Asianet Suvarna News Asianet Suvarna News

Dharwad KIADB Scam: ಕೋಟಿಗಟ್ಟಲೆ ನುಂಗಿದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲು

ಧಾರವಾಡ ಕೆ ಐ ಎ ಡಿ ಬಿ ಹಗರಣ ಬಗೆದಷ್ಡು ಬಯಲಾಗುತ್ತಿದೆ. ರೈತರ ಹೇಸರಲ್ಲಿ 2022 ರಲ್ಲಿ ಮತ್ತೆ 21 ಕೋಟಿ ಹಣವನ್ನ ನಕಲಿ ದಾಖಲೆ‌ ಸೃಷ್ಠಿ ಹಣವನ್ನ ಐಡಿಬಿಐ ಬ್ಯಾಂಕ ಮುಖಾಂತರ ಕಳ್ಳ ಅಧಿಕಾರಿಗಳು ನುಂಗಿ ನೀರು ಕುಡದಿದ್ದಾರೆ.

Dharwad KIADB scam case filed against KIADB officials in Lokayukta gow
Author
First Published Dec 15, 2022, 6:01 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ(ಡಿ.15): ಧಾರವಾಡ ಕೆ ಐ ಎ ಡಿ ಬಿ ಹಗರಣ ಬಗೆದಷ್ಡು ಬಯಲಾಗುತ್ತಿದೆ. ಕಳೆದ 2012  ರಲ್ಲಿ 10 ಜನರ ರೈತರ ಹೇಸರಲ್ಲಿ 71 ಎಕೆರೆಗೆ 21 ಕೋಟಿ ಹಣವನ್ನ ಧಾರವಾಡ ಭೂ ಸ್ವಾಧಿನಾಧಿಕಾರಿಗಳು ವಶಪಡಿಸಿಕ್ಕೊಂಡು ರೈತರು ಪರಿಹಾರವನ್ನ ನೀಡಿದ್ದರು. ಸದ್ಯ ಅದೆ ರೈತರ ಹೇಸರಲ್ಲಿ 2022 ರಲ್ಲಿ ಮತ್ತೆ 21 ಕೋಟಿ ಹಣವನ್ನ ನಕಲಿ ದಾಖಲೆ‌ ಸೃಷ್ಠಿ ಹಣವನ್ನ ಐಡಿಬಿಐ ಬ್ಯಾಂಕ ಮುಖಾಂತರ ಕಳ್ಳ ಅಧಿಕಾರಿಗಳು ನುಂಗಿ ನೀರು ಕುಡದಿದ್ದಾರೆ. ಈ ಕುರಿತು ಬಸವರಾಜ ಕೊರವರ ಅವರು ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದರು. ಸದ್ಯ ಇವತ್ತು ಬಸವರಾಜ ಕೊರವರ ಲೋಕಾಯಕ್ತ ಕಚೇರಿಗೆ ತೆರಳು ಮೂವರು ಅಧಿಕಾರಿಗಳ ಮೆಲೆ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಇನ್ನು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ್ ಆರ್ ಟಿ ಆಯ್ ಕಾರ್ಯಕರ್ತ ಮಿತುನ್ ಜಾಧವ್ ,ರೈತ ಶಿವನಗೌಡ ಪಾಟೀಲ, ಮೂವರು ಸೇರಿ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಿದ್ದಾರೆ. 

ಎನಿದು ಪ್ರಕರಣ : ಎಸ್ ಕೆ ಐ ಎ ಡಿ ಬಿ 21 ಕೋಟಿ ಹಗರಣ ವಿಚಾರವಾಗಿ ದಿನೆ ದಿನೆ ಕೆ ಐ ಎ ಡಿ ಬಿ ಹಗರಣಗಳು ಬೆಳಕಿಗೆ ಬರುತ್ತಲೆ ಇವೆ. ಹಿಂದಿನ ನಿವೃತ್ತ ಭೂಸ್ವಾಧಿನಾಧಿಕಾರಿ, ವಿ.ಡಿ ಸಜ್ಜನ್ , ಹಿರಿಯ ಸಹಾಯಕ ಶಂಕರಪ್ಪ ತಳವಾರ, ಶಿರಸ್ತೆದಾರ ಎಂ ಕೆ ಸಿಂಪಿ ಅವರ ಮೆಲೆ ಕೋಟ್ಯಂತರ ಹಣ ನುಂಗಿದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿವೆ. 2012 ರಲ್ಲಿ 71 ಎಕರೆಗೆ 10 ಜನ ರೈತರ ಹೇಸರಿನಲ್ಲಿ 21 ಕೋಟಿ ಪರಿಹಾರ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ರೈತರು ಪರಿಹಾರವನ್ನ ಪಡೆದುಕ್ಕೊಂಡಿದ್ರು..ಆದರೆ ರೈತರಿಗೆ ಗೊತ್ತಿಲ್ಲೆ ಮತ್ತೆ ಅದೆ ರೈತರ ಹೇಸರಲ್ಲಿ ಮತ್ತೆ‌ 2022 ರಲ್ಲಿ 21 ಕೋಟಿ ಬಿಡುಗಡೆ ಮಾಡಿಕ್ಕೊಂಡಿದ್ದಾರೆ.

ಈ ಪ್ರಕರಣ ಕುರಿತು ಬೆಂಗಳೂರಿನಿಂದ ಮಂಜುನಾಥ್ ಎಂಬ ಅಧಿಕಾರಿಗಳ ಟೀಮ್ ಮೂರು ದಿನಗಳಲ್ಲಿ ಸಜ್ಜನ್ ಅವರ ಕಾಲದಲ್ಲಾದ ಎಲ್ಲ ದಾಖಲಾತಿಗಳನ್ನ ಪರಿಶಿಲನೆ ಮಾಡಿ ದಾಖಲಾತಿಗಳನ್ನ ಪಡೆದುಕ್ಕೋಂಡು ಬೆಂಗಳೂರಿಗೆ ಹೋಗಿದ್ದಾರೆ..ಆದರೆ ಅದರಲ್ಲಿ ಅಂದ್ರೆ ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳಾ ಅಧಿಕಾರಿಯೊಬ್ಬರು ಕೂಡಾ ತನಿಖೆಗೆ ಆಗಮಿಸಿದ್ರು..ಆದರೆ ಆ ಮಹಿಳಾ ಆದಿಕಾರಿ‌ ಸೂಕ್ತ ತನಿಖೆ ಮಾಡಿಲ್ಲ ಹಿರಿಯ ಅಧಿಕಾರಿಗಳಿಗೆ ಪ್ರಕರಣ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಸವರಾಜ ಕೊರವರ ಕೂಡಾ ಆರೋಪವನ್ನ ಮಾಡಿದ್ದಾರೆ..

ನಕಲಿ ದಾಖಲೆಗಳನ್ನ ಸೃಷ್ಠಿ ಮಾಡಿಕ್ಕೊಂಡು ಐಡಿಬಿಐ ಬ್ಯಾಂಕ್ ಮುಖಾಂತರ ಹಣ ಕಬಳಿಸಿದ ಆರೋಪ ವನ್ನ ಮೂವರು ಅಧಿಕಾರಿಗಳು ಸದ್ಯ ಎದುರಿಸುತ್ತಿದ್ದಾರೆ ಆರ್ ಟಿ ಐ ಅಡಿಯಲ್ಲಿ ಪ್ರಕಣವನ್ನ‌ ಬೆಳೆಕಿಗೆ ತಂದಿರುವ ಮಿತುನ್ ಜಾಧವ್ ಹೊರಾಟವನ್ನ ಮುಂದುವರೆಸಿದ್ದಾರೆ.

Dharwad KIADB: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ

ಚಿಕ್ಕಮಲ್ಲಿಗವಾಡ ಗ್ರಾಮದ ರೈತ ಶಿವನಗೌಡ ಪಾಟೀಲ ಹೇಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದರ ಬಗ್ಗೆ ದಾಖಲಾತಿಗಳು ಬೆಳಕಿಗೆ ಬಂದಿವೆ. ಸರ್ವೆ ನಂ 708,704,718 ರಲ್ಲಿರುವ 20 ಎಕರೆ 4 ಗುಂಟೆ ಭೂಮಿಗೆ ಶಿವನಗೌಡ ಪಾಟೀಲ 2012 ರಲ್ಲಿ 20 ಎಕರೆ 4 ಗುಂಟೆಗೆ ಪರಿಹಾರ ಪಡೆದುಕ್ಕೊಂಡಿದ್ದರು 5,22,60,000 ಹಣವನ್ನ ಪರಿಹಾರ ಪಡೆದುಕ್ಕೊಂಡಿದ್ದರು ಆದರೆ ಮತ್ತೆ 2022 ರಲ್ಲಿ ಮತ್ತೆ ಶಿವನನೌಡ ಪಾಟೀಲ ಹೇಸರಿನಲ್ಲಿ ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ದಾರೆ ಅನ್ನೋ ಆರೋಪವನ್ನ ರೈತ ಶಿವನಗೌಡ ಪಾಟೀಲ ಮಾಡಿದ್ದಾರೆ.

Dharwad : ಕೆಐಎಡಿಬಿ ಬಹುಕೋಟಿ ಹಗರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಅಸಲಿಗೆ ಶಿವನಗೌಡ ಪಾಟೀಲ ಸಹಿ ಮಾಡ್ತಾರೆ ಆದರೆ ಖೊಟ್ಟಿ ದಾಖಲೆಯಲ್ಲಿ ಶಿವನಗೌಡ ಅವರ ಹೆಬ್ಬಟ್ ಸಹಿ ಮಾಡಿ ಹಣ ಡ್ರಾ‌ ಮಾಡಿಕ್ಕೊಂಡಿರುವ ಅಧಿಕಾರಿಗಳು ದಾಖಲಾತಿಗಳನ್ನ ರೈತ ಶಿವನಗೌಡ ಬಿಡುಗಡೆ ಮಾಡಿದ್ದಾನೆ. ಇನ್ನು ಈ ಮೂವರ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದ ಬಸವರಾಜ ಕೊರವರ, ಮತ್ತು ರೈತ ಶಿವನಗೌಡ ಪಾಟೀಲರು ಸೂಕ್ತ ತನಿಖೆಗೆ ಆಗ್ರಹ ಮಾಡಿದ್ದಾರೆ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಬಸವರಾಜ್ ಕೊರವರ ಒತ್ತಾಯ ಮಾಡಿದ್ದಾರೆ.

Follow Us:
Download App:
  • android
  • ios