ಹೂಡಿಕೆಯಿಂದ ಲಾಭ ಬರುತ್ತದೆಂದು ನಂಬಿ ಮೋಸ ಹೋದ ಕೊರಿಯರ್‌ ಉದ್ಯೋಗಿ

ಚಿಕ್ಕಬಳ್ಳಾಪುರ(ಅ.16): ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆಯೆಂದು ನಂಬಿದ ಕೊರಿಯರ್‌ ಕಂಪನಿ ಉದ್ಯೋಗಿಗೆ ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಒಂದಲ್ಲ ಎರಡಲ್ಲ ಬರೋಬ್ಬರಿ 11 ಲಕ್ಷ ರು, ಹಣವನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ.

ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ ಮೋಸದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ನಿವಾಸಿ ದೇವನಹಳ್ಳಿಯಲ್ಲಿ ಡಿಲವರಿ ಕಾಂ ಕೊರಿಯರ್‌ ಕಂಪನಿಯಲ್ಲಿ ಕೆಲಸ ಮಾಡುವ ಮಹೇಶ್‌ (23) ಎಂದು ಗುರುತಿಸಲಾಗಿದೆ.

ಸುಂದರಿ ಮಾತಿಗೆ ಮರುಳಾಗಿ ಬೆತ್ತಲಾದ : 10 ಲಕ್ಷ ಕಳೆದುಕೊಂಡ ಮಾಜಿ ಸೈನಿಕ!

ಮಹೇಶ್‌ ಮೊಬೈಲ್‌ನಲ್ಲಿ ಸರ್ಚ್‌ ಮಾಡುವಾಗ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ವರ್ಕ್‌ ಫ್ರಂ ಹೋಂ ಅಂತ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಐಟಂ ಗಳ ಮೇಲೆ ಹೂಡಿಕೆಯನ್ನು ಮಾಡಿದರೆ ನಿಮಗೆ ಉತ್ತಮ ಲಾಭ/ರಿಟರ್ನಸ್‌ ಬರುತ್ತದೆಂಬ ಸಂದೇಶ ನಂಬಿದ ಮಹೇಶ್‌ ವ್ಯಾಟ್ಸಾಪ್‌ ನಂಬರ್‌ 9860296816 ಮೂಲಕ ಕಾಂಟ್ಯಾಕ್ಟ್‌ ಮಾಡಿದಾಗ ಅವರು ರಿಜಿಸ್ಪ್ರೇಷನ್‌ ಪೀ ಅಂತ 500 ರು, ಕಟ್ಟಿಸಿಕೊಂಡಿದ್ದಾರೆ.

ಒಮ್ಮೆ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು ಅದಕ್ಕೆ ಹಣ ಕೂಡ ಬಂದಿದೆ. ಇದೇ ರೀತಿ ಮಹೇಶ್‌ 3,86,893 ಹೂಡಿಕೆ ಮಾಡಿದಾಗ ಆತನ ಖಾತೆಗೆ 4,31,543 ಬಂದ ರೀತಿ ತೋರಿಸಿದೆ. ಆಗ ಡ್ರಾ ಮಾಡುವುದು ಬೇಡ ಅಂತ ಪುನಃ ಪುನಃ ಹೂಡಿಕೆ ಮಾಡಿದ್ದಾರೆ. ಆದರೆ ಆತನ ಬ್ಯಾಂಕ್‌ ಖಾತೆಗೆ ಕಮಿಷನ್‌ ಹಣ ಬಂದಹಾಗೆ ತೋರಿಸಿ ಮಹೇಶ್‌ನಿಂದ ಬರೋಬ್ಬರಿ 11,71,313 ರು, ಪಡೆದು ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಮೋಸ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.