ಅಂಜನಾದ್ರಿ ಪರ್ವ​ತ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಬಾಬಾ ಕಸರತ್ತು

ಜಿಲ್ಲಾಡಳಿತ ಕಣ್ಣು ತಪ್ಪಿಸಿ ಟ್ರಸ್ಟ್‌ರಚನೆ| ಸ್ಥಳೀಯರ ವಿರೋಧದ ಮಧ್ಯ ಪೀಠಾ​ಧಿ​ಪತಿ ಎಂದು ಸ್ವಯಂ| ಭಕ್ತರ ​ಆಕ್ರೋಶಕ್ಕೆ ಕಾರಣವಾದ ವಿದ್ಯಾದಾಸ ಬಾಬಾ ಪೀಠಾಧಿಪತಿ| 

Devotees Unhappy for Vidyadas Baba Decision in Anjanadri Hill in Koppal grg

ರಾಮಮೂರ್ತಿ ನವಲಿ

ಕೊಪ್ಪಳ(ಜ.13): ಜಿಲ್ಲೆಯ ಐತಿಹಾಸಿಕ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತದ ಆಂಜನೇಯಸ್ವಾಮಿ ದೇವಸ್ಥಾನವನ್ನು ಅರ್ಚಕರಾಗಿದ್ದ ವಿದ್ಯಾದಾಸಾ ಬಾಬಾ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದಾರೆ.

ಎರಡು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ವಿದ್ಯಾದಾಸಾ ಬಾಬಾ ಅವ​ರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರನ್ನು ತೆಗೆದು ಹಾಕಿ ಸರಕಾರ ತನ್ನ ವ್ಯಾಪ್ತಿಗೆ ಪಡೆದು ಕೊಂಡಿತ್ತು.

ನಂತರ ಬಾಬಾ ಅವರು ನ್ಯಾಯಾಲಯ ಮೊರೆ ಸೇರಿ ಪ್ರಮುಖರನ್ನು ಭೇಟಿಯಾಗಿ ಹಲವಾರು ವರ್ಷಗಳಿಂದ ಅಂಜನಾದ್ರಿ ಪರ್ವತದಲ್ಲಿ ಸೇವೆ ಸಲ್ಲಿಸುತ್ತ ಧಾರ್ಮಿಕ ಮತ್ತು ಸಹಸ್ರಾರು ಭಕ್ತರು ಆಗಮಿಸಿ ಆಂಜನೇಯ ದರ್ಶನ ಪಡೆಯುವುದಕ್ಕೆ ಶ್ರಮಿಸಿದ್ದೇನೆ. ಹೀಗಾ​ಗಿ, ಅಂಜನಾದ್ರಿ ಪರ್ವತ ಪ್ರವೇಶ ಮಾಡಲು ಅವಕಾಶ ನೀಡಬೇಕು ಎಂದು ಕೋರಿದ್ದರು. ನ್ಯಾಯಲಯ ಅವರಿಗೆ ಪೂಜೆ ಮಾತ್ರ ನಡೆಸಿಕೊಂಡು ಬರಬೇಕು. ಅಲ್ಲಿ ವಾಸ್ತವ್ಯಕ್ಕೆ ಅವಕಾಶ ಇಲ್ಲ ಎಂದು ಸೂಚನೆ ನೀಡಿತ್ತು. ಇದರಿಂದಾಗಿ ವಿದ್ಯಾದಾಸ ಬಾಬಾ ಕೆಲ ದಿನಗಳ ಕಾಲ ಪರ್ವತ ಏರಿ ಪೂಜೆ ನಡೆಸಿದರು. ನಂತರ ಮತ್ತೆ ಸ್ಥಳೀಯರ ಗೊಂದಲದಿಂದಾಗಿ ದೂರ ಉಳಿದಿದ್ದರು.

ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ.. ಜೈ ಆಂಜನೇಯ

ಕಸರತ್ತು:

ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಕಾಣಿ​ಕೆ ಸಂಗ್ರಹವಾಗುತ್ತದೆ. ಈಗಾಗಲೇ ಮುಜರಾಯಿ ಇಲಾಖೆಯವರು ಈ ದೇವಸ್ಥಾನದ ನಿರ್ವಹಣೆ ನಡೆಸುತ್ತಿದ್ದು, ಲಾಕ್‌​ಡೌನ್‌ತೆರ​ವಿನ ನಂತರ ದೇವಸ್ಥಾನದ ಬಾಗಿಲು ತೆರೆದಿದ್ದ ಸಂದರ್ಭದಲ್ಲಿ ಹುಂಡಿಯಲ್ಲಿ ಲಕ್ಷಾಂತರ ರುಪಾಯಿ ಸಂಗ್ರಹವಾಗಿರುವುದು ಗಮನಕ್ಕೆ ಬಂದಿತು.

ಇದರ ಮೇಲೆ ಕಣ್ಣಿಟ್ಟಿ​ರು​ವ ಬಾಬಾ ಮತ್ತೆ ಹೇಗಾದರೂ ಮಾಡಿ ಅಂಜನಾದ್ರಿ ಪರ್ವತವನ್ನು ತನ್ನ ವ್ಯಾಪ್ತಿಗೆ ಪಡೆದುಕೊಳ್ಳಬೇಕು ಎಂದು ಹುನ್ನಾರ ನಡೆಸಿದ್ದಾರೆ. ಇದರ ಬಗ್ಗೆ ಬಾಬಾ ಅವರೇ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರಕಾರ ದೇವಸ್ಥಾನವನ್ನು ತನ್ನ ವ್ಯಾಪ್ತಿಗೆ ಪಡೆದ ನಂತರ ಭಕ್ತರಿಗೆ ಅನುಕೂಲ ಕಲ್ಪಿಸಲು ವಿಫಲವಾಗಿದೆ ಎಂದು ನೇರವಾಗಿ ಆರೋಪಿಸಿದ್ದು, ಈ ಮಧ್ಯೆ ಬಾಬಾ ಅಂಜನಾದ್ರಿಯನ್ನು ತನ್ನ ವ್ಯಾಪ್ತಿಗೆ ಸೆಳೆದು ಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಟ್ರಸ್ಟ್ ‌ರಚನೆ:

ಈಗಾಗಲೇ ಅಂಜನಾದ್ರಿ ದೇವಸ್ಥಾನದ ಹೆಸರಿನಲ್ಲಿ ಸ್ಥಳೀಯರು ಎರಡು ಟ್ರಸ್ಟ್‌ಗಳನ್ನು ರಚನೆ ಮಾಡಿಕೊಂಡಿದ್ದರೆ, ಕೆಲ ಗ್ರಾಮದವರೂ ಟ್ರಸ್ಟ್‌ರಚನೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ವಿದ್ಯಾದಾಸ ಬಾಬಾ ಅಂಜನಿ ಪರ್ವತ ಲಾರ್ಡ್‌ಹನುಮಾನ್‌ವಿಕಾಸ್‌ಟ್ರಸ್ಟ್‌ಎಂದು ರಚನೆ ಮಾಡಿ ಇದರ ಅಡಿಯಲ್ಲಿ ಕೆಲ ಕಾರ್ಯಕ್ರಮ ನಡೆ​ಸ​ಲು ಮುಂದಾಗಿದ್ದರು. ಕಳೆದ ಎರಡು ದಿನಗಳ ಹಿಂದೆಯೂ ಸಹ ಇದೇ ಟ್ರಸ್ಟ್‌ನ ಹೆಸರಿನಲ್ಲಿ ರಾಜ್ಯಪಾಲರು ಆಗಮಿಸುವ ಅಮಂತ್ರಣ ಪತ್ರಿಕೆ ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಸ್ಥಳೀಯರೂ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ಈ ಮಧ್ಯ ಈಗ ಟ್ರಸ್ಟ್‌ರಚನೆ ವಿವಾದಕ್ಕೆ ಕಾರಣವಾಗಿದೆ.

ಪೀಠಾಧಿಪತಿ ಸ್ವಯಂ ಘೋಷ​ಣೆ:

ಮಠ​​-ಮಾನ್ಯಗಳಲ್ಲಿ ಪೀಠಾಧಿಪತಿಗಳಿರುವುದು ಸಾಮಾನ್ಯ. ಇಲ್ಲಿಯ ವಿದ್ಯಾದಾಸ ಬಾಬಾ ಪೀಠಾಧಿಪತಿ ತಾವೇ ಘೋಷಿಸಿ​ಕೊಂಡು​ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿ​ಸಿ​ದ್ದಾ​ರೆ. ಇದು ಭಕ್ತರ ​ಆಕ್ರೋಶಕ್ಕೆ ಕಾರಣವಾಗಿದೆ. ಈ ದೇವಸ್ಥಾನ ಸರಕಾರದ ವ್ಯಾಪ್ತಿಯಲ್ಲಿರು​ವುದರಿಂದ ಪೀಠಾಧಿಪತಿಗಳು ಇಲ್ಲ. ಆದರೆ, ಈಗ ಹೊಸದಾಗಿ ಪೀಠಾಧಿಪತಿ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಅಂಜನಾದ್ರಿ ಪರ್ವತದ ಆಂಜನೇಯಸ್ವಾಮಿ ಪೂಜೆ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ಅರ್ಹರಾಗಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಇಲ್ಲ. ಕಳೆದ ಎರಡು ದಿನಗಳ ಹಿಂದೆ ರಾಜ್ಯಪಾಲರು ಆಗಮಿಸಿದ್ದ ಸಂದರ್ಭದಲ್ಲಿ ಬಾಬಾ ಅವರು ಉಪಸ್ಥಿತರಿದ್ದರು. ಈ ಎಲ್ಲ ಕಾಯಕ್ರಮವನ್ನು ಜಿಲ್ಲಾಡಳಿತ ನಡೆಸಿಕೊಟ್ಟಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್‌ವಿಕಾಸ್‌ಕಿಶೋರ್‌ಹೇಳಿದ್ದಾರೆ. 

ಅಂಜನಾದ್ರಿ ದೇವಸ್ಥಾನ ಸರಕಾರದ ವ್ಯಾಪ್ತಿಯಲ್ಲಿ ಇರಲಿ. ಜಿಲ್ಲಾಡಳಿತ ತನ್ನ ಹತೋಟಿಗೆ ತೆಗೆದುಕೊಂಡೆರೆ ಸರಿಯಾದ ರೀತಿಯಲ್ಲಿ ಲೆಕ್ಕ ಪತ್ರ ಇರುತ್ತದೆ. ವಿದ್ಯಾದಾಸ ಬಾಬಾ ಹತೋಟಿಗೆ ದೇವಸ್ಥಾನ ಪಡೆದರೆ ಭಕ್ತರಲ್ಲಿ ವಿಶ್ವಾಸ ಹೋಗುತ್ತದೆ. ಕಾರಣ ಪ್ರತ್ಯೇಕ ಟ್ರಸ್ಟ್‌ರಚನೆ ಮಾಡದೆ ಸರಕಾರ ದೇವಸ್ಥಾನದ ಆಡಳಿತ ನಿರ್ವಹಿಸಲಿ ಎಂದು ಆನೆಗೊಂದಿ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios