ಉಡುಪಿ :  ಉಡುಪಿ ಕೋಮುವಾದದ ಕೇಂದ್ರವಾಗಿದ್ದು, ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ದಿನೇಶ್ ಅಮೀನ್ ಮಟ್ಟು ನೀಡಿದ ಹೇಳಿಕೆಗೆ ಹಲವರಿಂದ ಖಂಡನೆ ವ್ಯಕ್ತವಾಗಿದೆ. 

ಮಟ್ಟು ಹೇಳಿಕೆಯನ್ನು ಬಿಜೆಪಿ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಖಂಡಿಸಿದ್ದು, ಮಟ್ಟು ಹೇಳಿಕೆಗೆ ಅತ್ಯಂತ ನೋವು ತರಿಸುತ್ತದೆ. ಪೇಜಾವರ ಸ್ವಾಮೀಜಿ ವಯೋವೃದ್ದರು, ಜ್ಞಾನವೃದ್ದರು. ಹಿಂದೆ ಮುಸ್ಲಿಂಮರಿಗೆ ಇಫ್ತಾರ್ ಕೂಟ ಆಯೋಜಿಸಿದ್ದರು. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದರೆ ಅವರ ಕೋಮುವಾದಿ ಹೇಗಾಗುತ್ತಾರೆ. ಅಲ್ಲದೇ ಮಠವನ್ನೂ ಕೋಮುವಾದಿ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮಟ್ಟು ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಉಡುಪಿಯ ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಅಲ್ಲಿನ ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡುವು ಖಂಡನೀಯ ವಿಚಾರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.