ಮಂಗಳೂರು(ಜೂ.17): ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಧರ್ಮಸ್ಥಳದಲ್ಲಿ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಅನ್ನದಾನವೂ ನಡೆಯುತ್ತಿದೆ. ಆದರೆ ಇದೀಗ ಭಾನುವಾರ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪೂಜಾ ಸಮಯ ಬದಲಾಯಿಸಲಾಗಿದೆ.

ಧರ್ಮಸ್ಥಳದ ಅಣ್ಣಪ್ಪ ದೈವದ ಮಹಾತ್ಮೆ

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಭಾನುವಾರ ಸೂರ್ಯಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದರ್ಶನ ‌ಸಮಯ ಬದಲಿಸಲಾಗಿದೆ. ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮಂಜುನಾಥ ಸ್ವಾಮಿ ದರ್ಶನ ಇರುವುದಿಲ್ಲ.

ಧರ್ಮಸ್ಥಳದಲ್ಲಿ 6 ಸಾವಿರ ಜನರಿಂದ ಅನ್ನಪ್ರಸಾದ ಸ್ವೀಕಾರ, 3 ಸಾವಿರ ಜನರಿಂದ ಕೇಶ ಮುಂಡನ

ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಬೆಳಗ್ಗೆ 5.30ರಿಂದ ಬೆಳಗ್ಗೆ 9 ಗಂಟೆಯವರಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮತ್ತೆ ಸಂಜೆ‌ 4ರಿಂದ ರಾತ್ರಿ 9ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"