ಹೊರ ಜಿಲ್ಲೆ, ರಾಜ್ಯಕ್ಕೆ ಪ್ರಯಾಣಿಸ್ತೀರಾ..? ಹೀಗಿದೆ ಮಾರ್ಗಸೂಚಿ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಸಂವಾದದಲ್ಲಿ ನೀಡಲಾಗಿರುವ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಕೇವಲ ಒಂದು ಬಾರಿ ಮಾತ್ರ ಪ್ರಯಾಣಿಸಲು ಅವಕಾಶವಿದೆ.

 

Directions to be followed while travelling interstate and other districts during lockdown

ಮಂಗಳೂರು(ಮೇ.03): ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಸಂವಾದದಲ್ಲಿ ನೀಡಲಾಗಿರುವ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಕೇವಲ ಒಂದು ಬಾರಿ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ಅರ್ಜಿದಾರರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಹತ್ತಿರದ ಪೊಲೀಸ್‌ ಠಾಣೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಯಾಣಕ್ಕೆ ಅನುಮತಿಯನ್ನು ಪೊಲೀಸ್‌ ಆಯುಕ್ತರು/ಪೊಲೀಸ್‌ ಅಧೀಕ್ಷಕರು/ಪೊಲೀಸ್‌ ಉಪ ಅಯುಕ್ತರ ಕಚೇರಿಯಿಂದ ನೀಡಲಾಗುವುದು. ಕೋವಿಡ್‌ ಲಕ್ಷಣ ರಹಿತರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು.

ಕೊರೋನಾ ಕಂಟಕದ ಮಧ್ಯೆ ನೀರಿನ ಸಂಕಷ್ಟ: ಮಾಹಾ ಮೊರೆ ಹೋದ ಬಿಎಸ್‌ವೈ...!

ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್‌ ಧರಿಸಿ ಮಾರ್ಗಸೂಚಿಯನ್ವಯ ಮುಂಜಾಗ್ರತೆ ವಹಿಸಬೇಕು. ಎಲ್ಲ ಕ್ವಾರಂಟೈನ್‌ ಸಂಬಂಧಿತ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಸಂಚರಿಸುವ ಮಾರ್ಗದ ಮಧ್ಯೆ ಎಲ್ಲಿಯೂ ನಿಲುಗಡೆ ಮಾಡುವಂತಿಲ್ಲ. ನೀಡಲಾಗುವ ಪಾಸ್‌ಗಳನ್ನು ದುರುಪಯೋಗ ಪಡಿಸಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ಇತರ ರಾಜ್ಯಗಳಿಂದ ಆಗಮಿಸುವವರಿಗೆ ಮಾರ್ಗಸೂಚಿ

ದಕ್ಷಿಣ ಕನ್ನಡ ಜಿಲ್ಲೆಗೆ ಇತರೆ ರಾಜ್ಯಗಳಿಂದ ಪ್ರಯಾಣಿಸುವವರು hಠಿಠಿps://sಛಿvasಜ್ಞಿdh್ಠ.ka್ಟ್ಞaಠಿaka.ಜಟv.ಜ್ಞಿ/ ಲಾಗಿನ್‌ ಆಗಿ ತಮ್ಮ ಹೆಸರು ಹಾಗೂ ಇತರ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.

ಕೋವಿಡ್‌ ಲಕ್ಷಣ ರಹಿತರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿ ಬರುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ವೈದ್ಯಕೀಯ ಸ್ಕ್ರೀನಿಂಗ್‌ಗೆ ಒಳಪಟ್ಟಿರಬೇಕು. ಪ್ರಯಾಣಿಕರು ಸರ್ಕಾರಿ ಅಥವಾ ಖಾಸಗಿ ಬಸ್‌, ರೈಲ್ವೆ ವ್ಯವಸ್ಥೆ ಬಳಸಿಕೊಳ್ಳಬಹುದು. ಪ್ರಯಾಣಿಕರು ಟಿಕೆಟ್‌ ಖರೀದಿಸಿ ಪ್ರಯಾಣಿಸಬೇಕು. ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಸಕಲ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು.

8 ತಬ್ಲೀಘಿ ಮೇಲೆ ಮರ್ಡರ್ ಕೇಸ್, ಅಲಿಯಾ ನೀಡಿದ್ರಾ iಫೋನ್ ಪೋಸ್? ಮೇ.2ರ ಟಾಪ್ 10 ಸುದ್ದಿ! 

ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ಸಲಹೆಯಂತೆ ಹೋಂ ಕ್ವಾರಂಟೈನ್‌ ಅಥವಾ ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಮಾಡಲಾಗುವುದು. ಅನುಮೋದಿತ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ಡ್ರೈವಿಂಗ್‌ ಲೈಸಸ್ಸ್‌, ಪಾಸ್‌ಪೋರ್ಟ್‌, ವೋಟರ್‌ ಐಡಿ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಇರಿಸಿಕೊಳ್ಳಬೇಕು. ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಕಂಟ್ರೋಲ್‌ ರೂಂ, ಟೋಲ್‌ ಫ್ರೀ ನಂ. 1070/ 104/ 080-46848600 /080-66692000, 9745697456 / 9980299802 ಬಳಸಬಹುದು.

Latest Videos
Follow Us:
Download App:
  • android
  • ios