Dharwad: ನಿಮಗೆ‌ ಸರಿಯಾಗಿ ರೇಶನ್‌ ಸಿಗ್ತಿಲ್ಲವೆ, ನೇರವಾಗಿ ಈ‌ ಕೆಳಗಿನ ಪೋನ್‌ ನಂಬರ್‌ಗೆ‌ ಕರೆ ಮಾಡಿ ದೂರು ಸಲ್ಲಿಸಿ

ಧಾರವಾಡ ಜಿಲ್ಲೆಯ ಎಲ್ಲ ಪಡಿತರ ಚೀಟಿ ಅಂದ್ರೆ ರೇಶನ್ ಅಂಗಡಿಗಳಲ್ಲಿ  ಬಡವರಿಗೆ‌ ಸರಿಯಾಗಿ‌ ಅಕ್ಕಿ ಸಿಗ್ತಿಲ್ಲವೆ, ಯಾರಾದ್ರೂ ಕಡಿಮೆ‌ ಅಕ್ಕಿಯನ್ನ ಕೊಡ್ತಾ ಇದಾರೆ ಅಂದ್ರೆ ದೂರು ದಾಖಲಿಸುವಂತೆ ಧಾರವಾಡ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ನೇರವಾಗಿ ಕರೆ  ಮಾಡಲು   ಪೋನ್‌ ನಂಬರ್ ಒದಗಿಸಿದ್ದಾರೆ.

Dharwad Food Department Joint Director  released Ration Card Complaint Helpline Numbers gow

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್‌

ಧಾರವಾಡ(ಜ.8): ಧಾರವಾಡ ಜಿಲ್ಲೆಯ ಎಲ್ಲ ಪಡಿತರ ಚೀಟಿ ಅಂದ್ರೆ ರೇಶನ್ ಅಂಗಡಿಗಳಲ್ಲಿ  ಬಡವರಿಗೆ‌ ಸರಿಯಾಗಿ‌ ಅಕ್ಕಿ ಸಿಗ್ತಿಲ್ಲವೆ, ಯಾರಾದ್ರೂ ಕಡಿಮೆ‌ ಅಕ್ಕಿಯನ್ನ ಕೊಡ್ತಾ ಇದಾರೆ ಹಾಗೇನಾದ್ರೂ ನಿಮಗೆ ಅಕ್ಕಿಯಲ್ಲಿ ವ್ಯತ್ಯಾಸ್ ಬಂದ್ರೆ ಇನ್ಮುಂದೆ ನೀವು ಮಾಡಬೇಕಾದದ್ದು ಇಷ್ಟೆ. ನೇರವಾಗಿ‌ ಆಹಾರ ಇಲಾಖೆಯ ಅಧಿಕಾರಿಗಳಿಗೆ‌ ದೂರು ಸಲ್ಲಿಸಬಹುದು ಇಂತಹ‌ ಒಂದು ಕೆಲಸಕ್ಕೆ ಧಾರವಾಡ ಆಹಾರ‌ ಇಲಾಖೆಯ ಜಂಟಿ‌ ನಿರ್ದೆಶಕರು ಕೈ ಹಾಕಿದ್ದಾರೆ.

ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಜನೆವರಿ-2023ನೇ ಮಾಹೆಯಲ್ಲಿ  ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ. ಎನ್‍ಎಫ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 15 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಬಡವರಿಗೆ ರೇಶನ್‌ ನಿರಾಕರಿಸುವುದು ಅಪರಾಧ: ಹೈಕೋರ್ಟ್

ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರ ಧಾನ್ಯದ ಪ್ರಮಾಣವನ್ನು ನ್ಯಾಯ ಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವುದು. ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ನೀಡಿದಲ್ಲಿ ನೀವು ಯಾರಿಗೂ ಹೆದರದೆ ನೇರವಾಗಿ ಆಹಾರ ನೀರಿಕ್ಷಕರಿಗೆ ಕರೆ ಮಾಡಿ ಅಂಗಡಿಯ ಹೆಸರು‌ ಅವರ ಲೈಸಸ್ಸ್ ನಂಬರ್ ಹೇಳಿದರೆ ಕ್ಷಣಾರ್ಧದಲ್ಲಿ ಅಧಿಕಾರಿಗಳು‌ ಬಂದು‌ ಪರಿಶಿಲನೆ ಮಾಡಿ‌ ತಪ್ಪಿತಸ್ಥರ‌ ವಿರುದ್ದ ಕ್ರಮ ಕೈ ಗೊಳ್ತಾರೆ ಎಂದು‌ ಜಿಂಟಿ ನಿರ್ದೆಶಕರು‌‌ ವಿನೋದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡಿತರದಾರರಿಗೆ 10ರ ಬದಲು ಆರೇ ಕೆಜಿ ಫ್ರೀ ಅಕ್ಕಿ..!

ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಆಹಾರ ನಿರೀಕ್ಷಿಕರು ನಂಬರಗಳನ್ನು ಕೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಧಾರವಾಡ ಶಹರ 8088737170, 
ಧಾರವಾಡ ತಾಲ್ಲೂಕು ಆಹಾರ ಶಿರಸ್ತೇದಾರ 9845202400, 8310109795 
ಅಳ್ನಾವರ 9448221892. 
ಹುಬ್ಬಳ್ಳಿ ಪಡಿತರ ಪ್ರದೇಶದ ಆಹಾರ ನಿರೀಕ್ಷಕರು 9611123128. 8310490713, 9886320360, 9482532326, 
ಕಲಘಟಗಿ 9741304522, 
ಕುಂದಗೋಳ 8618525185, 
ನವಲಗುಂದ 9902142458 ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ 0836 2444594ಗೆ ದೂರು ಸಲ್ಲಿಸಿದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ವಿನೋದ್ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios