂಲದ ರಾಯ್‌ ಡಯಾಸ್‌ ಎನ್ನುವಾತ ದುಬೈನಲ್ಲಿ ನೆಲೆಸಿದ್ದು, ಅಲ್ಲಿಂದಲೇ ಈತ ದಿನ ನಿತ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಂಚಾರ ನಿಯಂತ್ರಿಸುವ ಅತಿ ಸೂಕ್ಷ್ಮ ಸ್ಥಳ 'ಏರ್‌ ಟ್ರಾಫಿಕ್‌ ಕಂಟ್ರೋಲ್‌' (ಎಟಿಸಿ)ಗೆ ನಿತ್ಯ ಕರೆ ಮಾಡಿ ನನ್ನ ಪ್ರೇಯಸಿಗೆ ಕೊಡಿ ಎಂದು ಪೀಡುಸುತ್ತಿದ್ದಾನೆ. 

ಪ್ರೀತಿ ಮಾಡಲು ನಿರಾಕರಣೆ : ಸ್ನೇಹಿತೆಯ ಮೇಲೆ ಅತ್ಯಾಚಾರ

ಇದ್ರಿಂದ ಬೇಸತ್ತಿರುವ ಅಧಿಕಾರಿಗಳು, ಭಗ್ನ ಪ್ರೇಮಿಯ ಕಾಟ ತಾಳಲಾರದೇ ಈತನ ಕಾಟ ತಪ್ಪಿಸಿ ಎಂದು ಪೊಲೀಸ್‌ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಕಳೆದ ಒಂದೂವರೆ ವರ್ಷದಿಂದ ಇಲ್ಲಿನ ವಿಮಾನ ನಿಲ್ದಾಣದ ವಿಮಾನ ಸಂಚಾರ ನಿಯಂತ್ರಿಸುವ ಅತಿ ಸೂಕ್ಷ್ಮಸ್ಥಳ 'ಏರ್‌ ಟ್ರಾಫಿಕ್‌ ಕಂಟ್ರೋಲ್‌' (ಎಟಿಸಿ)ಗೆ ನಿತ್ಯ ಕರೆ ಮಾಡುತ್ತಿದ್ದಾನೆ ಎಂದು ಸ್ವತಃ ಏರ್‌ಪೋರ್ಟ್‌ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. 

ವಿಮಾನಗಳ ಸಂಚಾರ ವೇಳೆಯೇ ರಾಯ್‌ ಡಯಾಸ್‌ ನಿರಂತರ ಕರೆ ಮಾಡುತ್ತಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿ ಬಾರಿ ಫೋನ್‌ ಮಾಡಿದಾಗಲೂ ನನ್ನ ಪ್ರೇಯಸಿಗೆ ಕೊಡಿ ಎಂದು ದುಂಬಾಲು ಬೀಳುತ್ತಾನೆ.

ಏರ್‌ಪೋರ್ಟ್‌ ಹಿಂದಿನ ನಿರ್ದೇಶಕ ಶಿವಾನಂದ ಬೇನಾಳ ಅವಧಿಯಿಂದಲೂ ದಿನಕ್ಕೆ 40-50 ಬಾರಿ ಕರೆ ಮಾಡುತ್ತಿದ್ದಾನೆ. ಏನೂ ಉತ್ತರ ಕೊಡದೇ ಸುಮ್ಮನಿದ್ದರೆ ನಿಮ್ಮ ವಿಮಾನ ನಿಲ್ದಾಣವನ್ನು ಬ್ಲಾಸ್ಟ್ ಮಾಡುತ್ತೇನೆಂದು ಬೆದರಿಕೆ ಹಾಕುತ್ತಾನೆ ಎಂದು ಇಲ್ಲಿನ ಅಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.