ಕರ್ಕಶ ಸೌಂಡ್ ಮಾಡುವ ಪೋಕರಿಗಳಿಗೆ ಬಿತ್ತು ಶಾಕ್: ಬೈಕ್ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು!
ಹುಬ್ಬಳ್ಳಿ ಧಾರವಾಡದಲ್ಲಿರುವ ಪುಂಡ ಪೋಕರಿಗಳಿಗೆ ಸದ್ಯ ಅದರಲ್ಲೂ ಬೈಕ್ ತೆಗೆದುಕ್ಕೊಂಡು ಕರ್ಕಶ ದ್ವನಿಯನ್ನ ಮಾಡುವ ಪುಂಡ ಪೋಕರಿಗಳಿಗೆ ಬಿತ್ತು ಶಾಕ್ , ಇಂದು ಕರ್ಕಶ ದ್ವನಿ ಮಾಡುವ ಬೈಕಗಳನ್ನ ಪತ್ತೆ ಹಚ್ಚಿ ಅವುಗಳಿಗೆ ಪೈನ್ ಹಾಕಿ ಸೈಲೆನ್ಸ್ ರ್ ಗಳನ್ನ ವಶಕ್ಕೆ ಪಡೆದು ದ್ವಂಸ ಮಾಡಿದ್ದಾರೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಮೇ.29): ಹುಬ್ಬಳ್ಳಿ ಧಾರವಾಡದಲ್ಲಿರುವ ಪುಂಡ ಪೋಕರಿಗಳಿಗೆ ಸದ್ಯ ಅದರಲ್ಲೂ ಬೈಕ್ ತೆಗೆದುಕ್ಕೊಂಡು ಕರ್ಕಶ ದ್ವನಿಯನ್ನ ಮಾಡುವ ಪುಂಡ ಪೋಕರಿಗಳಿಗೆ ಬಿತ್ತು ಶಾಕ್ , ಇಂದು ಕರ್ಕಶ ದ್ವನಿ ಮಾಡುವ ಬೈಕಗಳನ್ನ ಪತ್ತೆ ಹಚ್ಚಿ ಅವುಗಳಿಗೆ ಪೈನ್ ಹಾಕಿ ಸೈಲೆನ್ಸ್ ರ್ ಗಳನ್ನ ವಶಕ್ಕೆ ಪಡೆದು ದ್ವಂಸ ಮಾಡಿದ್ದಾರೆ. ಧಾರವಾಡ ಸಂಚಾರಿ ಪೋಲಿಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಆಗದ ಕೆಲಸವನ್ನ ಖಡಕ್ ಸಂಚಾರಿ ಪೋಲಿಸ್ ಇನ್ಸಪೆಕ್ಟರ್ ಶ್ರಿನಿವಾಸ ಮೇಟಿ ಅವರು ಮಾಡಿ ಸದ್ಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ..ಕಳೆದ ಎರಡು ತಿಂಗಳಲ್ಲಿ 240 ಸೈಲೆನ್ಸಗಳನ್ನ ದ್ವಂಸ ಮಾಡಲಾಗಿದೆ.
ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಟಾರ್ ಸೈಕಲ್ ಸವಾರರು ತಮ್ಮ ವಾಹನಗಳಿಗೆ ಅನಧೀಕೃತವಾಗಿ ದೋಷಪೂರಿತ ಕರ್ಕಶ ಶಬ್ದವನ್ನುಂಟು ಮಾಡುವ ಸೈಲೆನ್ಸರಗಳನ್ನು ಹಾಕಿಕೊಂಡು ಸಂಚರಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ. 230 ಸೈಲೆನ್ಸರ ಪೈಪುಗಳನ್ನ ರೂಲರ್ ಮುಖಾಂತರ ದ್ವಂಸ ಮಾಡಿ ಪುಂಡ ಪೋಕರಿ ಯುವಕರಿಗೆ ಬಿಸಿ ಮುಟ್ಟಿಸಿದ್ದಾರೆ.
ರಾಜಕೀಯದಲ್ಲಿ ರಾಜೀಯಾಗಿದ್ದರೆ ನಾನೆಲ್ಲೋ ಇರ್ತಿದ್ದೆ: ವಾಟಾಳ್ ನಾಗರಾಜ್
ಧಾರವಾಡ ಸಂಚಾರಿ ಪೋಲಿಸ್ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಧಾರವಾಡ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀ ನಾರಾಯಣ ಪಟವರ್ಧನ, ಪಿ.ಎಸ್.ಐ, ಶ್ರೀಮತಿ ಶೋಭಾ ಕಂಬಿ, ಮ.ಪಿ.ಎಸ್.ಐ ಹಾಗೂ ಠಾಣೆಯ ಎ,ಎಸ್,ಐ ಮತ್ತು ಸಿಬ್ಬಂದಿ ಜನರ ತಂಡವನ್ನು ರಚಿಸಲಾಗಿತ್ತು. ಈ ತಂಡ ದಿನಾಂಕ 01.03.2024 ರಿಂದ ಇಲ್ಲಿಯವರೆಗೆ ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಒಟ್ಟು-240 ( ಅಂದಾಜು ಮೌಲ್ಯ-12 ಲಕ್ಷ ರೂ) ದೋಷಪೂರಿತ ಕರ್ಕಶ ಸೈಲೇನ್ಸ್‌ರಗಳನ್ನು ವಶಪಡಿಸಿಕೊಂಡು ವಾಹನ ಸವಾರರಿಗೆ ತಲಾ 500/- ರೂ ದಂಡ ವಿಧಿಸಿ ವಾಹನಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಮುಂದಿನ ದಿನಗಳಲ್ಲಿ ಯಾವುದಾದರೂ ದೋಷಪೂರಿತ ಸೈಲೇನ್ಸರ್ ಸೈಕಲ್ ಮೋಟಾರ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಮೋಟಾರ್ ಸೈಕಲ್ ನಂಬರ ಸಮೇತ ಪೋಟೋ,ವಿಡಿಯೋ ಮೂಲಕ ಪೊಲೀಸ್ ಇನ್ಸ್ ಪೆಕ್ಟರ್ ಸಂಚಾರ ಪೊಲೀಸ್ ಠಾಣೆ ಧಾರವಾಡ ಇವರ ದೂರವಾಣಿ ಸಂಖ್ಯೆ: 9480802037 ನೇದ್ದಕ್ಕೆ ವಾಟ್ಸಪ್ ಮೂಲಕ ಕಳುಹಿಸಬಹುದು.ಸದರ ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಂಚಾರಿ ಪೋಲಿಸ್ ಠಾಣೆಯ ಸಿಪಿಐ ಶ್ರಿನಿವಾಸ ಮೇಟಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಸದರ ಕಾರ್ಯಾಚರಣೆ ಬಗ್ಗೆ ಪೊಲೀಸ್ ಆಯುಕ್ತರು ರೇಣುಕಾ ಸುಕುಮಾರ ಅವರು ಶ್ರಿನಿವಾಸ ಮೇಟಿ ಅವರಿಗೆ ಪ್ರಶಂಶೆ ವ್ಯಕ್ತ ಪಡಿಸಿದ್ದಾರೆ ಜೊತೆಗೆ ಹುಬ್ಬಳ್ಳಿ-ಧಾರವಾಡ ನಗರ, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹುಬ್ಬಳ್ಳಿ-ಧಾರವಾಡ ನಗರ, ಉಪ ಪೊಲೀಸ್ ಆಯುಕ್ತರು, (ಅಪರಾಧ ವ ಸಂಚಾರ) ಹುಬ್ಬಳ್ಳಿ-ಧಾರವಾಡ ನಗರ ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ ಹುಬ್ಬಳ್ಳಿ-ಧಾರವಾಡ ನಗರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಇಂದಿನಿಂದ ಕರ್ನಾಟಕ-ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿ ಗಣಿ ಸರ್ವೆ ಶುರು: ಕಾರಣವೇನು?
ಇನ್ನು ಸೈಲೆನ್ಸ್ ರ ದ್ವಂಸ ಮಾಡುವ ವೇಳೆ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಹುಬ್ಬಳ್ಳಿ-ಧಾರವಾಡ ನಗರ,ಪೋಲಿಸ್ ಆಯುಕ್ತರು ಕುಶಲ್ ಚೌಕ್ಸಿ, ಐಪಿಎಸ್ ಉಪ-ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹುಬ್ಬಳ್ಳಿ-ಧಾರವಾಡ ನಗರ ಹಾಗೂ ಮಾನ್ಯ ಶ್ರೀ ರವೀಶ.ಸಿ.ಆರ್ ಸಂಚಾರಿ ಪೋಲಿಸ್ ಇನ್ಸ್ ಪೆಕ್ಡರ ಶ್ರಿನಿವಾಸ ಮೇಟಿ ಉಪಸ್ಥಿತರಿದ್ದರು.