Asianet Suvarna News Asianet Suvarna News

ಜೆಡಿಎಸ್ ಕಾರ್ಯಕರ್ತರ ಹರಕೆ : ಧರ್ಮಸ್ಥಳ ಪಾದಯಾತ್ರೆ

ಕಳೆದ ಮೇ ಮಾಸದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ.ಟಿ. ಕೃಷ್ಣಪ್ಪ ಅವರು ಚುನಾವಣೆಯಲ್ಲಿ ಗೆದ್ದರೆ ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವೆವು ಎಂದು ಹರಕೆ ಹೊತ್ತಿದ್ದ ಸಿಎಸ್ ಪುರ ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಹರಕೆಯಂತೆ ಬೆಂಗಳೂರಿನ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಧರ್ಮಸ್ಥಳದವರೆಗೂ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

Dharamsthal Padayatra of M.T.  Krishnappa fans  snr
Author
First Published Mar 2, 2024, 10:23 AM IST

ತುರುವೇಕೆರೆ: ಕಳೆದ ಮೇ ಮಾಸದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ.ಟಿ. ಕೃಷ್ಣಪ್ಪ ಅವರು ಚುನಾವಣೆಯಲ್ಲಿ ಗೆದ್ದರೆ ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವೆವು ಎಂದು ಹರಕೆ ಹೊತ್ತಿದ್ದ ಸಿಎಸ್ ಪುರ ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಹರಕೆಯಂತೆ ಬೆಂಗಳೂರಿನ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಧರ್ಮಸ್ಥಳದವರೆಗೂ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ಜಗದೀಶ್, ರಾಮು ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ತಾಲೂಕಿನ ಗಡಿಭಾಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನರಸಿಂಹಮೂರ್ತಿ, ಎಂ.ಟಿ. ಕೃಷ್ಣಪ್ಪ ಅವರು ಮೂರು ಬಾರಿ ಶಾಸಕರಾಗಿದ್ದರು.

ಅವರ ಅವಧಿಯಲ್ಲಿ ಸಿಎಸ್ ಪುರ ಹೋಬಳಿ ಸೇರಿದಂತೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯನ್ನು ಕಂಡಿತ್ತು. ಜೆಡಿಎಸ್ ಕಾರ್ಯಕರ್ತರು ಕಳೆದ ಮೇ ಯಲ್ಲಿ ನಡೆದ ಚುನಾವಣೆಗೂ ಮುನ್ನ ಧರ್ಮಸ್ಥಳಕ್ಕೆ ಹೋಗಿ ಅಲ್ಲೇ ಪಾದಯಾತ್ರೆಯ ಹರಕೆ ಹೊತ್ತು ಬಂದಿದ್ದೆವು ಎಂದು ಹೇಳಿದರು.

ನೂರಾರು ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಕಳೆದ ನಾಲ್ಕು ದಿನಗಳ ಹಿಂದೆಯೇ ಪಾದಯಾತ್ರೆ ನಡೆಸುತ್ತಿದ್ದೇವೆ. ಮಾರ್ಚ್ ೫ ರಂದು ಧರ್ಮಸ್ಥಳ ತಲುಪಿ ನಮ್ಮೆಲ್ಲರ ಹರಕೆಯನ್ನು ತೀರಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿಎಸ್ ಪುರ ಹೋಬಳಿ ಜೆಡಿಎಸ್ ನ ಅಧ್ಯಕ್ಷ ಜಗದೀಶ್, ಮುಖಂಡರಾದ ರಾಮು ಸೇರಿದಂತೆ ಹಲವರು ಇದ್ದರು.

Follow Us:
Download App:
  • android
  • ios