ಧಾರವಾಡ[ಆ.25]  ಅರಣ್ಯ ವೀಕ್ಷಕರ ದೈಹಿಕ ಪರೀಕ್ಷೆ ಮುಂದೂಡಲಾಗಿದೆ. ಆಗಸ್ಟ್ 26 ರಿಂದ 28 ರವರೆಗೆ ಧಾರವಾಡದ ಆರ್ .ಎನ್ .ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅರಣ್ಯವೀಕ್ಷಕರ ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯನ್ನು ಕಾರಣಂತರಗಳಿಂದ ಮುಂದೂಡಲಾಗಿದೆ.

ಪರೀಕ್ಷೆ  ಸೆ. 3 ರಿಂದ 5 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಈ ಬದಲಾದ ದಿನಾಂಕದಂದು ಪರೀಕ್ಷೆಗೆ ಹಾಜರಾಗಲು ಧಾರವಾಡದಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್ ಹೇಳಿದ್ದಾರೆ.