ಪ್ರವಾಸೋದ್ಯಮ ಬೆಳವಣಿಗೆಗೆ ಧಾರವಾಡ ಒಳ್ಳೆಯ ವಾತಾವರಣ ಹೊಂದಿದೆ: ತಹಶೀಲ್ದಾರ್ ಹಿರೇಮಠ
ಧಾರವಾಡ ಜಿಲ್ಲೆ ಪ್ರವಾಸೋದ್ಯಮ ಬೆಳೆಸಲು ಅತ್ಯಂತ ಸೂಕ್ತವಾದ ಪರಿಸರ, ಐತಿಹಾಸಿಕತೆ ಹೊಂದಿದೆ. ಮಲೆನಾಡು, ಬಯಲುಸೀಮೆ ಮತ್ತು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಧಾರವಾಡ ಜಿಲ್ಲೆ ಎಲ್ಲ ಭಾಗದ ಜನರಿಗೂ ಇಷ್ಟವಾಗುತ್ತದೆ: ಸಂತೋಷ ಹಿರೇಮಠ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಸೆ. 27): ಧಾರವಾಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಹುಬ್ಬಳ್ಳಿ ವಿಜನ್ ಪ್ಲಾಯ್ ಬಿಟಿಎ ಮಹಾವಿದ್ಯಾಲಯದ ಸಹಯೋಗದಲ್ಲಿ ಇಂದು(ಮಂಗಳವಾರ) ಹಳ್ಳಿಗೇರಿ ಗ್ರಾಮ ಹದ್ದೆಯಲ್ಲಿರುವ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ತಹಸಿಲ್ದಾರ್ ಸಂತೋಷ ಹಿರೇಮಠ ಅವರು, ಧಾರವಾಡ ಜಿಲ್ಲೆ ಪ್ರವಾಸೋದ್ಯಮ ಬೆಳೆಸಲು ಅತ್ಯಂತ ಸೂಕ್ತವಾದ ಪರಿಸರ, ಐತಿಹಾಸಿಕತೆ ಹೊಂದಿದೆ. ಮಲೆನಾಡು, ಬಯಲುಸೀಮೆ ಮತ್ತು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಧಾರವಾಡ ಜಿಲ್ಲೆ ಎಲ್ಲ ಭಾಗದ ಜನರಿಗೂ ಇಷ್ಟವಾಗುತ್ತದೆ. ಜಿಲ್ಲಾಡಳಿತ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಅಲ್ಲಿ ಬರುವ ಜನರಿಗೆ ಮೂಲಸೌಕರ್ಯ ಪೂರೈಸಲು ಕ್ರಮವಹಿಸಿದೆ ಅಂತ ತಿಳಿಸಿದ್ದಾರೆ.
ಧಾರವಾಡ: 4 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್
ಪ್ರವಾಸಿ ಮಿತ್ರರು ಜಿಲ್ಲೆಯ ಸೊಬಗನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿಸುತ್ತಾರೆ. ಧಾರವಾಡ ಜಿಲ್ಲೆ ಪರಿಸರ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸ್ವಾತಂತ್ರ್ಯ ಹೊರಾಟದ ಅನೇಕ ಪ್ರಮುಖ ಸ್ಥಳಗಳನ್ನು ಹೊಂದಿದೆ. ಪ್ರವಾಸವನ್ಬು ಉದ್ಯಮವಾಗಿ ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಹೆಚ್ಚಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಕಾರ್ಯಕ್ರಮದಲ್ಲಿ ಸಂಶೋಧಕಿ ರೇಖಾ ಶೆಟ್ಟರ ಅವರು ಜಿಲ್ಲೆಯ ಕರಕುಶಲ ವಸ್ತುಗಳ ಬಗ್ಗೆ ಹಾಗೂ ಪ್ರವಾಸೋದ್ಯಮದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮತ್ತು ಉಪನ್ಯಾಸಕ ರಾಜು ರಾಠೂಡ ಅವರು ಪ್ರವಾಸೋದ್ಯಮದ ಪುನರಾವಲೋಕನ ಕುರಿತು, ವಿಜನ್ ಪ್ಲಾಯ್ ಬಿ ಟಿ ಎ ಮಹಾವಿದ್ಯಾಲಯ ಪ್ರಾಚಾರ್ಯ ಪ್ರಕಾಶ ಶಿವಳ್ಳಿ ಅವರು ಪ್ರವಾಸೋದ್ಯಮ ದಿನಾಚರಣೆ ಕುರಿತು ಮಾತನಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೇವದಾಸಿಯರು ಹೊಲಿದಿದ್ದ ಕವದಿಯನ್ನು ಗಿಫ್ಟ್ಕೊಟ್ಟ ಸುಧಾಮೂರ್ತಿ
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅಶ್ವಿನಿ ಚಡಚಣ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಮಂಜುನಾಥ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮದ ಸಮಾಲೋಚಕ ಚೇತನ ಜಾಡರ, ಮತ್ತು ಪ್ರವಾಸಿ ಮಿತ್ರರು, ಹುಬ್ಬಳ್ಳಿ ವಿಜನ್ ಪ್ಲಾಯ್ ಬಿಟಿಎ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಾಗೂ ಮಂಜುನಾಥ ಕೂನ್ನುರ ಮತ್ತು ಕಲಾ ತಂಡದವರು ಮತ್ತಿತರರು ಉಪಸ್ಥಿತರಿದ್ದರು.