ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿರುವ ಅನಾಮಿಕ ದೂರುದಾರನ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಮಾಹಿತಿ ನೀಡಿದ್ದಾರೆ. ದೂರುದಾರನ ನಟೋರಿಯಸ್ ಕೃತ್ಯಗಳಿಂದಾಗಿ ಧರ್ಮಸ್ಥಳದಿಂದ ಹೊರಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು (ಜು.31): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಅನಾಮಿಕ ದೂರುದಾರ ಗುರುತಿಸಿರುವಂತಹ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ . ಈ ನಡುವೆ ಧರ್ಮಸ್ಥಳ ಸುತ್ತ ಶವಗಳನ್ನ ಹೂತಿಟ್ಟಂತಹ ಆರೋಪ ಮಾಡಿರುವ ದೂರುದಾರ ಯಾರು ಅನ್ನೋದು ಧರ್ಮಸ್ಥಳದ ಜನರಿಗೆ ಗೊತ್ತಿದೆ. ನಟೋರಿಯಸ್ ಕೆಲಸ ಮಾಡಿದ್ದಕ್ಕೆ ಆತನನ್ನು ಇಲ್ಲಿಂದ ಹೊರಹಾಕಲಾಗಿತ್ತು ಎಂದು ಧರ್ಮಸ್ಥಳ ಗ್ರಾ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡ ಹೇಳಿದ್ದಾರೆ.
ಕಾನೂನು ಪ್ರಕಾರವಾಗಿ ಏನನ್ನು ಮಾಡಬೇಕು ಅದನ್ನೆಲ್ಲಾ ಈ ಹೆಣಗಳ ಹೂತ ಪ್ರಕರಣದಲ್ಲಿ ಮಾಡಲಾಗಿದೆ. ಯುಡಿಆರ್, ಪೋಸ್ಟ್ ಮಾರ್ಟಮ್, ಪೊಲೀಸರು, ಶವ ಹೂಳುವುದು, ಒಂದು ವೇಳೆ ಶವ ಹೂಳಲಿಲ್ಲ ಎಂದಾದಲ್ಲಿ ಅವರ ಅಡ್ರೆಸ್ ಸಿಕ್ಕಿದ್ದಲ್ಲಿ ಅಲ್ಲಿಗೆ ಹೆಣವನ್ನು ಕಳಿಸಿಕೊಡುವುದು ಎಲ್ಲಾ ಕೆಲಸವನ್ನು ಇದರಲ್ಲಿ ಮಾಡಲಾಗಿದೆ. ಹಾಗೇನಾದರೂ ಅಸಹಜ ಸಾವುಗಳಾದಲ್ಲಿ ಯಾರ ಪರಿಚಯವೂ ಇಲ್ಲದೇ ಸತ್ತು ಎಂದಾಗಿ ಇಲ್ಲೇ ಯುಡಿಆರ್ ಮಾಡಿ ಹೂಳುವಂಥ ವ್ಯವಸ್ಥೆ ಇದೆ. ಇದು ಕಾನೂನು ಪ್ರಕಾರವೇ ಆಗುತ್ತದೆ. ಆಗ ಅಲ್ಲೊಬ್ಬ ಬಂದು ಇಲ್ಲಿ ಸಾವಿರಾರು ಜನರು ಸತ್ತಿದ್ದಾರೆ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಅಂತಾ ಹೇಳಿದ್ರೆ, ಈ ನೆಲದಲ್ಲಿ ಏನು ಮಹಾಭಾರತ ಯುದ್ಧ ಆಗಲಿಲ್ಲ. ಅವನು ಹೇಳಿದಷ್ಟು ಹೆಣ ಹೂತಿದ್ದಾರೆ ಎಂದರೆ ಇಲ್ಲಿ 2ನೇ ಮಹಾಯುದ್ಧವೂ ಆಗಿರಲಿಲ್ಲ ಎಂದಿದ್ದಾರೆ.
ಒಂದು ನಾಯಿಯನ್ನು ಹೂಳಬೇಕಾದರೂ ಎರಡು ಜನ ಬೇಕು. ಅದು ಹೇಗೆ ಅವನು ನೂರಾರು ಹೆಣ ಹೂತಿದ್ದಾನೆ ಎಂದು ಹೇಳುತ್ತಾನೋ ದೇವರೇ ಬಲ್ಲ. ವಾಸ್ತವ ಏನೆಂದರೆ ದೂರು ನೀಡಿರುವ ಈ ಅನಾಮಿಕ ವ್ಯಕ್ತಿ ತಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದಾನೆ ಅಂತಾ ಹೇಳಿದ್ದಾನೆ. ಈಗಾಗಲೇ ಅವರ ವಕೀಲರು ಮೊದಲಿಗೆ ಪ್ರೆಸ್ ರಿಲೀಸ್ ನೀಡಿದ್ದಾಗ ಇಂತ ವ್ಯಕ್ತಿ ನನ್ನ ಹತ್ರ ಬಂದಿದ್ದಾನೆ. ಧರ್ಮಸ್ಥಳ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾನೆ. ಅವನ ಪರಿಚಯ ನಮಗೆ ಇದೆ. ಅವನಿಗೆ ಈಗ ಅವಕಾಶ ಕೊಟ್ಟರೆ, ರಕ್ಷಣೆ ಕೊಟ್ಟರೆ ಎಲ್ಲೆಲ್ಲಿ ಹಣ ಹೂತಿದ್ದೇನೆ ಅನ್ನೋದನ್ನು ತೋರಿಸುತ್ತಾನೆ ಎಂದಿದ್ದ.
ಎಲ್ಲಾ ಹೆಣವನ್ನು ನಾನೇ ಹೂತಿದ್ದು, ಅಲ್ಲಿನ ಮ್ಯಾನೇಜರ್ಸ್ ಹೆದರಿಗೆ ಈ ಕೆಲಸ ಮಾಡಿದ್ದಾರೆ. ಪೊಲೀಸ್ ಅವರು ಬರಲೇ ಇಲ್ಲ ಎಂದು ಹೇಳಿದ್ದಾರೆ.ನಾವು ಈ ವ್ಯಕ್ತಿಯನ್ನು ನೋಡುವಾಗ ಎಲ್ಲಿರಿಗೂ ಗೊತ್ತಿದೆ ಆತ ಯಾರು ಅನ್ನೋದು. ನಾನು ಅದನ್ನು ನಿಮಗೆ ರಿವಿಲ್ ಮಾಡುತ್ತಿಲ್ಲವಷ್ಟೇ. ಧರ್ಮಸ್ಥಳದಲ್ಲಿ ಇರುವ ಎಲ್ಲರಿಗೂ ಆ ವ್ಯಕ್ತಿ ಯಾರು ಅನ್ನೋದು ಗೊತ್ತಿದೆ.
ಸುಮಾರು ವರ್ಷಗಳ ಹಿಂದೆ. ಒಂದು ಅನಾಮಿಕ ಹೆಣ ಇದೆ. ಅದನ್ನು ಹೂಳಬೇಕು ಎಂದು ಆತನೇ ಪೊಲೀಸ್‌ಅವರಿಗೆ ಬರೆದ ಪತ್ರ ನನ್ನಲ್ಲಿ ಇದೆ. ಮಾಧ್ಯಮಗಳು ಬಯಸಿದ್ದರೆ ಈ ಪತ್ರವನ್ನು ನಾನು ಕೊಡುತ್ತೇನೆ.
ಆ ಅನಾಮಿಕ ವ್ಯಕ್ತಿ ಇಲ್ಲಿಯವರೆಗೂ ಸುಳ್ಳನ್ನೇ ಹೇಳಿದ್ದಾನೆ. ಮೊದಲಿಗೆ ಪೊಲೀಸರು ಪರಿಚಯ ಇದ್ದಿರಲಿಲ್ಲ ಅಂದ. ಬಳಿಕ ನನ್ನಿಂದ ಒತ್ತಾಯಪೂರ್ಕವಾಗಿ ಈ ಕೆಲಸ ಮಾಡಿದ್ರು ಅಂದ. ಬಳಿಕ ಧರ್ಮಸ್ಥಳದಿಂದ ನಾನು ಪ್ರಾಣಭಯದಿಂದ ಓಡಿ ಹೋದೆ ಎಂದಿದ್ದಾನೆ. ಓಡಿ ಹೋಗದೇ ಇದ್ರೆ ನನ್ನನ್ನು ಕೊಲೆ ಮಾಡುವ ಸಾಧ್ಯತೆ ಇತ್ತು ಎಂದಿದ್ದಾರೆ. ನೀವು ಈಗಲೇ ಧರ್ಮಸ್ಥಳಕ್ಕೆ ಹೋಗಿ ರೆಕಾರ್ಡ್ ತೆಗೆಯಿರಿ. ಆ ವ್ಯಕ್ತಿಯನ್ನು 2014ರಲ್ಲೇ ಎಲ್ಲಾ ಸಂಬಳವನ್ನು ಚುಕ್ತಾ ಮಾಡಿ, ಅವನಿಗೆ ಏನು ಕೊಡಬೇಕಿತ್ತೋ ಅದನ್ನೆಲ್ಲಾವನ್ನು ಕೊಟ್ಟು ನೀನು ಕೆಲಸಕ್ಕೆ ಬರೋದು ಬೇಡ ಅಂತಾ ಹೇಳಿ ಕಳಿಸಿದ್ದು ಯಾಕೆ ಅನ್ನೋದನ್ನು ಕೇಳಿ. ಆತ ನಟೋರಿಯಸ್ ಪರ್ಸನ್. ಅವರು ಹೆಣಗಳ ಮೇಲಿದ್ದ ಚಿನ್ನವನ್ನ ಹಣವನ್ನ ಕದಿಯುತ್ತಿದ್ದ. ಹೊಳೆಗೆ ನುಗ್ಗಿ ಹೊಳೆಯಿಂದ ಚಿನ್ನ ತೆಗೆಯುತ್ತಿದ್ದ ಈ ಆರೋಪಗಳು ಆತನ ಮೇಲಿದ್ದವು.
ಆ ವ್ಯಕ್ತಿ ಯಾರು ಅನ್ನೋದು ಗೊತ್ತು. ಆತ ಧರ್ಮಸ್ಥಳದಿಂದ ಓಡಿ ಹೋಗಿರುವುದಲ್ಲ. ಕ್ಷೇತ್ರದಿಂದ ಅವನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿರೋದು. ಅವನ ನಟೋರಿಯಸ್ ಕೃತ್ಯಗಳೇ ಇದಕ್ಕೆ ಕಾರಣ ಎಂದು ಕೇಶವ ಗೌಡ ಹೇಳಿದ್ದಾರೆ.
