ಹುಬ್ಬಳ್ಳಿ(ಸೆ.11): ಇಲ್ಲಿನ ವಿಮಾನ ನಿಲ್ದಾಣದಿಂದ ಸೆ. 19ರಿಂದ ಹುಬ್ಬಳ್ಳಿ-ಮುಂಬೈ ನೇರ ವಿಮಾನಯಾನ ಆರಂಭವಾಗಲಿದೆ. ಈ ಕುರಿತು ಇಂಡಿಗೋ ಸಂಸ್ಥೆ ಸಚಿವ ಪ್ರಹ್ಲಾದ ಜೋಶಿ ಅವರಿಗೆ ತಿಳಿಸಿದ್ದಾಗಿ ಅವರು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ವಾರದಲ್ಲಿ ಮೂರು ದಿನ ಮುಂಬೈಗೆ ಸಂಪರ್ಕ ಕಲ್ಪಿಸಲಿರುವ ಇಂಡಿಗೋ ವಿಮಾನವು ಈಗಾಗಲೆ ಸೆ. 6ರಿಂದ ಹುಬ್ಬಳ್ಳಿ-ಚೆನ್ನೈ ನಡುವೆ ನೇರ ವಿಮಾನಯಾನ ಕಲ್ಪಿಸಿದೆ. 

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ILS ಅಳವಡಿಕೆ ಪೂರ್ಣ

ಇನ್ನು, ಹುಬ್ಬಳ್ಳಿ- ಬೆಂಗಳೂರು ನಡುವೆ ಸಂಚರಿಸುತ್ತಿದೆ. ಸೆ. 16ರಿಂದ ಹುಬ್ಬಳ್ಳಿ-ಕಣ್ಣೂರು (ಕೇರಳ) ನಡುವೆಯೂ ಇಂಡಿಗೋ ಸಂಪರ್ಕ ಸೇವೆ ಒದಗಿಸುತ್ತಿದೆ. ಲಾಕ್‌ಡೌನ್‌ ಬಳಿಕ ಕೊಂಚ ಮಂಕಾಗಿದ್ದ ವಾಣಿಜ್ಯ ನಗರಿಯ ವಿಮಾನಯಾನ ಇದೀಗ ಫಿನಿಕ್ಸ್‌ನಂತೆ ಎದ್ದು ನಿಂತಿದೆ.