ಹಾಸನ (ಅ.23) : ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಸಾವಿರಾರು ಲೀಟರ್ ಡೀಸೆಲ್ ಚರಂಡಿ ಪಾಲಾಗಿದೆ. 

ಹಾಸನ ಜಿಲ್ಲೆ ಪಾಳ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ  ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ.

ಹದಗೆಟ್ಟಿರುವ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ವೇಳೆ ಅಪಾರ ಪ್ರಮಾಣದ ಡೀಸೆಲ್ ರಸ್ತೆಗೆ ಚೆಲ್ಲಿದೆ. 

IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ? ..

ಅಪಾರ ಪ್ರಮಾಣದ ಡೀಸೆಲ್ ಸಾಗುತ್ತಿದ್ದ ಈ ಟ್ಯಾಂಕರ್ ಉರುಳಿದ್ದರಿಂದ ಸುಮಾರು 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲಾಗಿದೆ.  ಜನರು ಹತ್ತಿರ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.