Asianet Suvarna News Asianet Suvarna News

ರಾಸಲೀಲೆ ಕೇಸ್ : ರಮೇಶ್ ಸಿಡಿ ಸಿಕ್ಕ ಬಗ್ಗೆ ದಿನೇಶ್‌ ರಿಯಾಕ್ಷನ್

ರಮೇಶ್‌ ಜಾರ​ಕಿ​ಹೊಳಿ ರಾಸ​ಲೀಲೆ ನಡೆದ ಹೋಟೆಲ್‌ನೊಂದಿಗೆ ತಮ​ಗಿ​ರುವ ಸಂಬಂಧ, ಆ ಸಿಡಿ ತಮಗೆ ಹೇಗೆ ಸಿಕ್ಕಿತು ಎಂಬು​ದೆ​ಲ್ಲವೂ ಪೊಲೀಸ್‌ ತನಿ​ಖೆಯ ಭಾಗ​ವಾ​ಗಿ​ರುವ ಕಾರಣ ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದರು. 

I will attend the inquiry on March 9 on Ramesh Jarkiholi CD Case Says Dinesh Kallahalli snr
Author
Bengaluru, First Published Mar 5, 2021, 3:14 PM IST

ರಾಮ​ನ​ಗ​ರ (ಮಾ.05):  ರಮೇಶ್‌ ಜಾರ​ಕಿ​ಹೊಳಿ ರಾಸ​ಲೀಲೆ ನಡೆದ ಹೋಟೆಲ್‌ನೊಂದಿಗೆ ತಮ​ಗಿ​ರುವ ಸಂಬಂಧ, ಆ ಸಿಡಿ ತಮಗೆ ಹೇಗೆ ಸಿಕ್ಕಿತು ಎಂಬು​ದೆ​ಲ್ಲವೂ ಪೊಲೀಸ್‌ ತನಿ​ಖೆಯ ಭಾಗ​ವಾ​ಗಿ​ರುವ ಕಾರಣ ಏನನ್ನೂ ಬಹಿ​ರಂಗ ಪಡಿ​ಸ​ಲು ಆಗು​ವು​ದಿಲ್ಲ ಎಂದು ಸಾಮಾ​ಜಿಕ ಕಾರ್ಯ​ಕರ್ತ ದಿನೇಶ್‌ ಕಲ್ಲ​ಹಳ್ಳಿ ಪ್ರತಿ​ಕ್ರಿಯೆ ನೀಡಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ದಿನೇಶ್‌ ಕಲ್ಲ​ಹಳ್ಳಿ, ಪ್ರಕ​ರಣ ಕುರಿ​ತಂತೆ ಪೊಲೀಸ್‌ ತನಿಖೆ ನಡೆ​ಯು​ತ್ತಿ​ರುವ ಕಾರಣ ತನಿ​ಖೆಗೆ ತೊಡ​ಕಾ​ಗು​ವಂತಹ ಯಾವುದೇ ಅಂಶ​ವನ್ನು ಬಹಿ​ರಂಗ ಪಡಿ​ಸಲು ಸಾಧ್ಯ​ವಾ​ಗು​ವು​ದಿಲ್ಲ. ಸಮಯ ಬಂದಾಗ ಎಲ್ಲ​ವನ್ನೂ ಬಹಿ​ರಂಗ ಪಡಿ​ಸು​ತ್ತೇನೆ ಎಂದ​ರು.

ಬೆಂಗ​ಳೂ​ರಿನ ರಾಮ​ಕೃಷ್ಣ ಹೋಟೆಲ್‌ನ ಪಾರ್ಕಿಂಗ್‌ನಲ್ಲಿ ಸಿಡಿ ಎಕ್ಸ್‌ಚೆಂಚ್‌ ಆಗಿ​ರುವ ಮಾತು​ಗಳು ಕೇಳಿ ಬರು​ತ್ತಿ​ವೆ​ಯಲ್ಲ ಎಂಬ ಪತ್ರ​ಕ​ರ್ತರ ಪ್ರಶ್ನೆಗೆ ಅದು ಪೊಲೀಸ್‌ ತನಿ​ಖೆಯ ಭಾಗ​ವಾ​ಗಿ​ರುವ ಕಾರಣ ಗೌಪ್ಯ​ವಾಗಿ ಇಡ​ಬೇ​ಕಾ​ಗು​ತ್ತದೆ ಎಂದು ಉತ್ತ​ರಿ​ಸಿ​ದರು.

'ಜಾರಕಿಹೊಳಿ ರಾಸಲೀಲೆಯಲ್ಲಿ ದೊಡ್ಡ ದೊಡ್ಡವರ ಕೈವಾಡ, 5 ಕೋಟಿ ಡೀಲ್ ' ...

ಸಿಸಿಬಿ ಪೊಲೀ​ಸರು ಹೋಟೆಲ್‌ನಲ್ಲಿನ ಸಿಸಿ​ಟಿವಿ ದೃಶ್ಯಾ​ವ​ಳಿ​ಗ​ಳನ್ನು ವಶಕ್ಕೆ ಪಡೆ​ದು​ಕೊಂಡಿ​ದ್ದಾ​ರಲ್ಲ ಎಂಬ ಪ್ರಶ್ನೆಗೆ ಅದು ಕೂಡ ತನಿಖೆಯ ಭಾಗ​ವಾ​ಗಿ​ದೆ. ಹೋಟೆಲ್‌ಗು ನನಗೂ ಏನು ಸಂಬಂಧ, ಆ ಸಿಡಿ ಎಲ್ಲಿ ಸಿಕ್ಕಿತು ಎಂಬುದೆ​ಲ್ಲ​ವನ್ನು ವಿಚಾ​ರಣೆ ವೇಳೆ ಪೊಲೀ​ಸ​ರಿಗೆ ಮಾಹಿತಿ ನೀಡು​ತ್ತೇನೆ ಎಂದ​ರು.

9ಕ್ಕೆ ವಿಚಾರಣೆ :  ಕನ​ಕ​ಪುರ ತಾಲೂಕು ಕಲ್ಲ​ಹಳ್ಳಿ ಗ್ರಾಮ​ದ​ಲ್ಲಿಯೇ ವಾಸ್ತವ್ಯ ಹೂಡಿ​ರುವ ದಿನೇಶ್‌ ಅವ​ರಿಗೆ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಿ.ಮಾ​ರು​ತಿ ಅವರು ವಿಚಾ​ರ​ಣೆಗೆ ಹಾಜ​ರಾ​ಗು​ವಂತೆ ನೋಟಿಸ್‌ ಜಾರಿ ಮಾಡಿ​ದ್ದರು.

ಕಲ್ಲ​ಹಳ್ಳಿ ಗ್ರಾಮ​ದ ಮನೆ​ಯ​ಲ್ಲಿಯೇ ಉಳಿ​ದು​ಕೊಂಡಿದ್ದ ದಿನೇಶ್‌ ಅವರು ದೂರ​ವಾಣಿ ಮೂಲ​ಕ ವಕೀ​ಲ​ರೊಂದಿಗೆ ಚರ್ಚೆ ನಡೆಸಿದರು. ​ಆ​ನಂತರ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆಗೆ ಹಾಜ​ರಾ​ಗದೆ, ಮಾರ್ಚ್ 9ರಂದು ವಿಚಾ​ರ​ಣೆಗೆ ಹಾಜ​ರಾ​ಗು​ವು​ದಾಗಿ ಬರೆ​ದಿ​ರುವ ಪತ್ರ​ವನ್ನು ವಾಟ್ಸಪ್‌ ಮೂಲಕ ಸಬ್‌ ಇನ್ಸ್‌ಪೆಕ್ಟರ್‌ಗೆ ರವಾ​ನಿ​ಸಿ​ದ್ದಾರೆ.

Follow Us:
Download App:
  • android
  • ios