ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್

ಮೂರು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮೈಶಿಯಾನ ನಿಯಾಂಗ್ ಎಂಬ ಮಹಿಳೆ| ಲಾಕ್​ಡೌನ್ ಘೋಷಣೆಯಾದ್ದರಿಂದ ನಗರದ ರೇಣುಕಾ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ ಮಹಿಳೆ|‌ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ತನ್ನ ದೇಶಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್​ಗೆ ಮನವಿ ಮಾಡಿದ್ದ ಮೈಶಿಯಾನ ನಿಯಾಂಗ್|

Dharwad SP Vartika Katiyar Help to Australia Based Woman in Hubballi

ಹುಬ್ಬಳ್ಳಿ(ಮೇ.29): ಲಾಕ್​ಡೌನ್ ವೇಳೆ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡು ಪರದಾಟ ನಡೆಸಿದ್ದ ಆಸ್ಟ್ರೇಲಿಯಾದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಮೂಲಕ ಧಾರವಾಡದ ಎಸ್​ಪಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ.

ಆಸ್ಟ್ರೇಲಿಯಾ ಮೂಲದ ಮೈಶಿಯಾನ ನಿಯಾಂಗ್ ಎಂಬ ಮಹಿಳೆ ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್​ಡೌನ್ ಘೋಷಣೆಯಾದ್ದರಿಂದ ನಗರದ ರೇಣುಕಾ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದರು.‌ ನಿನ್ನೆ(ಗುರುವಾರ) ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ತನ್ನ ದೇಶಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್​ಗೆ ಮನವಿ ಮಾಡಿದ್ದರು.

ಹುಬ್ಬಳ್ಳಿ: FMCG ಕಾರ್ಖಾನೆ ಪ್ರಾರಂಭಕ್ಕೆ ಸನ್ನಿಹಿತ, ನಿರುದ್ಯೋಗ ಸಮಸ್ಯೆ ನಿವಾರಣೆ

ವಿದೇಶಿ ಮಹಿಳೆಗೆ ಸಹಾಯ ಮಾಡುವಂತೆ ಎಸ್​ಪಿ ವರ್ತಿಕಾ ಕಟಿಯಾರ್​ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.  ಅದರಂತೆ ವರ್ತಿಕಾ ಕಟಿಯಾರ್ ಅವರು ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿ ಮಹಿಳೆಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ನಗರದ ರೇಣುಕಾ ಲಾಡ್ಜ್​ಗೆ ಭೇಟಿ ನೀಡಿದ್ದ ಎಸ್​ಪಿ, ಖಾಸಗಿ ವಾಹನದ ವ್ಯವಸ್ಥೆ ಮಾಡಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಳುಹಿಸಲು ಸಿದ್ಧತೆ ಮಾಡಿದರು.‌ ನಂತರ ಮಹಿಳೆ ಬೆಂಗಳೂರಿನಿಂದ ದೆಹಲಿ ತಲುಪಿ, ದೆಹಲಿಯಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಎಸ್​ಪಿ ಅವರ ಈ ಕಾರ್ಯಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಎಸ್​ಪಿ ವರ್ತಿಕಾ ಕಟಿಯಾರ್, ಆಧ್ಯಾತ್ಮಿಕ ಜ್ಞಾನ ‌ಕಲಿಕೆ ಹಿನ್ನೆಲೆಯಲ್ಲಿ ಆಗಮಿಸಿದ ಮಹಿಳೆಯನ್ನು ತಮ್ಮ ದೇಶಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಅವರಿಗೆ ನಮ್ಮ ಸಿಬ್ಬಂದಿ ಆರ್ಥಿಕ ಸಹಾಯ ಮಾಡಿದ್ದಾರೆ ಎಂದರು. ಈ‌ ವೇಳೆ ಹು-ಧಾ ಡಿಸಿಪಿ‌ ಕೃಷ್ಣಕಾಂತ್, ಗ್ರಾಮೀಣ ಸಿಪಿಐ ಡಿಸೀಜಾ, ಉಪ ನಗರ ಸಿಪಿಐ ಸುಂದರೇಶ ಹೊಳೆಣ್ಣವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಾಳೆ ಬರಲಿದೆ ಕೋವಿಡ್ ವರದಿ

ಮಹಾಮಾರಿ ಕೊರೋನಾ ವೈರಸ್‌ ಹಾವಳಿ ಹಿನ್ನಲೆಯಲ್ಲಿ ಈ ಮಹಿಳೆಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ವರದಿ ನಾಳೆ(ಶನಿವಾರ) ಬರಲಿದೆ. ಹೀಗಾಗಿ ವರದಿ ಬಂದ ಬಳಿಕ ರಿಪೋರ್ಟ್‌ ನೋಡಿಕೊಂಡು ಪ್ರಯಾಣ ಆರಂಭಿಸಲಿದ್ದಾಳೆ. ವರದಿಯು ನೆಗೆಟಿವ್‌ ಬಂದರೆ ಸ್ವದೇಶಕ್ಕೆ ಪ್ರಯಾಣ ಪೊಸಿಟಿವ್‌ ವರದಿ ಬಂದರೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆದುಕೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios