ಬೆಂಗಳೂರು :  ತನ್ನ ಗೆಳತಿಗೆ ನಿದ್ರೆ ಮಾತ್ರೆ ಮಿಶ್ರಣ ಮಾಡಿದ ಕಿತ್ತಲೆ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ದೆಹಲಿ ಮೂಲ ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ನನ್ನು ಬೆಳ್ಳಂದೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಳ್ಳಂದೂರು ಸಮೀಪದ ನಿವಾಸಿ ಮೈಕೆಲ್ ಸೊರೆಂಗ್ ಬಂಧಿತನಾಗಿದ್ದು, ತನ್ನ ಫ್ಲ್ಯಾಟ್‌ಗೆ ಭಾನುವಾರ ಸ್ನೇಹಿತೆಯನ್ನು ಕರೆಸಿಕೊಂಡು ಆರೋಪಿ ಈ ಕೃತ್ಯ ಎಸಗಿದ್ದ. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಯಸ್ಸಿಗಿಂತ ಹಿರಿಯವಳು: 32 ವರ್ಷದ ಸಂತ್ರಸ್ತೆ ಮೂಲ ತಃ ಜಾರ್ಖಂಡ್ ರಾಜ್ಯದವರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಪ್ರಾರ್ಥನಾ ಮಂದಿರದಲ್ಲಿ ಪಾದ್ರಿ ಮೂಲಕ ಆಕೆಗೆ ಕಿರಿಯ ವಯಸ್ಸಿನ ಮೈಕೆಲ್ ಪರಿಚಯವಾಗಿತ್ತು. ಬಳಿಕ ಕಾಲ ಕ್ರಮೇಣ ಅವರಿಬ್ಬರ ಆತ್ಮೀಯ ಒಡನಾಟ ಬೆಳೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

‘ಇತ್ತೀಚಿಗೆ ಮನೆಗೆ ಊಟಕ್ಕೆ ಕರೆದಿದ್ದ ಆತ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇಬ್ಬರೂ ಮದುವೆ ಆಗೋಣ ಎಂದಿದ್ದ. ಈ ಪ್ರಸ್ತಾಪಕ್ಕೆ ಆಕ್ಷೇಪಿಸಿದ ನಾನು, ನನಗಿಂತ ವಯಸ್ಸಿನಲ್ಲಿ ನೀನು ೯ ವರ್ಷ ಚಿಕ್ಕವನು. ನಮ್ಮಿಬ್ಬರ ಜೋಡಿ ಸರಿ ಹೋಗುವುದಿಲ್ಲ. ಸ್ನೇಹಿತನಾಗಿಯೇ ಇರೋಣ ಎಂದು ಎಂದು ಬುದ್ಧಿ ಮಾತು ಹೇಳಿದ್ದೆ. ಕೊನೆಗೆ ಈ ಮಾತಿಗೆ ಸಮ್ಮತಿಸಿದ ಆತ ನನಗೆ ಕುಡಿಯಲು ಕಿತ್ತಲೆ ಜ್ಯೂಸ್ ನೀಡಿದ. ನನಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ. 

ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆ ಯಿತು. ಕೆಲ ಹೊತ್ತಿನ ನಂತರ ತಲೆ ಸುತ್ತಿದಂತಾಗಿ ಪ್ರಜ್ಞೆ ಕಳೆದುಕೊಂಡೆ. ಈ ವೇಳೆ ಮೈಕೆಲ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಒಂದು ತಾಸಿನ ಬಳಿಕ ಎಚ್ಚರವಾಯಿತು. ಆಗ ಮೈಕೆಲ್ ಇರಲಿಲ್ಲ. ಸ್ನೇಹಿತೆಯ ಸಲಹೆಯಂತೆ ಮೈಕೆಲ್‌ನನ್ನೇ ಮದುವೆ ಆಗುವ ನಿರ್ಧಾರಕ್ಕೆ ಬಂದೆ. ಆದರೆ ಆತ ಮೊಬೈಲ್ ಸಂಪರ್ಕಕ್ಕೆ ಸಿಗಲೇ ಇಲ್ಲ. ಹೀಗಾಗಿ ಆತನ ವಿರುದ್ಧ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸುವಂತೆ ಸಂತ್ರಸ್ತೆ ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.