ಕಳಪೆ ಹೈಡ್ರೋಪವರ್‌ ಮಷಿನ್ ಕೊಟ್ಟ ಕಂಪನಿಗೆ 1.10 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

ಹೈಡ್ರೋ ಪವರ್‌ ಮಷಿನ್‌ ಖರೀದಿ ಮಾಡಿದ ಹುಬ್ಬಳ್ಳಿ ಗ್ರಾಹಕನಿಗೆ ಕಳಪೆ ಯಂತ್ರವನ್ನು ಪೂರೈಕೆ ಮಾಡಿದ ಕಂಪನಿಗೆ ಗ್ರಾಹಕರ ಕೋರ್ಟ್‌ 1.10 ಲಕ್ಷ ರೂ. ದಂಡ ವಿಧಿಸಿದೆ.

Dharwad consumer court fined 1 lakhs to the company that provided poor hydropower machine sat

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ನ.06): ಹೈಡ್ರೋ ಪವರ್‌ ಮಷಿನ್‌ ಖರೀದಿ ಮಾಡಿದ ಹುಬ್ಬಳ್ಳಿ ಗ್ರಾಹಕನಿಗೆ ಕಳಪೆ ಯಂತ್ರವನ್ನು ಪೂರೈಕೆ ಮಾಡಿದ ಕಂಪನಿಗೆ ಧಾರವಾಡ ಗ್ರಾಹಕ ನ್ಯಾಯಾಲಯದಿಂದ 1.10 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಲಾಗಿದೆ. 

ಹುಬ್ಬಳ್ಳಿ ಶೆಟ್ಟರ ಕಾಲನಿಯ ನಿವಾಸಿ ಅಶೋಕ ಶದ್ಮಾಕರ್ ಅವರು ಎದುರುದಾರರಾದ ಬೆಳಗಾವಿಯ ನಿಖಿತಾ ಅವರಿಂದ ಅಕ್ಟೋಬರ್-2022 ಹೈಡ್ರೋಪವರ್ ಉಪಕರಣ ಖರೀದಿಸಿದ್ದರು. ಅದಕ್ಕೆ ಅವರು ಒಟ್ಟು 14,00,015 ರೂಪಾಯಿ ಹಣ ಎದುರುದಾರರಿಗೆ ಕೊಟ್ಟಿದ್ದರು. ಹೈಡ್ರೋಪಾವರ್ ಉಪಕರಣ 70n ತ್ಯಾಜ್ಯ ಬಾಟಲುಗಳನ್ನು ಪ್ರೆಸ್ ಮಶೀನ ಆಗಿತ್ತು. ಸದರಿ ಮಶೀನನ್ನು 4 ತಿಂಗಳ ತಡವಾಗಿ ಡೆಲಿವರಿ ಕೊಟ್ಟಿದ್ದರು. ದೂರುದಾರರು ಆ ಮಶೀನ ಖರೀದಿಸಲು ಹುಬ್ಬಳ್ಳಿಯ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಎದುರುದಾರರು ಮಶೀನನ್ನು 4 ತಿಂಗಳ ತಡವಾಗಿ ಕೊಟ್ಟಿದ್ದರಿಂದ ದೂರುದಾರರಿಗೆ ಒಟ್ಟು 4 ತಿಂಗಳ ಕಂತುಕಟ್ಟುವ ಹೊಣೆಗಾರಿಕೆ ಬಂದಿತ್ತು. ದೂರುದಾರ ಆ ಮಶೀನ್ ಚಾಲೂ ಮಾಡಿದ ಮೇಲೆ ಅದರಲ್ಲಿ ಕೆಲವೊಂದು ನ್ಯೂನ್ಯತೆಗಳು ಕಂಡುಬಂದು ಆಯಿಲ್ ಸೋರುವಿಕೆಯಾಗಿ ಅವರಿಗೆ ನಷ್ಟ ಉಂಟಾಯಿತು.

ಕರ್ನಾಟಕದ ಜನತೆಗೆ ಉಚಿತ ವಿದ್ಯುತ್‌ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?

ಆದ್ದರಿಂದ ತನಗೆ ಆರ್ಥಿಕ ನಷ್ಟವಾಗಿದೆ ಮತ್ತು ತನ್ನ ಉದ್ಯೋಗಕ್ಕೆ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ದೂರು ನೀಡಿದ್ದನು. ಸೇವಾ ನ್ಯೂನ್ಯತೆಯ ಬಗ್ಗೆ ಎದುರುದಾರ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಜುಲೈ 11ರಂದು ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ದೂರುದಾರರು ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಎದುರುದಾರರಿಂದ ಮಶೀನನ್ನು ಪಡೆದ ಬಗ್ಗೆ ಮತ್ತು ಹಣ ವರ್ಗಾಯಿಸಿದ ಬಗ್ಗೆ ದಾಖಲೆಗಳನ್ನು ಪರಿಗಣಿಸಿದೆ. 

ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ಟಿಪ್ಪು ಧ್ವಂಸಗೊಳಿಸಿದ್ದ ಗೋಪಾಲಕೃಷ್ಣ ದೇಗುಲ ಪತ್ತೆ!

ಹೈಡ್ರೋ ಪವರ್ ಮಷಿನ್ ಖರೀದಿಸಿದ ಕೆಲವೇ ದಿನದಲ್ಲಿ ದೋಷಗಳು ಕಂಡು ಬಂದಿರುವುದರಿಂದ ಮತ್ತು ಎದುರುದಾರರು ರಿಪೇರಿ ಮಾಡಿದರೂ ದೋಷಗಳು ಸರಿಯಾಗಿಲ್ಲ. ಆದ್ದರಿಂದ ಕಂಪನಿಯಿಂದ ದೋಷಯುಕ್ತ ಹೈಡ್ರೋಪವರ್ ಮಷಿನ್ ಕೊಟ್ಟು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗವು ತನ್ನ ತೀರ್ಪಿನಲ್ಲಿ ಹೇಳಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ವ್ಯವಹಾರಿಕ ನಷ್ಟ ಪರಿಗಣಿಸಿ ದೂರುದಾರರು ಹೇಳಿದಾಗ ಆ ಮಶೀನ ರಿಪೇರಿ ಮಾಡಿ ಅದು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ಆಯೋಗ ಎದುರುದಾರರಿಗೆ ತಿಳಿಸಿದೆ. ಮಷಿನ್‌ನಿಂದ ಆಯಿಲ್ ಸೋರುವಿಕೆ ಆಗಿ ದೂರುದಾರರಿಗೆ ಉಂಟಾದ ನಷ್ಟಕ್ಕೆ 50 ಸಾವಿರ ರೂ.  ಪರಿಹಾರ ಕೊಡಲು ಆಯೋಗ ಆದೇಶಿಸಿದೆ. ಸೇವಾ ನ್ಯೂನ್ಯತೆಯಿಂದ ಆಗಿರುವ ಸಮಸ್ಯೆ ಹಾಗೂ ಮಾನಸಿಕ ಬಳಲಿಕೆಗೆ 50 ಸಾವಿರ ರೂ. ದಂಡ ಹಾಗೂ ಪ್ರಕರಣದ ಖರ್ಚು ವೆಚ್ಚ 10 ಸಾವಿರ ರೂ. ಪರಿಹಾರವನ್ನು ತಿಂಗಳ ಒಳಗಾಗಿ ನೀಡುವಂತೆ ಕಂಪನಿಗೆ ಆದೇಶ ನೀಡಿದೆ.

Latest Videos
Follow Us:
Download App:
  • android
  • ios