ರಾಮ​ನ​ಗರ (ಮಾ.09): ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಿ.ಡಿ. ಪ್ರಕರಣದ ದೂರನ್ನು ಹಿಂಪಡೆಯಲು ನಿರ್ಧರಿಸುವುದಾಗಿ ಭಾನುವಾರವಷ್ಟೇ ಬೆಂಗಳೂರಿನಲ್ಲಿ ತಿಳಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ, ಇದೀಗ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕವಷ್ಟೇ ಹಿಂಪಡೆಯುವುದಾಗಿ ಹೇಳಿದ್ದಾರೆ. ತಮ್ಮ ವಕೀಲರ ಮೂಲಕ ದೂರು ಹಿಂಪಡೆವ ಬಗ್ಗೆ ಕಬ್ಬನ್‌ ಪಾರ್ಕ್ ಪೊಲೀಸರಿಗೆ ಪತ್ರ ಕಳುಹಿಸಿದ್ದ ದಿನೇಶ್‌ ಕಲ್ಲಹಳ್ಳಿ ಮತ್ತೆ ಉಲ್ಟಾಹೊಡೆದಿದ್ದು ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ವಕೀಲರು ಅಧಿಕೃತವಾಗಿ ಈವರೆಗೂ ಏನೂ ಹೇಳಿಲ್ಲ ಎಂದರು. ನೀವು ಕೇಸು ಹಿಂದಕ್ಕೆ ಪಡೆಯುತ್ತೀರೋ ಇಲ್ಲವೋ ಎಂಬ ಪ್ರಶ್ನೆಗೆ, ನಾನು ವಕೀಲರ ಜೊತೆ ಕಾನೂನು ಸಮಾಲೋಚನೆ ನಡೆಸಬೇಕಾಗಿದೆ. ಅವರು ನೀಡುವ ಮಾರ್ಗ​ದ​ರ್ಶ​ನ​ದಂತೆ ನಡೆ​ದು​ಕೊ​ಳ್ಳು​ತ್ತೇನೆ. ಈವ​ರೆಗೂ ದೂರು ಹಿಂಪ​ಡೆ​ಯುವ ಬಗ್ಗೆ ನನ್ನ ವಕೀ​ಲರು ಯಾವ ಸಲ​ಹೆ​ಗ​ಳನ್ನು ನೀಡಿಲ್ಲ ಎಂದ​ರು.

ರಾಜಕೀಯದಲ್ಲಿ CD ಬಿರುಗಾಳಿ; ದಿನೇಶ್ ಕಲ್ಲಹಳ್ಳಿ ಯೂ ಟರ್ನ್ ಹೊಡೆದಿದ್ಯಾಕೆ..? .

ಪೊಲೀ​ಸರು ಪ್ರಕ​ರ​ಣದ ತನಿಖೆ ಮುಂದು​ವ​ರೆ​ಸಿ​ರು​ವುದು ಗೊತ್ತಿಲ್ಲ. ದೂರು ವಾಪಸ್‌ ಪಡೆ​ಯು​ತ್ತಿ​ರು​ವು​ದಾಗಿ ವಕೀ​ಲರ ಮೂಲಕ ಪತ್ರ ಕಳು​ಹಿಸಿ ಕೊಟ್ಟಿ​ದ್ದೇನೆ. ದೂರು ಹಿಂಪ​ಡೆ​ಯಲು ಕಾರಣ ಏನೆಂಬು​ದಕ್ಕೆ 5 ಪುಟ​ಗಳ ಸ್ಪಷ್ಟ​ನೆ​ಯನ್ನೂ ನೀಡಿ​ದ್ದೇನೆ. ಈಗಲೂ ನನ್ನ ದೂರಿಗೆ ಬದ್ಧ​ನಾ​ಗಿ​ದ್ದೇನೆ ಎಂದು ದಿನೇಶ್‌ ಕಲ್ಲ​ಹ​ಳ್ಳಿ ಗೊಂದ​ಲದ ಹೇಳಿಕೆ ನೀಡಿ​ದರು.