Asianet Suvarna News Asianet Suvarna News

Operation Ganga: ಬದುಕಿರುವವರ ಕರೆತರೋದೇ ಕಷ್ಟ, ಇನ್ನು ಶವ ತರುವುದು ಹೇಗೆ?: ಬಿಜೆಪಿ ಶಾಸಕ

*  1 ಶವ ತರುವ ಸ್ಥಳದಲ್ಲಿ 8-10 ಜನರ ಕರೆತರಬಹುದು
*  ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಅರವಿಂದ ಬೆಲ್ಲದ
*  ಯುದ್ಧದ ಸನ್ನಿವೇಶವನ್ನು ಮಾಧ್ಯಮಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ 
 

Dharwad BJP MLA Aravind Bellad React on Indian Students in Ukraine grg
Author
Bengaluru, First Published Mar 4, 2022, 7:17 AM IST

ಧಾರವಾಡ(ಮಾ.04): ‘ಉಕ್ರೇನ್‌ದಿಂದ(Ukraine) ಜೀವಂತ ಇರುವವರನ್ನು ಏರ್‌ಲಿಫ್ಟ್‌ ಮಾಡುವುದೇ ಕಷ್ಟವಾಗುತ್ತಿದೆ. ಇನ್ನು ಶವ ತರುವುದು ಕಷ್ಟ ಸಾಧ್ಯ. ಅಷ್ಟಕ್ಕೂ ಶವ ತರಲು ವಿಮಾನದಲ್ಲಿ ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ. ಒಂದು ಶವ ತರುವ ಸ್ಥಳದಲ್ಲಿ 8-10 ಜನರನ್ನು ಆರಾಮಾಗಿ ಕರೆದುಕೊಂಡು ಬರಬಹುದಾಗಿದೆ.’

ರಷ್ಯಾದ(Russia) ಶೆಲ್‌ ದಾಳಿಗೆ ಉಕ್ರೇನ್‌ನಲ್ಲಿ ಬಲಿಯಾಗಿರುವ ಹಾವೇರಿ(Haveri) ಜಿಲ್ಲೆಯ ಚಳಗೇರಿಯ ವೈದ್ಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡ್ರ ಮೃತದೇಹವನ್ನು(Deadbody) ಭಾರತಕ್ಕೆ(India) ತರುವ ವಿಚಾರ ಸಂಬಂಧ ಧಾರವಾಡದ(Dharwad) ಬಿಜೆಪಿ(BJP) ಶಾಸಕ ಅರವಿಂದ ಬೆಲ್ಲದ(Aravind Bellad) ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Russia Ukraine Crisis ಉಕ್ರೇನಿಂದ 3000 ಭಾರತೀಯರು ಒತ್ತೆ, ಪುಟಿನ್‌ ‘ಬಾಂಬ್‌’

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಯುದ್ಧದ(War) ಸನ್ನಿವೇಶವನ್ನು ಮಾಧ್ಯಮಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ. ಈ ಸ್ಥಿತಿಯಲ್ಲಿ ಜೀವಂತ ಇದ್ದವರನ್ನೇ ತರುವುದು ಕಷ್ಟವಾಗುತ್ತಿದೆ. ಹೀಗಿದ್ದಾಗ ಮೃತದೇಹ ತರುವುದು ಕಷ್ಟವಾಗಲಿದೆ. ಆದರೂ ವಿದೇಶಾಂಗ ಇಲಾಖೆ ನವೀನ್‌ ಮೃತದೇಹ ತರಲು ಹಗಲು-ರಾತ್ರಿ ಪ್ರಯತ್ನ ಮಾಡುತ್ತಿದೆ ಎಂದರು.

ಸ್ವತಃ ಪ್ರಧಾನಿ ಮೋದಿ(Narendra Modi) ಅವರೇ ಮುತುವರ್ಜಿ ವಹಿಸಿದ್ದು, ರಷ್ಯಾ ಪ್ರಧಾನಿ ಮತ್ತು ಉಕ್ರೇನ್‌ ಅಧಿಕಾರಿಗಳೊಂದಿಗೂ ಮಾತನಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು(Indian Students) ತರುವ ಪ್ರಯತ್ನ ನಡೆದಿದೆ. ಸಾಧ್ಯವಾದರೆ ನವೀನ ಮೃತದೇಹ ತರುವ ಕೆಲಸ ಆಗಲಿದೆ ಎಂದರು.

ಇಂದು 100ಕ್ಕೂ ಅಧಿಕ ಕನ್ನಡಿಗರು ಮರಳುವ ನಿರೀಕ್ಷೆ

ಉಕ್ರೇನ್‌ನಿಂದ (Ukraine) ಶುಕ್ರವಾರ 100ಕ್ಕೂ ಅಧಿಕ ಕನ್ನಡಿಗರು ಆಗಮಿಸುವ ನಿರೀಕ್ಷೆ ಇದ್ದು, ಉಳಿದವರ ಪೈಕಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಕಲ್ಪಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಸಂದೇಶ ನೀಡಲಾಗಿದೆ ಎಂದ ಉಕ್ರೇನ್‌ ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್‌ ಅಧಿಕಾರಿ (State Nodal Officer) ಮನೋಜ್‌ ರಾಜನ್‌ (Manoj Rajan)ತಿಳಿಸಿದ್ದಾರೆ.

Ukraine Crisis: ಖಾರ್ಕೀವ್‌ನಿಂದ ಭಾರತೀಯರ ಸ್ಥಳಾಂತರಕ್ಕೆ 6 ತಾಸು ಯುದ್ಧ ನಿಲ್ಲಿಸಲು ಮುಂದಾದ ರಷ್ಯಾ!

ಭಾರತೀಯ ರಾಯಭಾರಿ ಕಚೇರಿ ಬುಧವಾರ ಸಂಜೆಯೊಳಗೆ ಖಾರ್ಕಿವ್‌ (Kharkiv) ನಗರ ಬಿಡುವಂತೆ ತುರ್ತು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಕಷ್ಟುಮಂದಿ ಕನ್ನಡಿಗರು ಉಕ್ರೇನ್‌ ಗಡಿ ಪ್ರದೇಶಕ್ಕೆ ಹೊರಟಿದ್ದು, ಈಗಾಗಲೇ ಹಲವರು ಬಂದು ತಲುಪಿದ್ದಾರೆ. ಆಪರೇಷನ್‌ ಗಂಗಾದಲ್ಲಿ (Operation Ganga) ಉಕ್ರೇನ್‌ನಿಂದ ಶುಕ್ರವಾರ 19 ವಿಮಾನಗಳು ಭಾರತೀಯರನ್ನು ಹೊತ್ತು ಬರಲಿವೆ. ಈ ಎಲ್ಲ ವಿಮಾನಗಳಲ್ಲಿಯೂ ಕರ್ನಾಟಕದ ವಿದ್ಯಾರ್ಥಿಗಳಿದ್ದು, 100ಕ್ಕೂ ಅಧಿಕ ಮಂದಿ ರಾಜ್ಯಕ್ಕೆ ಮರಳುವ ನೀರಿಕ್ಷೆ ಇದೆ. ಕಳೆದ ಐದು ದಿನಗಳ ಪೈಕಿ ಗುರುವಾರ ಅತಿ ಹೆಚ್ಚು 63 ಮಂದಿ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಬಳಿ ಉಕ್ರೇನ್‌ನಲ್ಲಿಯೇ ಉಳಿದುಕೊಂಡಿರುವ ಕನ್ನಡಿಗರ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಯಾರೆಲ್ಲಾ ಸಂಕಷ್ಟದಲ್ಲಿದ್ದಾರೆಯೋ ಅವರಿಗೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳ ನೆರವು ಕೊಡಿಸಲಾಗುತ್ತಿದೆ. ಯುದ್ಧ ಹೆಚ್ಚಿರುವ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ, ನೀರು, ಗಡಿಗೆ ತೆರಳಲು ಜತೆಗಾರರ ಸಂಪರ್ಕ ಇಲ್ಲದವರಿಗೆ ವಿಶ್ವವಿದ್ಯಾಲಯ, ಸ್ಥಳೀಯರಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸಹಾಯವಾಣಿಗೆ 693 ಮಂದಿ ಕುಟುಂಬಸ್ಥರು ನೋಂದಣಿಯಾಗಿದ್ದಾರೆ. ಕೆಲವರು ಯುದ್ಧ ಆರಂಭಕ್ಕೂ ಒಂದು ದಿನ ಮುನ್ನವೇ ಉಕ್ರೇನ್‌ನಿಂದ ಹೊರಟು ರಾಜ್ಯಕ್ಕೆ ಮರಳಿದ್ದಾರೆ. ಅಂತಹವರ ಹೆಸರು ನೋಂದಣಿ ಪಟ್ಟಿಯಲ್ಲಿದೆ. ಹೀಗಾಗಿ, ಪ್ರತಿಯೊಬ್ಬರ ಕುಟುಂಬಸ್ಥರಿಗೆ ಕರೆ ಮಾಡಿ ಖಚಿತ ಪಡೆಸಿಕೊಳ್ಳಲಾಗುತ್ತಿದೆ. ಯುದ್ಧಪೂರ್ವದಲ್ಲಿ ಸರ್ಕಾರಕ್ಕೆ ಮಾಹಿತಿ ಇಲ್ಲದೇ ತಮ್ಮವರು ಆಗಮಿಸಿದ್ದರೆ, ಹೆಚ್ಚುವರಿ ನೋಂದಣಿ ಮಾಡಿದ್ದರೆ ಕುಟುಂಬಸ್ಥರು ಸಹಾಯವಾಣಿಗೆ ಕರೆ ಮಾಡಿ ಖಚಿತಪಡಿಸಬೇಕು ಎಂದು ಮನವಿ ಮಾಡಿದರು.
 

Follow Us:
Download App:
  • android
  • ios