ಲಸಿಕೆ ಪಡೆದ 5 ವೈದ್ಯರಿಗೆ ಕೊರೋನಾ ಸೋಂಕು: ವೈದ್ಯಾ​ಧಿ​ಕಾರಿ ಪ್ರತಿಕ್ರಿಯೆ

ಲಸಿಕೆ ಪಡೆ​ದರೂ ರೋಗ ನಿರೋ​ಧಕ ಶಕ್ತಿ ಉತ್ಪತ್ತಿ ಆಗಲು 5 ವಾರ ಬೇಕು| ಜನ ಆತಂಕ​ಪ​ಡುವ ಅಗ​ತ್ಯ​ವಿಲ್ಲ, ಹಾಗಂತ ಯಾರೂ ಮೈಮರೆಯುವಂತಿಲ್ಲ| ವೈದ್ಯರು ಕರ್ತವ್ಯದಲ್ಲಿದ್ದ ಕಾರಣ ಸೋಂಕು ತಗುಲಿರುವ ಸಾಧ್ಯತೆ| 

DHO MC Ravi Reacts Corona Confirm to 5 doctors After Taken Vaccine grg

ಚಾಮರಾಜನಗರ(ಜ.31): ಜ.16ರಂದು ಕೋವಿಡ್‌ ಲಸಿಕೆ ಅಭಿ​ಯಾ​ನದ ಭಾಗ​ವಾಗಿ ಲಸಿಕೆ ಪಡೆ​ದಿದ್ದ ಕೋವಿಡ್‌ ನೋಡಲ್‌ ಅಧಿ​ಕಾರಿ ಸೇರಿ ಜಿಲ್ಲಾ​ಸ್ಪ​ತ್ರೆಯ ಐವರು ವೈದ್ಯರಿಗೆ ಕೊರೋನಾ ದೃಢ​ಪ​ಟ್ಟಿದೆ. ಈ ಮೂಲಕ ಕಳೆ​ದೊಂದು ವಾರ​ದಿಂದ ಜಿಲ್ಲೆ​ಯಲ್ಲಿ ಏಳು ಮಂದಿ ವೈದ್ಯ​ರಿಗೆ ಸೋಂಕು ತಗು​ಲಿ​ದಂತಾ​ಗಿ​ದೆ.

"

ಲಸಿಕೆ ಪಡೆದ ವೈದ್ಯ​ರಿ​ಗೇ ಕೊರೋನಾ ದೃಢ​ಪ​ಟ್ಟಿ​ರುವ ಕುರಿತು ಜನ ಆತಂಕ​ಪ​ಡಬೇಕಿಲ್ಲ ಎಂದು ಜಿಲ್ಲಾ ವೈದ್ಯಾ​ಧಿ​ಕಾರಿ ತಿಳಿ​ಸಿ​ದ್ದಾ​ರೆ. ಲಸಿ​ಕೆ ಪಡೆದ ಬಳಿಕ ರೋಗ ನಿರೋ​ಧಕ ಶಕ್ತಿ ಉತ್ಪ​ತ್ತಿ​ಯಾ​ಗಲು ಕನಿಷ್ಠ ನಾಲ್ಕ​ರಿಂದ ಐದು ವಾರ ಬೇಕು. ಅಲ್ಲಿ​ವ​ರೆಗೆ ಲಸಿ​ಕೆ ​ಪ​ಡೆ​ದ​ವರು ಜಾಗ್ರ​ತೆ​ಯಿಂದ​ರ​ಬೇಕು ಎಂದು ಸ್ಪಷ್ಟನೆ ನೀಡಿ​ದ್ದಾ​ರೆ. ಸದ್ಯ ಸೋಂಕು ದೃಢ​ಪಟ್ಟ ಐವರು ವೈದ್ಯ​ರಲ್ಲಿ ಮೂವರು ಕೋವ್ಯಾ​ಕ್ಸಿನ್‌ ಹಾಗೂ ಇಬ್ಬರು ಕೋವಿ​ಶೀಲ್ಡ್‌ ಲಸಿಕೆ ಪಡೆ​ದು​ಕೊಂಡಿದ್ದರು. ಇವ​ರಲ್ಲಿ ಒಬ್ಬರು ಮಾತ್ರ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿದ್ದು, ಉಳಿ​ದ​ವರು ಹೋಮ್‌ ಐಸೋ​ಲೇ​ಷ​ನ್‌​ನ​ಲ್ಲಿ​ದ್ದಾ​ರೆ.

ನಾವು ಮೊದಲ ಡೋಸ್‌ ಅನ್ನಷ್ಟೇ ಪಡೆ​ದಿ​ದ್ದೇವೆ. ಆದರೆ, ಎರಡನೇ ಡೋಸ್‌ ಪಡೆದ ಬಳಿಕವಷ್ಟೇ ಲಸಿಕೆ ಪರಿಣಾಮಕಾರಿ​ಯಾ​ಗು​ತ್ತ​ದೆ. ಒಂದೇ ಡೋಸ್‌ ಪಡೆದವರು, ತಮಗೆ ಕೋವಿಡ್‌ ಬರುವುದಿಲ್ಲ ಎಂದು ಮೈಮ​ರೆ​ಯು​ವಂತಿಲ್ಲ ಎಂದಿದ್ದಾ​ರೆ ಕೋವಿಡ್‌ ನೋಡಲ್‌ ಅ​ಧಿಕಾರಿಯೂ ಆಗಿ​ರು​ವ ಡಾ. ಮಹೇಶ್‌. ಆರಂಭದ ದಿನಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಆದರೆ ಆಗ ಬರದ ಕೊರೋನಾ ಈಗ ಬಂದಿದ್ದು, ನಮಗೂ ಒಂದು ರೀತಿ ಬೇಸರ ತರಿಸಿದೆ. ಸದ್ಯ ನಾವು ಆರೋಗ್ಯವಾಗಿದ್ದೇವೆ ಎಂದು ಅವರು ತಿಳಿ​ಸಿ​ದ್ದಾ​ರೆ.

ಕೋವಿಡ್ ಲಸಿಕೆ ಪಡೆದಿದ್ದ ವೈದ್ಯರಿಗೂ ಕೊರೋನಾ ಪಾಸಿಟಿವ್!

ಆತಂಕ ಬೇಡ-ಡಿಎ​ಚ್‌​ಒ:

ಲಸಿಕೆ ಪಡೆ​ದು​ಕೊಂಡ ವೈದ್ಯ​ರಿಗೇ ಕೋವಿಡ್‌ ಬಂದಿ​ರು​ವು​ದಕ್ಕೆ ಜನ ಆತಂಕ​ಪ​ಡ​ಬಾ​ರ​ದು. ರೋಗ ನಿರೋ​ಧಕ ಶಕ್ತಿ ಉತ್ಪ​ತ್ತಿ​ಯಾ​ಗಲು ಲಸಿಕೆ ಪಡೆದ ಬಳಿಕ ನಾಲ್ಕ​ರಿಂದ ಐದು ವಾರ​ಗ​ಳಷ್ಟುಕಾಲಾ​ವ​ಕಾಶ ಬೇಕಾ​ಗು​ತ್ತಿದೆ. ಜನ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದು ಎಂದು ಡಿಎಚ್‌ಒ ಎಂ.ಸಿ.ರವಿ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಲಸಿಕೆ ಪಡೆದ ಒಂದೇ ವಾರದಲ್ಲಿ ಈ ರೀತಿಯಾಗಿದೆ. ಇವರಿಗೆ ಕೋವಿಡ್‌ ಲಕ್ಷಣಗಳಿದಿದ್ದರಿಂದ ಪರೀಕ್ಷೆಗೆ ಒಳಗಾದಾಗ ಸೋಂಕು ದೃಢ​ಪ​ಟ್ಟಿ​ದೆ. ಲಸಿಕೆ ಪಡೆದ ಬಳಿ​ಕವೂ ಈ ವೈದ್ಯರು ಕರ್ತವ್ಯದಲ್ಲಿದ್ದ ಕಾರಣ ಈ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಿ​ದ್ದಾ​ರೆ.
 

Latest Videos
Follow Us:
Download App:
  • android
  • ios