ಮಂಗಳೂರು(ಜೂ.10): ದಕ್ಷಿಣ ಕನ್ನಡ, ಹಾಗೂ ಕೊಡಗು ಜಿಲ್ಲೆಗಳ ಪ್ರಮುಖ ದೇವಸ್ಥಾನಗಳಲ್ಲಿ ಲಾಕ್‌ಡೌನ್‌ ಸಡಿಲದ 2ನೇ ದಿನ ಮಂಗಳವಾರ ಭಕ್ತರ ದಟ್ಟಣೆ ತುಸು ಕಡಿಮೆಯಾಗಿದೆ.

ಮೊದಲ ದಿನ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಭಕ್ತ ಸಮೂಹ ಹೆಚ್ಚಾಗಿತ್ತು. ಆದರೆ ಮಂಗಳವಾರ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಎರಡನೇ ದಿನ ಆಗಮಿಸಿದ ಭಕ್ತರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ದಕ್ಷಿಣ ಕನ್ನಡದಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

ಕೊರೋನಾ ಮಹಾಮಾರಿಯನ್ನು ದೇವರೆ ತೊಲಗಿಸಬೇಕಷ್ಟೆಎಂದು ಪ್ರತ್ಯೇಕವಾಗಿ ಪ್ರಾರ್ಥಿಸುತ್ತಿದ್ದರು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಧರ್ಮಸ್ಥಳದಲ್ಲಿ ಮಂಗಳವಾರ ಸುಮಾರು ಆರು ಸಾವಿರ ಭಕ್ತರು ಮಂಗಳವಾರ ಪ್ರಸಾದ ಭೋಜನೆ ಸ್ವೀಕರಿಸಿದ್ದಾರೆ.

ಸುಮಾರು 300 ಮಂದಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ. 3 ಸಾವಿರದಷ್ಟುಮಂದಿ ಕೇಶಮುಂಡನ ಹರಕೆ ಸೇವೆ ನೆರವೇರಿಸಿದ್ದಾರೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತ್ಯೇಕವಾಗಿ ಶಿಸ್ತಿನಿಂದ ತೀರ್ಥಸ್ನಾನ ಮಾಡಲು ಆಸ್ಪದ ನೀಡಲಾಗಿದೆ.