Asianet Suvarna News Asianet Suvarna News

ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ಟಿಪ್ಪು ಧ್ವಂಸಗೊಳಿಸಿದ್ದ ಗೋಪಾಲಕೃಷ್ಣ ದೇಗುಲ ಪತ್ತೆ!

ಟಿಪ್ಪು ಸುಲ್ತಾನ್‌ ದಂಡಯಾತ್ರೆ ವೇಳೆ ಧ್ವಂಸಗೊಳಿಸಿದ್ದ ಗೋಪಾಲಕೃಷ್ಣನ ದೇವಸ್ಥಾನ ಮುಸ್ಲಿಂ ವ್ಯಕ್ತಿ ಅತಿಕ್ರಮಣ ಮಾಡಿಕೊಂಡಿದ್ದ ಜಾಗದಲ್ಲಿ ಪತ್ತೆಯಾಗಿದೆ.

Tipu Sultan destroyed ancient Gopalakrishna Temple found at Belthangady in Dakshina Kannada sat
Author
First Published Nov 6, 2023, 4:20 PM IST

ದಕ್ಷಿಣ ಕನ್ನಡ (ನ.06): ಮುಸ್ಲಿಂ ವ್ಯಕ್ತಿಯೊಬ್ಬ ಸರ್ಕಾರಿ ಜಾಗವನ್ನು ಅತಿಕ್ರಮಗೊಳಿಸಿಕೊಂಡಿದ್ದ ಜಾಗದಲ್ಲಿ ಟಿಪ್ಪು ಸುಲ್ತಾನ್‌ ಧ್ವಂಸಗೊಳಿಸಿದ್ದಾನೆ ಎನ್ನಲಾದ ಶ್ರೀ ಭಗವದ್‌ ಗೋಪಾಲಕೃಷ್ಣ ದೇಗುಲ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ಅದು ಕೂಡ ಶ್ರೀಕೃಷ್ಣನೇ ಹಿಂದೂ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು ದೇಗುಲ ಇರುವ ಬಗ್ಗೆ ಸುಳಿವು ನೀಡಿದ್ದು, ಜಾಗದಲ್ಲಿ ಶೋಧನೆ ಮಾಡಿದಾಗ ದೇಗುಲದ ಅವಶೇಷಗಳು ಹಾಗೂ ಗೋಪಾಲಕೃಷ್ಣ ಮೂರ್ತಿ ಇರುವುದು ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಪತ್ತೆಯಾಗಿದೆ. ಸಾಕ್ಷಾತ್ ವಿಷ್ಣುವೇ ಕನಸಿನಲ್ಲಿ ಬಂದು ಇರುವಿಕೆ ತೋರಿದ ರೋಚಕ ಸ್ಟೋರಿಯಾಗಿದೆ. ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದಲ್ಲಿ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ತೆಕ್ಕಾರು ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ದೇವರ ಪವಾಡ. ನೂರಾರು ವರ್ಷಗಳ ಹಿಂದೆಯೇ ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಗಿದೆ ಎನ್ನಲಾದ ಗೋಪಾಲಕೃಷ್ಣ ದೇವಸ್ಥಾನ ಈಗ ಪತ್ತೆಯಾಗಿದೆ.

ಶಿವಮೊಗ್ಗ ಭಾರತದ ಭಾಗವೋ, ಮುಸ್ಲಿಂ ಸಾಮ್ರಾಜ್ಯವೋ? ಪಾಕಿಸ್ತಾನ, ಸಾಬ್ರು ದ್ವಾರಬಾಗಿಲು ನಿರ್ಮಾಣ!

ಟಿಪ್ಪು ಸುಲ್ತಾಲ್ ದಂಡಯಾತ್ರೆ ಬಂದಿದ್ದ ತೆಕ್ಕಾರು ಪ್ರದೇಶದಲ್ಲಿ ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರೋ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿದೆ. ಅಲ್ಲದೇ ಕೆಲ ಹಿರಿಯರ ಮಾಹಿತಿಯಂತೆ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನವಿದ್ದ ಮಾಹಿತಿಯಿದೆ. ಹೀಗಾಗಿ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮಾಡಿಕೊಂಡು ದೇವಸ್ಥಾನ ಶೋಧ ಆರಂಭಿಸಿದ್ದ ಗ್ರಾಮಸ್ಥರು. ಆದರೆ, ನಿಖರ ಜಾಗದ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಸುಮ್ಮನಾಗಿದ್ದರು. 

ಇನ್ನು ಕಳೆದ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಿದ್ದನು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ಗೋಪಾಲಕೃಷ್ಣನ ದೇವಸ್ಥಾನ ಇರೋ ಸುಳಿವು ಸಿಕ್ಕಿತ್ತು. ಆದರೆ ಲಕ್ಷ್ಮಣರ ಜಾಗದ ಸನಿಹ ಹಾಮದ್ ಬಾವಾ ಎಂಬವರ ಜಾಗವಿತ್ತು. ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರೆತ ಜಾಗದಲ್ಲಿ ಬಾವಾಗೆ ಸೇರಿದ ಅಡಿಕೆ ತೋಟವಿತ್ತು. ಈ ಮಧ್ಯೆ ಲಕ್ಷಣ್ ಅವರ ಕನಸಿನಲ್ಲಿ ವಿಷ್ಣು ಬಂದು ಇರುವಿಕೆ ತೋರಿತ್ತು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿಯಲ್ಲಿ ಲಕ್ಷ್ಮಣರಿಗೆ ಬಿದ್ದಿದ್ದ ಕನಸು ಬಿದ್ದಿದೆ.

ಇದರ ನಂತರ ಲಕ್ಷ್ಮಣ ಅವರು ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನ ಇರೋ ಮಾಹಿತಿ ಲಭ್ಯವಾಗಿದೆ. ಅದರಂತೆ ಜಾಗದ ದಾಖಲೆ ಪರಿಶೀಲಿಸಿದಾಗ ಅದು ಸರ್ಕಾರಿ ಜಾಗ ಎಂಬುದು ಪತ್ತೆಯಾಗುದೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಕಾರದಲ್ಲಿ ಮುಸ್ಲಿಂ ವ್ಯಕ್ತಿಯ ಜಾಗದ ಸರ್ವೇ ಮಾಡಲಾಗಿದೆ. ಈ ಸರ್ವೇ ಬೇಳೆ 25 ಸೆಂಟ್ಸ್ ಜಾಗ ಸರ್ಕಾರಿ ಎಂಬುದು ಪತ್ತೆಯಾಗಿದೆ. ಹಾಮದ್ ಬಾವಾ ಅಡಿಕೆ ಗಿಡ ನೆಟ್ಟಿದ್ದ ಜಾಗ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ವರ್ಷದ ಬಳಿಕ ಬಾಗಿಲು ತೆರೆದ ಹಾಸನಾಂಬೆ ದೇಗುಲ, ನ.14ರವರೆಗೆ ದೇವರ ದರ್ಶನ

ನಂತರ, ಸ್ಥಳೀಯ ಜನರ ನಂಬಿಕೆಯಂತೆ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್‌ಗೆ ಜಿಲ್ಲಾಡಳಿತದಿಂದ ಜಾಗ ಮಂಜೂರು‌ ಮಾಡಲಾಗಿತ್ತು. ಹೀಗಾಗಿ ನಿನ್ನೆ ಜೆಸಿಬಿಯಲ್ಲಿ ಉತ್ಖನನದ ವೇಳೆ ಗೋಪಾಲಕೃಷ್ಣ ದೇವರ ವಿಗ್ರಹಗಳು ಪತ್ತೆಯಾಗಿವೆ. ನೂರಾರು ವರ್ಷ ಹಳೆಯದಾದ ದೇವರ ವಿಗ್ರಹಗಳು ಪತ್ತೆಯಾಗಿವೆ. ಸುಮಾರು 10 ರಿಂದ 15 ಅಡಿ ಆಳದ ಬಾವಿಯಲ್ಲಿ ಕನಸಿನಲ್ಲಿ ಬಂದಂತೆ ಮೂಲ ದೇವರ ವಿಗ್ರಹ ಪತ್ತೆಯಾಗಿದೆ. ಹಾಮದ್ ಬಾವಾ ಅವರು ಸದ್ಯ ಸುತ್ತಲಿನ 75 ಸೆಂಟ್ಸ್ ಜಾಗವನ್ನೂ ದೇವಸ್ಥಾನ ಟ್ರಸ್ಟ್‌ಗೆ ಮಾರಾಟ ಮಾಡಿದ್ದಾನೆ. ಸೌಹಾರ್ದಯುತವಾಗಿ ತನ್ನ ಜಾಗವನ್ನು ದೇವಸ್ಥಾನ ನಿರ್ಮಾಣಕ್ಕೆ ಮಾರಾಟ ಮಾಡಿದ್ದಾರೆ. ಹೀಗಾಗಿ, ಕೆಲವೇ ತಿಂಗಳಲ್ಲಿ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

Follow Us:
Download App:
  • android
  • ios