ಯಾದಗಿರಿ(ಏ.16): ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಮೀಪ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕೆ ತೆರಳಲಾಗದೆ, ವಿಕಲಚೇತನ ಪುತ್ರನೊಬ್ಬ ಅಪರ ಜಿಲ್ಲಾಧಿಕಾರಿಗಳೆದುರು ಕಣ್ಣೀರಿಟ್ಟ ಘಟನೆ ಯಾದಗಿರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಜಿಲ್ಲೆಯ ಬಾಡಿಯಾಳ್ ಗ್ರಾಮದ ಯುವಕ ಮಲ್ಲು ಎಂಬಾತನ ತಾಯಿ ರುದ್ರಮ್ಮ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗಿ ಗ್ರಾಮದಲ್ಲಿ ತೀರಿಕೊಂಡಿದ್ದರು. ನಾಡಂಗಿಯಿಂದ ಉತ್ತನೂರಗೆ ಹೋಗುವಾಗ ಈ ಅಪಘಾತ ನಡೆದಿತ್ತು, ತಾಯಿ ಅಂತ್ಯಕ್ರಿಯೆಗೆ ಹೋಗಲು ಅನುಮತಿ ಪಡೆಯಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಲ್ಲು, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಬಳಿ ಕಣ್ಣೀರು ಹಾಕಿದ್ದಾನೆ.

ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ

ತಾಯಿಯ ಅಂತ್ಯಕ್ರಿಯೆಗೆ ಹೋಗಲು ಆಗಲಿಕ್ಕಾಗದಿದ್ದರಿಂದ ಅನುಮತಿ ನೀಡುವಂತೆ ಮನವಿ ಮಾಡಿದ. ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡ, ವಿಕಲಚೇತನ ಮಲ್ಲುವಿನ ಕಣ್ಣೀರಿಗೆ ಸ್ಪಂದಿಸಿದ ಪ್ರಕಾಶ ರಜಪೂತ ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.