ಗೋವಾಗೆ ಹೋಗೋರಿಗೆ ಗುಡ್ ನ್ಯೂಸ್ : ಬೆಂಗಳೂರಿನಿಂದ ಡೈರೆಕ್ಟ್ ಟ್ರೈನ್
ಬೆಂಗಳೂರಿನಿಂದ ಗೋವಾಗೆ ಹೋಗೋರಿಕೆ ಇಲ್ಲಿದೆ ಗುಡ್ ನ್ಯೂಸ್. ಬೆಂಗಳೂರಿನಿಂದ ನೇರ ರೈಲು ಸೇವೆ ಆರಂಭವಾಗಲಿದ್ದು, ಮಾರ್ಚ್ 7 ರಂದು ಚಾಲನೆ ದೊರೆಯಲಿದೆ.
ಮಂಗಳೂರು(ಮಾ.01): ಮಂಗಳೂರಿನ ಪಡೀಲ್ ಬೈಪಾಸ್ ಮಾರ್ಗ ಮೂಲಕ ಯಶವಂತಪುರ- ವಾಸ್ಕೊ ಹೊಸ ರೈಲು [ಮಾ.7] ನಾಳೆಯಿಂದಲೇ ಸಂಚಾರ ಆರಂಭಿಸಲಿದೆ.
ಹೊಸ ರೈಲು ಉಡುಪಿ - ಕುಂದಾಪುರ - ಕಾರವಾರ ಮಾರ್ಗದಲ್ಲಿ ವಾಸ್ಕೋಗೆ ಈ ಹೊಸ ರೈಲು ಸಂಚರಿಸಲಿದೆ.
ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿ ಅವರ ಸೂಚನೆಯಂತೆ ಈ ನಿರ್ಣಯ ಕೈಗೊಳ್ಳಲಾಗಿದೆ. ಕರಾವಳಿ ಕರ್ನಾಟಕದ ರೈಲ್ವೆ ಹೋರಾಟಗಾರರ ಸುದೀರ್ಘ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ.
ಗೋವಾ ಹೋಗೋದಿನ್ನು ಸುಲಭ, ಯಶವಂತಪುರರಿಂದ ಡೈರೆಕ್ಟ್ ಟ್ರೈನ್...
ಶನಿವಾರ ಮಾ.7ರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಯಶವಂತಪುರದಲ್ಲಿ ಈ ರೈಲು ಉದ್ಘಾಟನೆ ಮಾಡಲಾಗುತ್ತಿದೆ. ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಲಿದೆ.
ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ