Asianet Suvarna News Asianet Suvarna News

Santro ravi Case: ಸ್ಯಾಂಟ್ರೋ ರವಿಗೆ ಯಾವುದೇ ಜವಾಬ್ದಾರಿ ಕೊಟ್ಟಿರಲಿಲ್ಲ: ಸಿ.ಟಿ.ರವಿ

ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ. ಅವರಿಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

did not give any responsibility to santro ravi says CT Ravi chikkamagaluru rav
Author
First Published Jan 13, 2023, 8:05 AM IST

, ಚಿಕ್ಕಮಗಳೂರು (ಜ.13) : ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ. ಅವರಿಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್‌ ಸದಸ್ಯತ್ವ ಯಾರು ಬೇಕಾದರೂ ತೆಗೆದುಕೊಳ್ಳಬಹುದು, ಅದು ಕೂಡ ಸ್ಪಷ್ಟತೆ ಇಲ್ಲ. ಕಾನೂನು ಬಿಜೆಪಿ(BJP)ಯವರಿಗೊಂದು, ದಳದವರಿಗೊಂದು, ಕಾಂಗ್ರೆಸ್‌(Congress)ಗೊಂದು ಅಂತ ಎಲ್ಲೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಯಾರು ಮಾಡಿದ್ರು ತಪ್ಪೇ, ತನಿಖೆ ನಡೆಯುತ್ತಿದೆ. ತನಿಖೆ ನಂತರ ಯಾರು ಹಿಂದೆ ಇದ್ದಾರೆ, ಯಾವ ಪಾರ್ಟಿ ಇದೆ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.

ನಮ್ಮ ಸರ್ಕಾರ ಐಜಿ ಮೇಲೂ ಕ್ರಮ ತೆಗೆದುಕೊಂಡಿದೆ. ಯಾರ ಮೇಲೂ ಮುಲಾಜು ತೋರಿಸುವುದಿಲ್ಲ. ಕೇಸ್‌ ಮುಚ್ಚಿ ಹಾಕುವ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದರು.

ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ: ಸಿಟಿ ರವಿ

ಕ್ಷೇತ್ರ ಹುಡುಕಾಟ ದುರಂತ:

ಸುಮಾರು 40 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಕಡೆವರೆಗೂ ಕ್ಷೇತ್ರ ಹುಡುಕುತ್ತಿರುವುದು ದುರಂತ ಎಂದು ಸಿ.ಟಿ.ರವಿ(CT Rav) ಅವರು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರಿಗೆ ಕುಟುಕಿದ್ದಾರೆ. ಮೈಸೂರಿ(Mysuru)ನಲ್ಲಿ ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯ ಅವರಿಗಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ನಂತರ ಅವರಿಗೆ ವಿಶ್ವಾಸ ಇಲ್ಲ, ಬಾದಾಮಿಯಲ್ಲೂ ಎರಡನೇ ಬಾರಿ ಗೆಲ್ಲುತ್ತೇನೆಂಬ ವಿಶ್ವಾಸ ಅವರಿಗಿಲ್ಲ, ಆದ್ದರಿಂದ ಕೋಲಾರಕ್ಕೆ ಹೋಗುತ್ತಿದ್ದಾರೆ. ಇದು, ಪ್ರಜಾಪ್ರಭುತ್ವ, ಜನ ತೀರ್ಮಾನ ಮಾಡ್ತಾರೆ. ಜನರ ತೀರ್ಮಾನವನ್ನು ಹೇಳೋಕೆ ಆಗುವುದಿಲ್ಲ ಎಂದರು.

ಅಂಬೇಡ್ಕರ್‌ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್‌: ಸಿ.ಟಿ.ರವಿ

ಜನ ಗುಡಿಸಿದ್ದಾರೆ:

ದೇಶದ ಜನ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗುಡಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದಾಗ ಜನರು ಗುಡಿಸಿದರು. ದೆಹಲಿಯಲ್ಲಿ ಡೆಪಾಸಿಟ್‌ ಇಲ್ಲದಂತೆ ಗುಡಿಸಿದ್ದಾರೆ, ಉತ್ತರ ಪ್ರದೇಶದಲ್ಲಿ 399 ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಿತ್ತು. 387 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡರು. ಜನರೇ ಕಾಂಗ್ರೆಸ್‌ ಪಕ್ಷವನ್ನು ಗುಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು, ಅವರೇ ತೀರ್ಮಾನ ಮಾಡುವುದು, ಅವರೇ ಗುಡಿಸುತ್ತಾರೆ ಎಂದು ಹೇಳಿದರು.

Follow Us:
Download App:
  • android
  • ios